ಕೆಂಪು ಕೋಟೆ ಹಿಂಸಾಚಾರ ಆರೋಪ ಹೊತ್ತ ದೀಪ್ ಸಿದು ಬಿಜೆಪಿ ಸಂಸದ ಸನ್ನಿ ಡಿಯೊಲ್ ಪ್ರಚಾರ ಮ್ಯಾನೇಜರ್ ಆಗಿದ್ದ!

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ.

Deep Sidhu

ಸಿದ್ದಾಪುರ: ಹಕ್ಕು ಚಲಾಯಿಸುವುದಕ್ಕಿಂತ ಕರ್ತವ್ಯ ಪಾಲಿಸಬೇಕು ಪ್ರತಿಯೊಬ್ಬ ನಾಗರಿಕರು ಮತದಾನ ಚಲಾಯಿಸಬೇಕು ಇದು ಪ್ರತಿ ನಾಗರಿಕರ ಕರ್ತವ್ಯ ಎಂದು ಕವಲಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಮಂಗಲ ಮಡಿವಾಳ ಅಭಿಪ್ರಾಯಪಟ್ಟರು.
ಅವರು ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಮತದಾರರ ಪಾತ್ರ ಪ್ರಮುಖವಾಗಿರುತ್ತದೆ ಆದ್ದರಿಂದ ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು ಎಂದರು.
ಸಿದ್ದಾಪುರ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಶಿವಶಂಕರ್ ಎನ.ಕೆ ಮಾತನಾಡಿ ನಮ್ಮ ಹಕ್ಕನ್ನು ನಾವು ಚಲಾಯಿಸದಿದ್ದರೆ ಅಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಅನ್ಯ ಮಾರ್ಗಗಳಿಂದ ಜಯಸುವವರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ನಮಗೆ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ ನಕಲಿ ಮತದಾರರನ್ನು ತಡೆಯಲು ಸರ್ಕಾರ ಮತದಾರರ ಗುರುತಿನ ಚೀಟಿಯನ್ನು ನೀಡುತ್ತಿದೆ 18 ವರ್ಷ ತುಂಬಿದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಊರಿನ ಧನಂಜಯ್ ಮಾತನಾಡಿ ಜನರಿಗೆ ಸ್ಪಂದಿಸುವ ಉತ್ತಮ ವ್ಯಕ್ತಿಗಳನ್ನು ನಾವು ಆಯ್ಕೆ ಮಾಡಬೇಕು ಎಂದರು
ಮತಗಟ್ಟೆ ಅಧಿಕಾರಿ ನಾಗರಾಜ್ ಟಿ ಮತದಾರರ ದಿನಾಚರಣೆ ಕುರಿತು ಮಾಹಿತಿ ನೀಡಿದರು
ವೀರಭದ್ರ ನಾಯ್ಕ ಉಪಸ್ಥಿತರಿದ್ದರು.

ನವದೆಹಲಿ: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ.

ದೀಪ್ ಸಿದು ಯುವಕರನ್ನು ಪ್ರಚೋದನೆಗೊಳಿಸಿ ಪ್ರತಿಭಟನಾಕಾರರನ್ನು ಹಾದಿತಪ್ಪಿಸಿದರು. ನಮ್ಮ ಪ್ರತಿಭಟನೆಯನ್ನು ಹಾಳುಮಾಡಿದ್ದೇ ಅವರು, ಅವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಯಾರ ಪರವಾಗಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ಜೊಗಿಂದರ್ ಸಿಂಗ್ ಉಗ್ರಹಣ್ ತಿಳಿಸಿದ್ದಾರೆ. 

ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಾಕಷ್ಟು ಹರಿದಾಡುತ್ತಿದ್ದು ಸಿದು ಖಲ್ಸ ಧ್ವಜವನ್ನು ಹಿಡಿದು ಮಜ್ದೂರ್ ಏಕತಾ ಪರ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಖಲ್ಸಾ ಧ್ವಜವನ್ನು ಕೆಂಪು ಕೋಟೆಯಲ್ಲಿ ಮೊದಲು ನೆಟ್ಟವರು ಕೂಡ ಈತನೇ.

ಕೆಂಪು ಕೋಟೆಯ ಮೇಲಿನ ಹಿಂಸಾಚಾರಕ್ಕೆ ದೇಶಾದ್ಯಂತ ಸಾಕಷ್ಟು ಖಂಡನೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ರೈತ ಸಂಘಟನೆಗಳು ಸಿದುವನ್ನು ದೂರವಿರಿಸಿದ್ದಾರೆ. ಈತ ಖಾಲಿಸ್ತಾನ ಚಳವಳಿಯನ್ನು ಬೆಂಬಲಿಸಿದ್ದಾನೆ ಎಂಬ ಆರೋಪವಿದೆ. 36 ವರ್ಷದ ಕಲಾವಿದ ಸಿದು ಜರ್ನೈಲ್ ಸಿಂಗ್ ಬಿಂದ್ರನ್ವಾಲೆಯ ಮಾತುಗಳನ್ನು ಆಗಾಗ ಉಲ್ಲೇಖಿಸುತ್ತಾನೆ.

ನಂತರ ನಿನ್ನೆ ರಾತ್ರಿಯ ಹೊತ್ತಿಗೆ ಸಿದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮತ್ತು ಬಿಜೆಪಿಯ ಗುರುದಾಸ್ ಪುರ ಸಂಸದ ನಟ ಸನ್ನಿ ಡಿಯೋಲ್ ಅವರೊಂದಿಗಿರುವ ಫೋಟೋ ವೈರಲ್ ಆಯಿತು. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಸನ್ನಿ ಡಿಯೋಲ್ ಪರ ಸಿದು ಪ್ರಚಾರ ನಡೆಸಿದ್ದನಂತೆ. ಕಳೆದ ಡಿಸೆಂಬರ್ ನಲ್ಲಿ ಸಿದು ರೈತರ ಪ್ರತಿಭಟನೆಗೆ ಸೇರಿಕೊಂಡ ನಂತರ ಸನ್ನಿ ಡಿಯೋಲ್ ಆತನನ್ನು ದೂರವಿಟ್ಟರು ಎಂದು ಹೇಳಲಾಗುತ್ತಿದೆ.

ನಂತರ ಫೇಸ್ ಬುಕ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಸಿದು, ನಾವು ಮಹಾನ್ ಸಾಹಿಬ್ ಧ್ವಜವನ್ನು ಕೆಂಪು ಕೋಟೆ ಮೇಲೆ ಹಾರಿಸಿದ್ದೇವೆ, ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ನಮ್ಮ ಧ್ವಜವನ್ನು ಹಾರಿಸುವ ಪ್ರಜಾಪ್ರಭುತ್ವ ಹಕ್ಕು ನಮಗಿದೆ. ಇಂತಹ ಪ್ರತಿಭಟನೆ ವೇಳೆ, ಜನರ ಸಿಟ್ಟು, ಆಕ್ರೋಶ ಹೊರಬರುತ್ತದೆ, ಇಲ್ಲಿ ನೀವು ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡಲು ಸಾಧ್ಯವಾಗುವುದಿಲ್ಲ, ಸಿಖ್ ಧ್ವಜವನ್ನು ಹಾರಿಸಿದಾಗ ಕೆಂಪು ಕೋಟೆಯಲ್ಲಿನ ರಾಷ್ಟ್ರಧ್ವಜವನ್ನು ತೆಗೆದಿರಲಿಲ್ಲ ಎಂದು ಸಮರ್ಥನೆ ನೀಡಿದ್ದಾನೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *