

ಬೀದಿ ನಾಯಿಗಳ ಕಾಟ ತಪ್ಪಿಸಲು ಅಗತ್ಯ ಹಣವಿಲ್ಲ, ಅಂಗನವಾಡಿಗಳಿಗೆ ಉಚಿತವಾಗಿ ನೀರು ಕೊಡುವುದಿಲ್ಲ, ನಗರದ ಅನಧೀಕೃತ ಕಟ್ಟಡ ಪ್ರತಿಶತ ೧೫ ಮೀರದ ಪ್ರಕರಣಗಳಿಗೆ ದಂಡ ಹಾಕಿ ಕಾನೂನುಬದ್ಧ ಮಾಡಬಹುದು ಎನ್ನುವ ವಿಚಾರಗಳ ಚರ್ಚೆ ಸೇರಿದಂತೆ ಕೆಲವು ವಿಚಾರಗಳ ಚೆರ್ಚೆಗಳೊಂದಿಗೆ ಇಂದಿನ ಪಟ್ಟಣ ಪಂಚಾಯತ್ ಮಾಸಿಕ ಸಾಮಾನ್ಯ ಸಭೆ ಸಂಪನ್ನಗೊಂಡಿತು.

ಪ.ಪಂ. ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಈ ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಸರ್ಕಾರದ ಆದೇಶಗಳ ವಾಚನದ ವೇಳೆ ನಗದಲ್ಲಿರುವ ಅನಧೀಕೃತ ಕಟ್ಟಡಗಳನ್ನು ಗರಿಷ್ಠ ೧೫ ಪ್ರತಿಶತ ಮಾತ್ರ ದಂಡ ಪಾವತಿಸಿ ಕಾನೂನು ಬದ್ಧ ಮಾಡಿಕೊಳ್ಳಲು ಅವಕಾಶವಿದ್ದು ೧೫% ಗಿಂತ ಹೆಚ್ಚಿನ ಅನಧೀಕೃತ, ಕಾನೂನು ಬಾಹೀರ ಕಟ್ಟಡಗಳನ್ನು ಕಾನೂನು ಬದ್ಧ ಮಾಡಲು ಆದೇಶದ ಪ್ರಕಾರ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ವಿಚಾರ ಚರ್ಚೆಯಿಲ್ಲದೆ ಮುಕ್ತಾಯವಾಗಿದ್ದು ವಿಶೇಶವೆನಿಸಿತು!
ಬೀದಿ ನಾಯಿಗಳ ಸಂತಾನಹರಣ ಶಸ್ತ್ತ ಚಿಕಿತ್ಸೆಗೆ ಅವಶ್ಯವಿರುವ ಕನಿಷ್ಠ ಐದು ಲಕ್ಷ ರೂಪಾಯಿಗಳ ಅನುದಾನ ಲಭ್ಯವಿಲ್ಲದಿರುವುದರಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಪರ್ಯಾಯ ಸಾಧ್ಯತೆ ಪರಿಶೀಲಿಸುವ ಬಗ್ಗೆ ಸಭೆ ತೀರ್ಮಾನಿಸಿತು.


ಅಂಗನವಾಡಿಗಳಿಗೆ ನೀರು ಪೂರೈಸಲು ರಸ್ತೆ ಅಗೆದು ತೊಂದರೆ ಮಾಡಿರುವ ಕುರಿತು ವಿಚಾರ ಪ್ರಸ್ಥಾಪಿಸಿದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ನಿಯಮಾನುಸಾರ ಅಂಗನವಾಡಿಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ. ಕಾನೂನು ಬಾಹೀರ ಈ ಕೆಲಸ ಮಾಡಿದ ಸಿಬ್ಬಂದಿಗಳು ಆ ನೀರಿನ ಸಂಪರ್ಕಗಳ ತೆರಿಗೆ ಮತ್ತು ವೆಚ್ಚವನ್ನು ಬರಿಸಬೇಕು ಎಂದು ಸೂಚಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






