



ಸಿದ್ದಾಪುರ: ನಗರದ ಬಾಲಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಾಧ್ವಾರ ಹಾಗೂ ಕಂಪೌಂಡ್ ನಿರ್ಮಿಸಿಕೊಟ್ಟ ದಾನಿಗಳನ್ನು ಸನ್ಮಾನಿಸಲಾಯಿತು.
ಬಾಲಿಕೊಪ್ಪ ಶಾಲೆಯಲ್ಲಿ ಕಲಿತು ಅಮೇರಿಕಾದಲ್ಲಿ ಸ್ವಂತ ಕಂಪನಿ ಹೊಂದಿರುವ ಸಿದ್ದಾಪುರದ ಉದಯ ಹೆಗಡೆ ಶಾಲೆಯ ಮಹಾಧ್ವಾರ, ಧ್ವಜದ ಕಟ್ಟೆ ಸೇರಿ ಸುಮಾರು 7 ಲಕ್ಷ ರೂಪಾಯಿ ಕೊಡುಗೆ ನೀಡಿದ್ದು ಮಹಾಧ್ವಾರವನ್ನು ಮಂಗಳವಾರ ಉದ್ಘಾಟಿಸಿದರು. ಜತೆಗೆ ಶಾಲೆಯ ಕಂಪೌಂಡಗೆ 1 ಲಕ್ಷ ರು ನೀಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ ಗೌಡರ್ ರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.


ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಹಾಧ್ವಾರದ ದಾನಿ ಉದಯ ಹೆಗಡೆ ಮಾತನಾಡಿ, ಎಲ್ಲದನ್ನು ಸರ್ಕಾರದ ಮೇಲೆ ಬಿಡುವುದಲ್ಲ. ಸರ್ಕಾರ ಅದರದೇ ಆದ ಮಾನದಂಡದ ಮೇಲೆ ಮಾಡುತ್ತದೆ. ನಾವು ಪರಾವಲಂಬನೆಯಿಂದ ಮುಕ್ತರಾಗಿ ಸ್ವಾವಲಂಬನೆ ಸಾಧಿಸಬೇಕು. ಉದ್ಯೋಗಪತಿಯಾಗುವ ಬದಲು ಉದ್ಯಮಪತಿಗಳಾಗಲು ಗಮನ ಹರಿಸಬೇಕು ಎಂದರು.
ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ, ಆಹಾರ ಭದ್ರತೆ ಜತೆಗೆ ಶಿಕ್ಷಣದ ವ್ಯವಸ್ಥೆ ಮಾಡುವುದು ಯಾವುದೇ ಸರ್ಕಾರಕ್ಕಾದರೂ ಸುಲಭವಲ್ಲ. ತಾವು ಗಳಿಸಿದ್ದನ್ನು ಸಮಾಜಕ್ಕೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಉದಯ ಹೆಗಡೆ ಅವರಂತಹ ದಾನ ಮಾಡುವ ಮನಸ್ಸುಳ್ಳವರು ಬೇಕು. ದೇವಸ್ಥಾನ ಕಟ್ಟುವ ಬದಲು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೆಳಗುವ ಶಾಲೆಗಳನ್ನು ನಿರ್ಮಿಸಬೇಕು. ಹುಟ್ಟಿದ ಊರು ಹಾಗೂ ಕಲಿತ ಶಾಲೆಗಳ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು. ಎಂ.ಎಚ್.ನಾಯ್ಕ ಅವರು ಬಿಇಓ ಆಗಿ ಬಂದ ನಂತರ ಸಿದ್ದಾಪುರ ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗರಿಮೆ ಬಂದಿದೆ ಎಂದರು.
ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಸ್ವಾವಲಂಬನೆ ಸಾಧ್ಯ. ಇತ್ತೀಚೆಗೆ ಆತ್ಮನಿಷ್ಠ ಜಗತ್ತಿನಿಂದ ವಸ್ತುನಿಷ್ಠ ಜಗತ್ತಿನತ್ತ ಸಾಗುತ್ತಿದ್ದೇವೆ ಎಂದರು.
ಎಸ್.ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿ ಮಾತನಾಡಿದರು. ಸಿ.ಆರ್.ಪಿ ಶೋಭಾ ಡಿಸಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಅರ್ಜುನ್ ಚೌಹಾಣ ಸ್ವಾಗತಿಸಿದರು. ಶಿಕ್ಷಕ ಎಸ್.ಜಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






