ನಟ ಪ್ರಕಾಶ್ ರಾಜ್… ಮತ್ತು ಆರೆಸ್ಸೆಸ್‌ ಪ್ರಾಯೋಜಿತ ಹಿಂದುತ್ವ!


ಜನಪರವಾಗಿ ಹೋರಾಟ ಮಾಡುತ್ತಿರುವ ನಟ ಪ್ರಕಾಶ್ ರಾಜ್… ಶಿರಸಿ ಕಾರ್ಯಕ್ರಮಕ್ಕೆ ಬಂದು ಹೋದ ಮೇಲೆ ವೈದಿಕ ಮತಾಂಧರು ಏನು ಮಾಡಿದ್ದರು ಗೊತ್ತಲ್ಲ ನಿಮಗೆ… ಆ ಸಗಣಿ, ದನ ಮತ್ತವರ ದನದ ಸೆಗಣಿ, ಉಚ್ಚೆ ಎಲ್ಲವೂ ಭಾರತದ್ದಲ್ಲ… ಬ್ರಿಟೀಷರಿಗಿಂತ ಮೊದಲು ವಲಸೆ ಬಂದ ವೈದಿಕರು ಈ ಗೋಮೂತ್ರ, ಸೆಗಣಿ ಮಾನಸಿಕತೆಯನ್ನು ಭಾರತೀಯ ಮೂಲನಿವಾಸಿ ಬಹುಸಂಖ್ಯಾತರಲ್ಲಿ ತುಂಬಲು (ವಿದೇಶಿ ವಲಸಿಗ) ವೈದಿಕರು ಬಳಸಿದ ತಂತ್ರ ಅದು.

ಗೋ ಭಕ್ಷಕ‌ ಭಾರತೀಯ ಮೂಲನಿವಾಸಿಗಳಿಗೆ ಗೋವಿನಲ್ಲಿ ದೇವರಿದ್ದಾರೆ ಎಂದು ನಂಬಿಸಿದ್ದೂ ಇದೇ ವಿದೇಶಿ ಮಾನಸಿಕತೆ…

ಇರಲಿ, ಪ್ರಕಾಶ್ ರೈ ಘಟನೆ ನಂತರ ನಾವು ಜಿಗ್ನೇಶ್ ಮೇವಾನಿ ಕರೆಸಿದ್ದೆವಲ್ಲ ಆ ಕಾರ್ಯಕ್ರಮಕ್ಕೆ ರಾಘವೇಂದ್ರ ಮಠದ ಸಭಾಭವನ ನಿಗದಿ ಪಡಿಸಲಾಗಿತ್ತು… Rss ವೈದಿಕರ ಚಿತಾವಣೆ ಯಿಂದ ರಾಘವೇಂದ್ರ ಮಠ ಈ ಕಾರ್ಯಕ್ರಮಕ್ಕೆ ಸಭಾಭವನ ನೀಡಲು ನಿರಾಕರಿಸಿತು. ನಂತರ ಕೊಂಕಣಿಗಳ ವಿದ್ಯಾರಾಜದಲ್ಲೂ ಇದೇ ತೊಂದರೆ…ಕಾರ್ಯಕ್ರಮನಿಯೋಜನೆ ಆಗಿದೆ. ವಿಪರೀತ ಬಿಜಿ ಇರುವ ಅಂದಿನ ಯುವ ನಾಯಕ ಇಂದಿನ ಶಾಸಕ ಮೇವಾನಿ ದಿನಾಂಕ ಬೇರೆ ನಿಗದಿ ಆಗಿದೆ. ಉಳದದ್ದು ಎರಡ್ಮೂರು ದಿನ ಸಂಘಟಕಮಿತ್ರ ರಮೇಶ್‌ ಜೊತೆಗೆ ನನಗೂ ಕಸಿವಿಸಿ ಶಿರಸಿಯಂಥ ಶೂದ್ರ ಬಾಹುಳ್ಯದ ಊರಿನಲ್ಲಿ ವೈದಿಕರ ಆಟೋಟಾಪಗಳ ಬಗ್ಗೆ ಬೇಸರ. ನಂತರ ಡಾ. ಮೆಹಬೂಬ್‌ ನಮ್ಮ ಶಾದಿ ಮಹಲ್‌ ನಲ್ಲಿ ಕಾರ್ಯಕ್ರಮ ಮಾಡೋಣ ಎಂದು ಆಮಂತ್ರಿಸಿದರು. ಒಂದೆರಡು ದಿನದ ಕಾಲಾವಕಾಶದಲ್ಲಿ ವೈದಿಕ ಮನಸ್ಥಿತಿಯ ಆರೆಸ್ಸೆಸ್‌ ಕೊಳಕರ ಮಧ್ಯೆ ನಮ್ಮ ಕಾರ್ಯಕ್ರಮ ಕಸ್ತೂರಬಾ ನಗರದ ಶಾದಿ ಮಹಲ್‌ ನಲ್ಲಿ ನಡೆಯಿತು.

ಶಿರಸಿಯ ಮಹಾಬ್ರಾಮಣ್ಯದ ಮನಸ್ಥಿತಿಯ ನಡುವೆ ಜಯರಾಮ ಹೆಗಡೆ, ಸುಬ್ರಾಯ ಮತ್ತಿಹಳ್ಳಿ ಸೇರಿದಂತೆ ಕೆಲವೇ ಕೆಲವು ಬ್ರಾಹ್ಮಣ ಪ್ರಗತಿಪರರನ್ನು ಬಿಟ್ಟರೆ ನಮ್ಮ ಕಾರ್ಯಕ್ರಮದಲ್ಲಿ ಸೋ ಕಾಲ್ಡ್‌ ಹಿಂದೂಗಳು ನಾಪತ್ತೆ!

ನನ್ನ ಪ್ರಾಸ್ತಾವಿಕ ಭಾಷಣದಲ್ಲಿ ಈ ತೊಂದರೆ, ಬ್ರಾಮಣ್ಯದ ಅತಿರೇಕಗಳನ್ನು ವಿವರಿಸಿ ಶಿರಸಿಯಲ್ಲಿ ಬೆರಳೆಣಿಯಷ್ಟಿರುವ ಮತಾಂಧ ಹಿಂದುತ್ವವಾದಿಗಳು ನಮಗೆ ನಮ್ಮ ಜಾಗೆ ಎಲ್ಲಿ ಎಂದು ತೋರಿಸಿದರು ಮತ್ತು ನಮ್ಮ ಮುಸ್ಲಿಂ ಸ್ನೇಹಿತರು ತಮ್ಮ ಹೃದಾಯ ವೈಶಾಲ್ಯ ಮೆರೆದರು ಎಂದು ಕೃತಜ್ಞತೆ ತಿಳಿಸಿದೆ. ಚುನಾವಣೆ, ರಾಜಕಾರಣ,ಲಾಭವಿದ್ದಾಗ ನಾವೆಲ್ಲಾ ಹಿಂದೂ ಎನ್ನುವ ಫೇಕು ಪರಿವಾರ ಚುನಾವಣೆ, ತಮ್ಮ ದರ್ದು ಮುಗಿದ ನಂತರ ನೀವು ಹಿಂದೂ ನಾವು ಮುಂದು! ಎಂದು ಮುಂದುವರಿಯುತ್ತದೆ.

ಈ ವಿಚಾರ ನೆನಪಾದಾಗಲೆಲ್ಲಾ ಮೇಲ್ವರ್ಗ ಎನ್ನುವ ವೈದಿಕ ಗುಂಪು ಈ ದೇಶದ ಮೂಲನಿವಾಸಿ- ಬಹುಸಂಖ್ಯಾತರನ್ನು ಹೇಗೆ ನಡೆಸಿಕೊಂಡಿದೆ. ಮತ್ತು ನಡೆಸಿಕೊಳ್ಳುತ್ತಿದೆ ಎಂದು ಬೇಸರಿಸುವ ಜೊತೆಗೆ ಬ್ಯಾಂಕ್‌, ಸಹಕಾರಿ ಸಂಘ, ರಾಜಕಾರಣ, ಧಾರ್ಮಿಕ ವಿಚಾರ ಸೇರಿದಂತೆ ವೈದಿಕರ ಪ್ರಾಬಲ್ಯದ ಯಾವ ಕ್ಷೇತ್ರದಲ್ಲೂ ವೈದಿಕರು ತಮ್ಮ ಕುಟಿಲತೆ ಬಿಟ್ಟುಕೊಡುವುದಿಲ್ಲ. ಕೆಲವು ಅವಕಾಶವಾದಿಗಳು, ನಿಷ್ಪ್ರಯೋಜಕ ಅನಕ್ಷರಸ್ಥ ಗುಲಾಮರ ತಲೆಯಲ್ಲಿ ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮದ ವಿಷ ತುಂಬುವ ನಯವಂಚಕ ವೈದಿಕರು ಈ ಗುಲಾಮ ವಿವಕಶೂನ್ಯರ ಮೂರ್ಖತನದಿಂದ ಅನುಕೂಲ, ಅವಕಾಶ ಪಡೆದು ನಂತರ ಇವರ ಖಾಲಿ ತಲೆಯ ಮೇಲೆ ಹೊಲಸು ಮಾಡಿ ವೈದಿಕ ಗುಲಾಮರು ನಾಮರ್ಧ ಹೇಸಿಗೆಗಳಾಗಿ ಕಳೆದುಹೋಗುವಂತೆ ಮಾಡುತ್ತಾರೆ.

ವೈದಿಕರ ಗುಲಾಮರಿಗೆ ವೈದಿಕರ ದನ-ದೇವರು, ಧನಗಳೆಂದರೆ ವಿಶೇಶ ಪ್ರೀತಿ. ಈ ಹೇಸಿಗೆಗಳ ಮೂರ್ಖತನ ಬಳಸಿಕೊಳ್ಳುವ ವೈದಿಕರು ಬಹುಸಂಖ್ಯಾತರನ್ನು ಒಡೆದು ಆಳಿ ತಮ್ಮ ಬೇಳೆ ಬೇಯಿಸಿಕೊಂಡು ಗುಲಾಮರನ್ನು “ಚೂ..,. ಎಂದು ಎಸೆದು ಬಿಡುತ್ತಾರೆ. ಹೀಗೆ ಚೂ ಎಂದು ಎಸೆಯಲ್ಪಟ್ಟ ಮೂರ್ಖ ಗುಲಾಮರು ಶಿರಸಿ- ಯಲ್ಲಾಪುರಗಳಲ್ಲಿ ವಿಪರೀತವಾದರೆ ಜಿಲ್ಲೆ-ರಾಜ್ಯ ದೇಶಾದ್ಯಂತ ತುಂಬಿಹೋಗಿದ್ದಾರೆ. ಹಾಗಾಗಿ ಅಸಮಾನತೆ, ಧರ್ಮಾಂಧತೆಯ ಈ ಅವಕಾಶವಾದಿ ವೈದಿಕ ಮೇಲ್ವರ್ಗ ಭಾರತೀಯ ಬಹುಸಂಖ್ಯಾತರನ್ನು ಉಪಾಯದಿಂದ ಮೂರ್ಖರನ್ನಾಗಿಸುವ ಹಿಂದೆ ಅವರ ಹಿತವಿದೆ. ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಲೈಂಗಿಕತೆ ಸೇರಿದಂತೆ ಧೀರತನ-ವೀರತ್ವಗಳ ಮಾನದಂಡಗಳಲ್ಲಿ ಎಲ್ಲೂ ಸಲ್ಲದ ಈ ನಯವಂಚಕ ಪರಿವಾರ ಕುಟಿಲತೆಯಲ್ಲಿ ಪ್ರಭಾವಿ. ಇವರ ಎಲ್ಲಾ ಯತ್ನ-ಪ್ರಯತ್ನಗಳೂ ತಮ್ಮ ಹಿತ- ತಮ್ಮ ಮೇಲರಿಮೆ, ಸುಖ,ಅವಕಾಶಗಳಿಗೇ ಮೀಸಲು. ಇವರನ್ನು ನಂಬುವ ಕೆಲವರು ಒಂದು ಪಕ್ಷ- ಪರಿವಾರದ ಕಾಲಾಳುಗಳಾಗಿ ಇವರ ಸೇವೆಯಲ್ಲಿರುತ್ತಾರೆ. ನಂತರ ಇವರಿಂದ ಏಟು ತಿಂದು ನಮಗೆ ಗೊತ್ತಾಗಲೇ ಇಲ್ಲ ಎಂದು ತಮ್ಮ ಮೂರ್ಖತನ ಒಪ್ಪಿಕೊಳ್ಳುತ್ತಾರೆ.

ಈಗ ಇಂತಹ ಅವಿವೇಕಿಗಳ ಸಂಖ್ಯೆ ಸಾಮಾಜಿಕ ಜಾಲತಾಣದಲ್ಲಿ ಮಿತಿಮೀರಿದೆ. ನಕಲಿ ಖಾತೆ- ಫೇಕ್‌ ಪ್ರೋಫೈಲ್‌ ಗಳ ಮೂಲಕ ಕಾರ್ಯಾಚರಣೆ ಮಾಡುವ ಈ ದುಷ್ಟರ ಜೊತೆ ಕೆಲವು ವೈದಿಕರೂ ಬೇರೆ-ಬೇರೆ ಉಪನಾಮಗಳ ಮೂಲಕ ನಕಲಿ ಖಾತೆ- ಫೇಕ್‌ ಪ್ರೋಫೈಲ್‌ ಗಳಲ್ಲಿ ಹಿಂದುತ್ವದ ತಲೆ ಹಿಡಿಯುತ್ತಾ, ಅವರ ಸೇವೆಗಾಗಿ ಅನ್ಯರ ತೇಜೋವಧೆ ಗಿಳಿದಿದ್ದಾರೆ. ಇಂಥ ಮತಾಂಧ ದುಷ್ಟ ಶಕ್ತಿಗಳ ವಿರುದ್ಧ ಪೊಲೀಸ್‌ ದೂರಿನ ಅಭಿಯಾನ ಕೂಡಾ ನಡೆಯುತ್ತಿದೆ. ಇಂಥವರ ಸಂಘ ಭಾರತೀಯ ಮೂಲನಿವಾಸಿ ಬಹುಸಂಖ್ಯಾತರ ವಿದ್ಯಾರ್ಥಿ-ಯುವಜನತೆಯ ದಿಕ್ಕು ತಪ್ಪಿಸುವುದರಲ್ಲೂ ಮುಂದಿದ್ದಾರೆ. ಹಾಗಾಗಿ ವೈದಿಕೇತರ ಬಹುಸಂಖ್ಯಾತರಿಗೆ ನಿಮ್ಮ ಮಗ/ ಮಗಳು ಸಂಘಿಗಳ ಸಹವಾಸಕ್ಕೆ ಬಿದ್ದು ಮತಾಂಧ- ದುಷ್ಟ- ಅವಿವೇಕಿ ಆಗುತಿದ್ದಾನೋ? ದೇವರು-ಧರ್ಮ- ನಂಬಿಕೆಗಳ ಉಪಾಯದ ದುಷ್ಟ ಪರಿವಾರದ ಸಹವಾಸದಿಂದ ದೂರವಿದ್ದಾನೋ ತಿಳಿಯಲು ಸುಸಮಯ. ಜಾಗೃತರಾಗಿ… ಧರ್ಮಾಂಧತೆ, ಮೂಢನಂಬಿಕೆ ದೇಶವಿರೋಧಿ, ಮನುಷ್ಯತ್ವ ವಿರೋಧಿ ಈ ಸಂಘಿ ಅವಿವೇಕವನ್ನು ವಾರ್ವಜನಿಕರಲ್ಲಿ ತುಂಬುವ ಸಂಘ-ಸಂಸ್ಥೆಗಳು ಈ ದೇಶದ ಅಪಾಯಕಾರಿ ಘಟಕಗಳು ಎಂಬುದನ್ನು ಅರಿಯದಿದ್ದರೆ ಸಂಘ ನಿಮ್ಮ ಮುಂದಿನ ಜನಾಂಗವನ್ನು ನಾಶ ಮಾಡಲಿದೆ. ಕೋಟೆ ಸೂರೆ ಹೋದ ಮೇಲೆ ದಡ್ಡಿಯ ಬಾಗಿಲು ಹಾಕಿದರೆ ಪ್ರಯೋಜನವಿಲ್ಲ…

. ನಿಮ್ಮ ಪ್ರೀತಿಯ ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *