

.…..ಸಾವಿನ ವ್ಯಾಪಾರಎಂದರೆ;
ಅಂಗಡಿಮುಂಗಟ್ಟುಗಳಬಜಾರಿನಲಿ ಶವಗಳಶೋರೂಮ್ ತೆರೆದುಮಾರಾಟ ಮಾಡುವುದುಅಲ್ಲವೇ ಅಲ್ಲ.
ಸಾವಿನ ವ್ಯಾಪಾರ ಎಂದರೆ;
‘ಪ್ಯಾರೇ ದೇಶವಾಸಿ’ಗಳ ಮೇಲೆಧುತ್ತನೇ ಕಾನೂನು ಕತ್ತಿ ಪ್ರಹಾರ ನಡೆಸಿ,ಬದುಕು ಕಳೆದುಕೊಂಡುಊರ ದಾರಿ ಹಿಡಿದವರಒಡೆದ ಹಿಮ್ಮಡಿಯ ನೆತ್ತರನೆಕ್ಕಿ ರುಚಿ ಚಪ್ಪರಿಸುವುದು…
ಸಾವಿನ ವ್ಯಾಪಾರಎಂದರೆ; ‘ದೇಶವಾಸಿ’ಗಳುಹುಳುಗಳಂತೆ ಸಾಯುತ್ತಿದ್ದರೂ, ಕಣ್ಣೆತ್ತಿಯೂ ನೋಡದೇ,ಮಹಾಮಾರಿಯ ಅಟ್ಟಹಾಸದ ನಡುವೆಯೂ ಜನಜಾತ್ರೆ ಸೇರಿಸಿ ಸಾವಿನ ದವಡೆಗೆದೂಡಿ ಸಂಭ್ರಮಿಸುವುದು..
ಸಾವಿನ ವ್ಯಾಪಾರಎಂದರೆ;
ದವಾಖಾನೆಯಿಂದಖಬರಸ್ತಾನದವರೆಗೆ,ಕೊನೆಯುಸಿರಿನಿಂದ ಚಿತೆಏರುವವರೆಗೆ, ‘ಸಾಥಿ’ ಎನ್ನುತ್ತಲೇ ಸುಲಿದು,ಹಣಿದು ಹೈರಾಣಾಗಿಸಿಕೊನೆಗೆ ಸುಡುಗಾಡಿನಲೂ ಜಾಗ ಕೊಡದೆ ಸತಾಯಿಸುವುದು…!
ಸಾವಿನ ವ್ಯಾಪಾರಎಂದರೆ;
ಧರ್ಮ, ದೇವರ ನಶೆ ಏರಿಸಿಏರಿಸಿಪಾಕಿಸ್ತಾನದ ಕೋಲ ಕುಣಿಸಿಅಮಲಿನಲಿ ಮೈಮರೆತಾಗಲೇನಾಜೂಕು ನಯವಂಚಕವರಸೆಯಲಿ ‘ಮಿತ್ರೋಂ’ಗಳನ್ನು ಮುಲಾಜಿಲ್ಲದೆ ದೋಚುವುದು..
ಸಾವಿನ ವ್ಯಾಪಾರಎಂದರೆ;
ದೇಶಭಕ್ತಿಯ ಮಂಕುಬೂದಿ ಎರಚಿ, ಜೀವ, ಜೀವನವನ್ನೆಲ್ಲಾದಿವಾಳಿ ಎಬ್ಬಿಸಿಯೂನಿಸೂರಾಗಿನವಿಲಿಗೆ ಕಾಳು ಹಾಕುತ್ತಾಅವತಾರ ಪುರುಷನಪೋಜು ಕೊಡುವುದು…
ಸಾವಿನ ವ್ಯಾಪಾರಎಂದರೆ;ಶೋ ರೂಮಲ್ಲಿ ಅಲಂಕೃತ ಶವಪ್ರದರ್ಶನ ಮತ್ತು ಮಾರಾಟ ಅಲ್ಲವೇ ಅಲ್ಲ, ಮಿತ್ರೋಂ…!!
~ ಶಶಿ ಸಂಪಳ್ಳಿ(ಕರೋನಾ ಕಾಲದ ಕವಿತೆ)

