ಮಿಲಿಟರಿ ಪೊಲೀಸ್ ದಳದಲ್ಲಿ ತರಬೇತಿ ಮುಗಿಸಿದ 100 ಮಹಿಳೆಯರ ಮೊದಲ ತಂಡ

ಸೇನೆಗೆ ಮತ್ತಷ್ಟು ಮಹಿಳೆಯರು:ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

The first batch of women cadets in the Corps of Military Police (CMP) take part  in a combat training session at the CMP Centre in Bengaluru

ಬೆಂಗಳೂರು: ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

ಇದೇ ಮೊದಲ ಬಾರಿಗೆ ಮಿಲಿಟರಿ ಪೊಲೀಸ್ ದಳ ಲ್ಯಾನ್ಸ್ ನಾಯಕ್ಸ್ ಹುದ್ದೆಗೆ ಮಹಿಳೆಯರನ್ನು ನೇಮಕಾತಿ ಮಾಡಲಾಗಿದೆ ಎಂದು ಕಾರ್ಪ್ಸ್ ಆರ್ಮಿ ಏರ್ ಡಿಫೆನ್ಸ್ ನ ಲೆಫ್ಟಿನೆಂಟ್ ಕರ್ನಲ್ ಜುಲೀ ಸಿಂಗ್ ತಿಳಿಸಿದ್ದಾರೆ. ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇರಿಸಿ ಇನ್ನಷ್ಟು ಪಡೆಯನ್ನು ಬಲಿಷ್ಠಗೊಳಿಸುವುದು ಉದ್ದೇಶವಾಗಿದೆ. 

https://imasdk.googleapis.com/js/core/bridge3.448.1_en.html#goog_362681005

ಅವರು ಪದವೀಧರರಾದ ನಂತರ, ಸಿಪಾಯಿಗಳು – ತರಬೇತಿ ಲ್ಯಾನ್ಸ್ ನಾಯ್ಕ್ಸ್ ಎಂದು ಕರೆಯಲ್ಪಡುವಂತೆ – ದೇಶಾದ್ಯಂತ 11 ಸ್ಥಳಗಳಲ್ಲಿ ವಿವಿಧ ಹುದ್ದೆಗಳನ್ನು ಅವರಿಗೆ ನಿಯೋಜಿಸಲಾಗುತ್ತದೆ. ಮಿಲಿಟರಿ ಕಾರ್ಯಾಚರಣೆಗಳು, ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳೆಯರಿಗೆ ಹೊಡೆಯುವುದು, ಲೈಂಗಿಕ ದೌರ್ಜನ್ಯಗಳಾದ ಅತ್ಯಾಚಾರ, ಕಿರುಕುಳ ಮತ್ತು ಕುಟುಂಬ ಕಿರುಕುಳಗಳಲ್ಲಿ ಲೈಂಗಿಕ ಕಿರುಕುಳದ ತನಿಖೆಯನ್ನು ಲ್ಯಾನ್ಸ್ ನಾಯಕ್ಸ್ ಮಾಡಲಿದ್ದಾರೆ.

ನೇಮಕಾತಿಗೊಂಡವರಲ್ಲಿ 8 ಮಂದಿ ಕರ್ನಾಟಕದವರಾಗಿದ್ದು, 26 ಮಂದಿ ಹರ್ಯಾಣ, 27 ಮಂದಿ ಉತ್ತರ ಪ್ರದೇಶ, ಇಬ್ಬರು ಹಿಮಾಚಲ ಪ್ರದೇಶ, 6 ಮಂದಿ ಕೇರಳಿಗರು, ತಲಾ ಒಬ್ಬರು ದೆಹಲಿ, ಪಂಜಾಬ್ ಮತ್ತು ರಾಜಸ್ತಾನ, ಇಬ್ಬರು ಈಶಾನ್ಯ ಭಾರತದಿಂದ ಹಾಗೂ ಒಂದಿಬ್ಬರು ಬೇರೆ ರಾಜ್ಯದವರಾಗಿದ್ದಾರೆ.

ಹೆಚ್ಚಿನ ಸಿಪಾಯಿಗಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ)ನ ಹಿನ್ನೆಲೆ ಹೊಂದಿದ್ದು, 19ರಿಂದ 21 ವರ್ಷದ ನಡುವಿನವರಾಗಿದ್ದಾರೆ. ಎಂಭತ್ತು ಮಹಿಳೆಯರು ಇನ್ನೂ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳಾಗಿದ್ದು, ಅವರು ಸಿಎಂಪಿ ಕೇಂದ್ರ ಮತ್ತು ಶಾಲೆಯಿಂದ ಪದವಿ ಪಡೆದ ನಂತರ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಅವರಿಗೆ ಅನುಮತಿ ನೀಡಲಾಗುತ್ತದೆ.

ನನ್ನ ತಂದೆ 130 ವಾಯು ರಕ್ಷಣಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಅದು ನನ್ನನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸಿತು ಎಂದು ದ್ವಿತೀಯ ವರ್ಷದ ಬಿಎಸ್ಸಿ ಪದವಿ ಓದುತ್ತಿರುವ ಜ್ಯೋತಿ ಎಂ ಹಂಚಿನಮನಿ ಹೇಳಿದ್ದಾರೆ. ಇವರು ಬೈಲಹೊಂಗಲದವರಾಗಿದ್ದಾರೆ. ಸೇನೆಯಲ್ಲಿ ನನ್ನ ತಲೆಕೂದಲು ಕತ್ತರಿಸಬೇಕಾಗಿರುವುದರಿಂದ ಊರಿಗೆ ಹೋದಾಗ ಹಲವರು ನನ್ನನ್ನು ಗುರುತು ಹಿಡಿಯುವುದಿಲ್ಲ ಎನ್ನುತ್ತಾರೆ ಜ್ಯೋತಿ.

ಬೆಳಗಾವಿಯ ಕಾಗವಾಡದ ಅರಿತಿ ತಲ್ವರ್ ಕೂಡ ಬಹಳ ಬೇಗನೆ ತರಬೇತಿಗೆ ಸೇರಿದ್ದಾರೆ. ಎನ್ ಸಿಸಿ ತರಬೇತಿಯಿಂದಾಗಿ ನನಗೆ ಶಾರೀರಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸುಲಭವಾಯಿತು ಎನ್ನುತ್ತಾರೆ ಅವರು. ಅಪರಾಧ ತನಿಖಾ ತರಬೇತಿ ತನಗೆ ಇಷ್ಟವಾಯಿತು ಎನ್ನುತ್ತಾರೆ ಅವರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *