ಹರಿದ ಬಟ್ಟೆಯಲ್ಲಿ ಬಂದಿದ್ದ ವಿ.ಪ. ಸಭಾಪತಿ ಬಸವರಾಜ್‌ ಹೊರಟ್ಟಿ…!

ನಿಮಗೆಲ್ಲಾ ತಿಳಿದಿರುವಂತೆ ಮೌಲ್ಯಾಧಾರಿತ ರಾಜಕಾರಣ ಪ್ರತಿಪಾದಿಸಿದ ರಾಮಕೃಷ್ಣ ಹೆಗಡೆ ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಶ್ರೇಷ್ಠರು. ಹೆಗಡೆ ಅವಧಿಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ರಾಮಕೃಷ್ಣ ಹೆಗಡೆಯವರ ನೇತೃತ್ವ, ನಾಯಕತ್ವ ಒಪ್ಪಿದ್ದರು. ಈ ಹೆಗಡೆ ಪಾಳಯದಲ್ಲಿ ಬೆಳೆದ ಬೊಮ್ಮಾಯಿ,ಅಜಯಕುಮಾರ, ಸೇರಿದಂತೆ ಅನೇಕ ನಾಯಕರಲ್ಲಿ ಈ ಬಸವರಾಜ್‌ ಹೊರಟ್ಟಿ ಕೂಡಾ ಒಬ್ಬರು.

ಆಗ ಚಿಕ್ಕ ನಾಯಕರಾಗಿದ್ದ ಹೊರಟ್ಟಿ ಮತ್ತವರ ಸ್ನೇಹಿತರು ಒಂದು ದಿನ ಸ್ಪೋಟ್ಸ್‌ ಬಟ್ಟೆ ಥರದ ಟೀಶರ್ಟ್‌ ತೊಟ್ಟು ವಿಧಾನಸೌಧಕ್ಕೆ ಬಂದಿದ್ದರಂತೆ. ಈ ವಿದ್ಯಮಾನ ಗ್ರಹಿಸಿದ ರಾಮಕೃಷ್ಣ ಹೆಗಡೆ ತನ್ನ ಸಹಾಯಕರಿಗೆ ಹೇಳಿ ಇವರಿಗೆ ನಾಲ್ಕೈದು ಜೊತೆ ಬಟ್ಟೆಯಾಗುವಷ್ಟು ವಸ್ತ್ರ ಖದೀದಿಸಿ ಪರಿಚಿತ ಟೈಲರ್‌ ಬಳಿ ಜುಬ್ಬಾ ಹೊಲಿಸಲು ಹೇಳಿಬಿಟ್ಟರಂತೆ. ಕೆಲವು ದಿವಸಗಳ ನಂತರ ಈ ಬಟ್ಟೆಗಳನ್ನು ಪಡೆದ ಹೊರಟ್ಟಿ ಇವುಗಳನ್ನು ಧರಿಸುತ್ತಾ ಮುಂದುವರಿದರು.

ಈ ವರ್ಷ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವ. ಈ ಸತಮಾನೋತ್ಸವ ಉದ್ಘಾಟನೆಗೆ ಸಿದ್ದಾಪುರಕ್ಕೆ ಬಂದಿದ್ದ ಹೊರಟ್ಟಿಯವರು ಹಳೆಯದಾದ ಒಂದು ಶರ್ಟ್‌ ಜೊತೆಪ್ಯಾಂಟ್‌ ಧರಿಸಿ ಬಂದು ಹೆಗಡೆ ಶತಮಾನೋತ್ಸವ ವರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹೆಗಡೆಯವರೊಂದಿಗಿನ ಅನುಭವ, ನೆನಪು ಸ್ಮರಿಸಿದ ಅವರು ಇದು ನೋಡಿ ಇಂದು ಹರಿದ ಬಟ್ಟೆ ಧರಿಸಿ ಬಂದಿದ್ದೇನೆ. ಮುಂಜಾನೆ ನನ್ನ ಸಹಾಯಕ ಸರ್‌ ಇದು ನಿಮ್ಮ ಗುರು ಹೆಗಡೆಯವರ ನೆನಪಿನ ಬಟ್ಟೆ ಆದರೆ ಇದು ತುಸು ಹರದೈತಿ ಅಂದರಂತೆ. ಹೋಗಲಿ ಬಿಡು ಹರದೈತಲ್ಲ ತೊಂದ್ರೆ ಇಲ್ಲ ಅದನ್ನೇ ಹಾಕ್ಕಿ ಇವತ್ತಿನ್‌ ಕಾರ್ಯಕ್ರಮ ಮಾಡಿ ಬಿಡೋಣು ಅಂದರಂತೆ. ತಾವು ತೊಟ್ಟಿದ್ದ ಹರಿದ ಬಟ್ಟೆ ತೋರಿಸಿ ಹೆಗಡೆಯವರ ಗುಣಗಾನ ಮಾಡಿದ ಸ್ಪೀಕರ್‌ ಹೊರಟ್ಟಿ ಹೆಗಡಯವರ ವಿಶಿಷ್ಟ ವ್ಯಕ್ತಿತ್ವ ಬಣ್ಣಿಸಿ ಅವರ ನೆನಪಿಗೆ ಅವರೇ ಕೊಡಿಸಿದ್ದ ಬಟ್ಟೆ ಹರಿದರೂ ಧರಿಸಿ ಬಂದಿದ್ದೇನೆ. ಹೆಗಡೆ ಮತ್ತು ನಮ್ಮ ಪ್ರೀತಿ-ವಿಶ್ವಾಸ ಅಂಥದ್ದು ಎಂದು ತಮ್ಮ ಅನುಭವ ಮೆಲುಕು ಹಾಕಿ ಗುರು ಹೆಗಡೆಯವರ ಆತ್ಮಕ್ಕೆ ಚಿರಶಾಂತಿ ಕೋರಿ ಹಗುರಾದಂತೆ ಕಂಡರು. & ನನ್ನೊಂದಿಗೆ ಅಲ್ಲಿದ್ದ ಹಲವು ಜನರ ದೃಷ್ಟಿಯಲ್ಲಿ ಸ್ಪೀಕರ್‌ ಗಿಂತ ಎತ್ತರದ ಕುರ್ಚಿಯಲ್ಲಿ ಕುಳಿತ ನಾಯಕರಾಗಿ ಕಂಗೊಳಿಸಿದರು ಹೊರಟ್ಟಿ. ( ಕನ್ನೇಶ್‌ ಕೋಲಶಿರ್ಸಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *