

ಸಂಪಾದಕರಿಗೆ ಪತ್ರ:
ಕೊರೊನಾ ಸಂಕಷ್ಟದಲ್ಲಿ ದೇಶವೇ ತಲ್ಲಣಗೊಂಡ ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಕ್ಕೆ ಬೆಂಬಲವಾಗಿ ನಿಂತು ನಾವೆಲ್ಲರೂ ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ-
ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಎಲ್ಲ ಅಕಾಡೆಮಿ, ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳನ್ನು ಈ ಕೂಡಲೇ ವಿಸರ್ಜಿಸುವುದು. ಇದರಿಂದ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅನುದಾನವನ್ನು ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಬಳಸಲು ಅನುಕೂಲವಾಗುತ್ತದೆ ಎಂದು ನಮ್ಮ ಭಾವನೆ. ಈ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳ ಸಂಬಳ, ಸಾರಿಗೆ ಮತ್ತಿತರ ಭತ್ಯೆಗಳು ಸರ್ಕಾರದ ಬೊಕ್ಕಸಕ್ಕೆ ಉಳಿಯುತ್ತದೆ. ರಾಜ್ಯವು ಗಂಭೀರವಾದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಹೊತ್ತಿನಲ್ಲಿ ಮಾನವೀಯ ಕಳಕಳಿಯ ಹಿನ್ನೆಲೆಯಲ್ಲಿ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಬೇಕೆಂದು ನಮ್ಮೆಲ್ಲರ ವಿನಂತಿ.
ಇದರೊಂದಿಗೆ ಸರಕಾರವು ನೀಡುವ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನೂ ರಾಜ್ಯವು ಚೇತರಿಸಿಕೊಳ್ಳುವವರೆಗೆ ಮುಂದೂಡಬೇಕೆಂದೂ ಕೋರಿಕೆ. ಈ ಕುರಿತಾದ ಆದೇಶವು ಹೊರಬೀಳುವ ಮೊದಲೇ ಎಲ್ಲ ಅಕಾಡೆಮಿ, ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರು ಸ್ವಯಿಚ್ಛೆಯಿಂದ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ಮಾದರಿಯಾಗಬೇಕೆಂದೂ ಸರಕಾರದ ಜೊತೆಗೆ ಕೈಜೋಡಿಸಬೇಕೆಂದೂ ಮನವಿಮಾಡಿಕೊಳ್ಳುತ್ತಿದ್ದೇವೆ.
ಇತಿ ನಿಮ್ಮ
ಸುಬ್ರಾಯ ಚೊಕ್ಕಾಡಿ
ಡಾ. ನಾ.ಮೊಗಸಾಲೆ
ಡಾ.ಜಿ.ಎಂ.ಹೆಗಡೆ, ಧಾರವಾಡ
ಡಾ.ಬಿ. ಜನಾರ್ದನ ಭಟ್
ಡಾ. ಜಿ.ಎನ್.ಉಪಾಧ್ಯ, ಮುಂಬಯಿ
ಡಾ. ಕಬ್ಬಿನಾಲೆ ವಸಂತಭಾರದ್ವಾಜ
ಡಾ.ಪೂರ್ಣಿಮಾ ಶಟ್ಟಿ
ಶ್ರೀನಿವಾಸ ಜೋಕಟ್ಟೆ, ಮುಂಬಯಿ
ಕೆ.ಪಿ.ರಾಜಗೋಪಾಲ, ಕನ್ಯಾನ.
