ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶಿಷ್ಟ ಆಚರಣೆಯ ಹಿನ್ನೆಲೆ

ಗಂಡುಗಲಿ ಕುಮಾರರಾಮನ ಹೆಸರು ಕೇಳದವರುಂಟೆ?

ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ  ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ. ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ.

ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆಚರಿಸುವ ಹನಿಹಬ್ಬವನ್ನು ಆರಿದ್ರಮಳೆ ಹಬ್ಬ ಎಂದು ಕರೆಯುತ್ತಾರೆ. ಸಿದ್ಧಾಪುರದ ಕೋಲಶಿರ್ಸಿ,ಮನ್ಮನೆ,ಬೇಡ್ಕಣಿ,ಹುಸೂರು,ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.

ಕೋಲಶಿರ್ಸಿಯಲ್ಲಿ ನಡೆಯುವ ಆರಿದ್ರಮಳೆ ಹಬ್ಬದ ಆಚರಣೆಯ ವಿಡಿಯೋ


ವಿಜಯನಗರ ಸಾಂಮ್ರಾಜ್ಯ ಮತ್ತು ಅದಕ್ಕಿಂತ ಹಿಂದೆ ಮಲೆನಾಡಿನ ಧೀವರು ಸೈನಿಕರು, ರಾಜರೂ ಆಗಿ ಮೆರೆದವರು. ತಮ್ಮ ಹಳೆಫೈಕ ಸಂಸ್ಕೃತಿ ಮತ್ತು ಸಂಪ್ರದಾಯದ ರೂಢಿಯಂತೆ ಮಳೆಗಾಲದ ಯುದ್ಧವಿರಾಮ ಕಾಲದಲ್ಲಿ ಈ ಸೈನಿಕರ ಪೂರ್ವಜರು ವರ್ಷಕ್ಕೊಮ್ಮೆ ಹನಿ ಹಬ್ಬ  ಎಂದು ಆಚರಿಸುತಿದ್ದರಂತೆ. ಪ್ರತಿವರ್ಷ ಆರಿದ್ರ ಮಳೆ ಪ್ರಾರಂಭವಾದ ಕಾಲ ಮತ್ತು ಈ ಆರಿದ್ರ ಮಳೆ ಕಳೆದ ಮೇಲೂ ಮಲೆನಾಡಿನ ಜನ ಆಚರಿಸುವ ಹನಿ ಹಬ್ಬ ಆರಿದ್ರಮಳೆ ಹಬ್ಬ  ಎಂದು ಪ್ರಸಿದ್ಧವಾಗಿದೆ. ಯುದ್ಧವಿರಾಮ ಕಾಲದಲ್ಲಿ ಕೃಷಿ ಮಾಡುತಿದ್ದ ಆದಿ ಸೈನಿಕರು ವರ್ಷಕ್ಕೊಮ್ಮೆ ಸೇರಿ ಆಚರಿಸುತಿದ್ದ ಈ ಹನಿ ಅಥವಾ ಮಳೆಹಬ್ಬದಲ್ಲಿ ರಾಮ ಆಥವಾ ಗಾಮ ಎನ್ನಲಾಗುವ ಕುಮಾರರಾಮನ ಮುಖವಾಡವನ್ನು ಪೂಜಿಸುವುದು ವಾಡಿಕೆ.


ಗಾಮನಮುಖ, ಸೈನಿಕರ ಮುಖವಾಡ, ಕುದುರೆ ಹೀಗೆ ಯುದ್ಧ,ಸೈನ್ಯವನ್ನು ಪ್ರತಿನಿಧಿಸುವ ಚಹರೆಗಳು ಈ ಹಬ್ಬದ ಕೇಂದ್ರ ಬಿಂದು. ಯುವಕರು, ನವವಿವಾಹಿತರು ಈ ಮುಖಗಳನ್ನು ಹೊತ್ತು ಗಡಿದೇವರುಗಳನ್ನು ಪೂಜಿಸಿ, ಕೆಂಡದ ಮೇಲೆ ನಡೆಯುವುದು ವಿಶೇಶವಾದರೆ ಹೆಂಗಳೆಯರು ಈ ಸೈನಿಕ ಪುರುಷರ ಕಾಲು ತೊಳೆದು ಗೌರವಿಸುವ ನವಜಾತ ಶಿಶುಗಳಿಗೆ ಆರೋಗ್ಯಕ್ಕಾಗಿ ಹೊತ್ತ ಹರಕೆಯನ್ನು ತೀರಿಸಲು ಈ ಅವಕಾಶವನ್ನು ಉಪಯೋಗಿಸುತ್ತಾರೆ. ಇಂಥ ವೈಶಿಷ್ಟ್ಯಮಯ ಆಚರಣೆ, ರೂಢಿ, ಸಂಪ್ರದಾಯಗಳ ಹಿಂದೆ ಮಲೆನಾಡಿನ ಮೂಲನಿವಾಸಿಗಳು ಶ್ರಮಿಕರು, ಯೋಧರು, ಸಾಹಸಿಗಳು ಎಂದು ನೆನಪಿಸುವ ಆಚರಣೆ. ಈ ಆಚರಣೆಯಲ್ಲಿ ಕುಮಾರರಾಮನ ಸ್ಮರಣೆ, ಆಧರಣೆಕೂಡಾ. ವೀರತನ, ಧೀರತ್ವ, ಮಹಿಳೆಯರ ಬಗೆಗಿನ ಕುಮಾರರಾಮನ ಗೌರವ ಸ್ಮರಿಸಿ, ಗೌರವಿಸುವುದೇ ಈ ಆಚರಣೆಗಳ ಹಿಂದಿನ ಉದ್ದೇಶ.ಈ ವರ್ಷದ ಈ ಆರಿದ್ರಮಳೆಯ ಹಬ್ಬದ ಸಂಬ್ರಮ ಈ ವಾರ ಮುಕ್ತಾಯವಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *