

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ, ಒಕ್ಕಲಿಗ ನಿಗಮ ಸ್ಥಾಪನೆಗಾಗಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ, ಒಕ್ಕಲಿಗ ನಿಗಮ ಸ್ಥಾಪನೆಗಾಗಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸರ್ಕಾರ ಒಕ್ಕಲಿಗ ನಿಗಮ ಸ್ಥಾಪನೆಗೆ ಕೇವಲ ಯೋಜನೆ ಮಾಡಿದೆ, ಅದಕ್ಕಾಗಿ 500 ಕೋಟಿ ರು ಅನುದಾನ ನೀಡಲಾಗುವುದು ಎಂದು ಹೇಳಿದೆ, ನಿಗಮ ಸ್ಥಾಪನೆಗೆ ಎಷ್ಟು ವರ್ಷ ಸಮಯ ತೆಗೆದುಕೊಳ್ಳಲಿದ್ದಾರೆ, 25 ವರ್ಷ ಬೇಕಾಗುತ್ತದೆಯೇ ಎಂದು ಟೀಕಿಸಿದ್ದಾರೆ.

https://imasdk.googleapis.com/js/core/bridge3.446.1_en.html#goog_1269419965
ಒಕ್ಕಲಿಗ ನಿಗಮ ಸ್ಥಾಪನೆ ಘೋಷಣೆ ಮಾಡಿದ್ದಕ್ಕಾಗಿ ಸ್ವಾಮೀಜಿಗಳು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ, ಸಿಎಂ ಇದರಿಂದ ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
16 ಸಣ್ಣ ಸಮುದಾಯಗಳಿಗೆ 500 ಕೋಟಿ ರು ನೀಡಿ, ಲಿಂಗಾಯತ ಸಮುದಾಯದಂತ ದೊಡ್ಡ ದೊಡ್ಡ ಸಮುದಾಯಕ್ಕೆ 1,100 ಕೋಟಿ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷದ ಬಜೆಟ್‌ನಲ್ಲಿ ಭರವಸೆ ನೀಡಿದ 150 ಯೋಜನೆಗಳಲ್ಲಿ ಸುಮಾರು 65 ಯೋಜನೆಗಳನ್ನು ಜಾರಿಗೆ ತರಲಾಗಿಲ್ಲ, ಮತ್ತು ಏನು ಜಾರಿಗೆ ತರಲಾಗಿದೆ ಮತ್ತು ಬಾಕಿ
ಉಳಿದಿದೆ ಎಂಬುದರ ಕುರಿತು ಸರ್ಕಾರವು ಕ್ರಮ ಕೈಗೊಂಡ ವರದಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
” ಮಹಿಳೆಯರಿಗೆ 60,000 ಉದ್ಯೋಗಗಳನ್ನು ಒದಗಿಸುವುದಾಗಿ ಸಿಎಂ ಹೇಳಿದ್ದಾರೆ, ಅವರು ಅದನ್ನು ಎಲ್ಲಿ ಮಾಡುತ್ತಾರೆ ಮತ್ತು ಅವರು ಹೇಗೆ ಉದ್ಯೋಗ ನೀಡುತ್ತಾರೆ? ದಯವಿಟ್ಟು ಸ್ಪಷ್ಟಪಡಿಸಿ ಎಂದು ಕುಮಾರಸ್ವಾಮಿ ಹೇಳಿದರು. (kpc)
