independent-75 75ನೇ ಸ್ವಾತಂತ್ರ್ಯೋತ್ಸವ ಆಚರಿಸಲು ಸಜ್ಜಾಗಿದೆ ಬ್ರಿಟಿಷರ ಬಾವುಟ ಕೆಳಗಿಳಿಸಿ, ತ್ರಿವರ್ಣ ದ್ವಜ ಹಾರಿಸಿದ ಮೊಟ್ಟ ಮೊದಲ ಗ್ರಾಮ!

ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಯು ತ್ತಿದೆ. ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಏರಿಸಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ.

The British Treasury in Bellare village of Sullia taluk is being spruced up

ಮಂಗಳೂರು: ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿದೆ. ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಏರಿಸಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ.

ಮಾರ್ಚ್ 30 1837 ರಲ್ಲಿ ಕೃಷಿ ಉತ್ಪನ್ನಗಳ ಮೇಲೆ ಬ್ರಿಟಿಷರು ಅಧಿಕ ಸುಂಕ ವಿಧಿಸಿದ್ದನ್ನು ವಿರೋಧಿಸಿ ಜನ ದಂಗೆ ಎದ್ದರು. ಬ್ರಿಟಿಷರ ಖಜಾನೆಯನ್ನು ಸೀಜ್ ಮಾಡಿ, ಆ ಸ್ಥಳದಲ್ಲಿದ್ದ ಬ್ರಿಟಿಷರ ಭಾವುಟವನ್ನು ಕೆಳಗಿ ಳಿಸಿದರು.

https://imasdk.googleapis.com/js/core/bridge3.473.0_en.html#goog_612521074

https://imasdk.googleapis.com/js/core/bridge3.473.0_en.html#goog_612521076

ದೀರ್ಘಕಾಲದವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಐತಿಹಾಸಿಕ ಸ್ಥಳವು ಆಗಸ್ಟ್ 15 ಧ್ವಜಾರೋಹಣಕ್ಕೆ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆ ನಡೆಸಲು ಸಜ್ಜಾಗುತ್ತಿದೆ.  1804 ರಲ್ಲಿ  ಸಣ್ಣ ಹೆಂಚಿನ ಮೇಲ್ಛಾವಣಿ ನಿರ್ಮಿಸಲಾಗಿತ್ತು, ಇದರಲ್ಲಿ ಬ್ರಿಟಿಷ್ ಖಜಾನೆಯನ್ನು ಹೊಂದಿತ್ತು, ಈಗಲೂ ಹಳ್ಳಿಯ ಶಾಲೆಯ ಕಡೆಗಿರುವ ಸುಮಾರು ಒಂದು ಎಕರೆ ಭೂಮಿಯಲ್ಲಿದೆ.

ಐತಿಹಾಸಿಕ ಸ್ಥಳವನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ಧಪಡಿಸುವ ಕೆಲಸವನ್ನು ಖಾಸಗಿ ಸಲಹೆಗಾರರಿಗೆ ವಹಿಸಲಾಗಿದೆ ಎಂದು ಸುಳ್ಯ ಶಾಸಕ ಎಸ್. ಅಂಗಾರ ತಿಳಿಸಿದ್ದಾರೆ.

ಮೊಟ್ಟ ಮೊದಲು ದಕ್ಷಿಣ ಕೆನರಾ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹೊತ್ತಿಸಿತು. ಕೊಡಗಿನ ಅರಸನ ಆಳ್ವಿಕೆಯಲ್ಲಿದ್ದ ಸುಳ್ಯ ಮತ್ತು ಪುತ್ತೂರನ್ನು ಕೊಡಗಿನಿಂದ ಬೇರ್ಪಡಿಸಿ ಬ್ರಿಟಿಷರು ದಕ್ಷಿಣ ಕೆನರಾದ ಅಡಿಯಲ್ಲಿ ತಂದರು. ಬ್ರಿಟಿಷ್ ಆಳ್ವಿಕೆಯಲ್ಲಿ, ರೈತರು ತಮ್ಮ ಕೃಷಿ ಉತ್ಪನ್ನಗಳ ಆರನೆಯ ಒಂದು ಭಾಗವನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು ಆದರೆ ಅದು ರಾಜನ ಅಡಿಯಲ್ಲಿ ಕೇವಲ ಹತ್ತನೇ ಒಂದು ಭಾಗವಾಗಿತ್ತು. ಇದು ಅವರನ್ನು ದಂಗೆಗೆ ಕಾರಣವಾಗಿತ್ತು ನಿವೃತ್ತ ಅರ್ಥಶಾಸ್ತ್ರರ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲಾ ತಮ್ಮ ಕಾದಂಬರಿಯಲ್ಲಿ ಹೀಗೆ ಬರೆದಿದ್ದಾರೆ.

ಕೆದಂಬಳ್ಳಿ ರಾಮಗೌಡರ ನೇತೃತ್ವದಲ್ಲಿ ಸುಳ್ಯದ ಸುಮಾರು 1,200 ರೈತರು ಬೆಳ್ಳಾರೆಯಲ್ಲಿ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು ಮತ್ತು ಬ್ರಿಟಿಷ್ ಧ್ವಜವನ್ನು ಇಳಿಸಿದ ನಂತರ ಕೊಡಗು ರಾಜವಂಶದ ವಿಜಯ ಧ್ವಜವನ್ನು ಹಾರಿಸಿದರು. 

ನಂತರ ಮಂಗಳೂರಿಗೆ ತೆರಳಿದ ರೈತರು ಮತ್ತು ಬಾವುಟಗುಡ್ಡೆಯಲ್ಲಿ ಅದೇ ಕಾರ್ಯವನ್ನು ಪುನರಾವರ್ತಿಸಿದರು. ಅವರು ಮಂಗಳೂರಿಗೆ ತಲುಪುವ ಹೊತ್ತಿಗೆ 5,000 ಜನ ಸೇರಿದ್ದರು, ಇದರಿಂದಾಗಿ ಬ್ರಿಟಿಷರು ಜೀವ ಭಯದಿಂದ ತಪ್ಪಿಸಿಕೊಳ್ಳುವಂತೆ ಮಾಡಿದರು. ಆದಾಗ್ಯೂ, 13 ದಿನಗಳಲ್ಲಿ, ಬ್ರಿಟಿಷರು ತಲಚೇರಿ ಮತ್ತು ಮುಂಬೈನ ಸೈನ್ಯದೊಂದಿಗೆ  
ಮರಳಿ ಬಂದು ದಂಗೆಯನ್ನು ಹತ್ತಿಕ್ಕಿ, ನಂತರ ರೈತ ನಾಯಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು ಎಂದು ಶಿಶಿಲಾ ಬರೆದಿದ್ದಾರೆ.

1998 ರಲ್ಲಿ ಅಂದರೆ ಭಾರತದ 50 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಹಲವಾರು ಸಂಘಟನೆಗಳು ಸುಳ್ಯದಿಂದ ಮಂಗಳೂರಿಗೆ ಪಾದಯಾತ್ರೆ ನಡೆಸಿ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಗಮನವನ್ನು ಸೆಳೆದರೂ ಆದರೂ ಯಾವುದೇ ಪ್ರಯೋಜನವಾಗಲಿಲ್ಲ.


Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *