sorry- ಈಗ ಜಲಪಾತ ವೀಕ್ಷಣೆಗೆ ಪ್ರಸಕ್ತ ಕಾಲವಲ್ಲ!

ಮಲೆನಾಡಿನಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಿದೆ. ಸಮಾಧಾನಕರ ಮಳೆಗಾಲಕಂಡ ಮಲೆನಾಡು ಜಲಪಾತಗಳನ್ನು ಮೈತುಂಬಿಸಿದೆ. ಮಳೆಕಡಮೆಯಾಯಿತೆಂದು ಈ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ  ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆದರೆ ಮೋಡಕವಿದ ವಾತಾವರಣದ ಈ ಸಮಯ ಜಲಪಾತ ವೀಕ್ಷಣೆಗೆ ಅನುಕೂಲಕರವಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.

ಮಳೆಗಾಲದ ಕೊನೆಯಲ್ಲಿ ಜಲಪಾತಗಳು ತುಂಬಿ ಹರಿಯುವುದು ಸಾಮಾನ್ಯ . ಮಳೆನೀರಿನಿಂದ ಸೊಕ್ಕಿರುವ ಜಲಪಾತಗಳು ರಭಸದಿಂದ ಸುರಿಯುವ ಸಮಯದಲ್ಲಿ ತುಂತುರು ಹನಿ, ಹಿಮವನ್ನು ಸಿಡಿಸುವುದು ಸಾಮಾನ್ಯ.    ಇಂಥ ಹಿಮಚ್ಚಾದಿತ ವಾತಾವರಣದಲ್ಲಿ ಜಲಪಾತ ಕಾಣುವುದು ಸಾಧ್ಯವೆ? ಈ ಸಮಸ್ಯೆಯಿಂದಾಗಿ ಪ್ರವಾಸಿಗರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.


ಜಗತ್ಪಸಿದ್ಧ ಜೋಗಜಲಪಾತವನ್ನು ನೋಡಲು ಬರುವ ಬಹುತೇಕರು ಉತ್ತರ ಕನ್ನಡದ ಅನೇಕ ಜಲಪಾತಗಳನ್ನು ವೀಕ್ಷಿಸಲು ಕುತೂಹಲದಿಂದ ಬರುತ್ತಾರೆ. ಆದರೆ ಮೋಡಕವಿದ ವಾತಾವರಣ, ತುಂತುರು ಮಳೆಯಲ್ಲಿ ಜಲಪಾತ ವೀಕ್ಷಣೆಗೆ ಬಂದರೆ ಜಲಪಾತಗಳು ಹಿಮದಿಂದ ತುಂಬಿ ಕಾಣುವುದೇ ಇಲ್ಲ. ಮಳೆಗಾಲದ ನಂತರ ಬಿಸಿಲು ಬಿದ್ದರೆ ಬಿಸಿಲು, ಉಷ್ಣಕ್ಕೆ ಮಂಜುಕರಗಿ ಜಲಪಾತಗಳ ದರ್ಶನವಾಗುತ್ತದೆ. ಆದರೆ ಈ ವರ್ಷ ಮಳೆಗಾಲ ಮುಗಿಯುವ ಸಮಯಕ್ಕೆ ಮೋಡ, ಮಂಜು ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಜಲಪಾತಗಳೆಲ್ಲಾ ಮಂಜಿನಲ್ಲಿ ಮರೆಯಾಗಿ ಮಸುಕಾಗಿವೆ.


ಈ ವಾತಾವರಣದಲ್ಲೂ ಜಲಪಾತ ನೋಡೇ ತೆರಳುತ್ತೇವೆ ಎನ್ನುವ ಸಾಹಸಿಗಳಿಗೇನೂ ಕಡಮೆಇಲ್ಲ, ಜೋಗ ಜಲಪಾತ, ಬುರುಡೆ ಫಾಲ್ಸ್, ಉಂಚಳ್ಳಿ ಸೇರಿದಂತೆ ಬಹುತೇಕ ಜಲಪಾತಗಳಲ್ಲಿ ಬಿಸಿಲಿಗಾಗಿ ಕಾದು ಕ್ಷಣಮಾತ್ರದಲ್ಲಿ ಮತ್ತೆ ಕವಿಯುವ ಮಂಜನ್ನು ದೂಷಿಸಿ ತೆರಳುವ ಪ್ರವಾಸಿಗರೂ ಸಿಗುತ್ತಾರೆ. ಹಾಗಾಗಿ ಬಿಸಿಲು, ಉಷ್ಣತಾಪಮಾನದ ಸಮಯದಲ್ಲಿ ಜಲಪಾತ ನೋಡುವವರಿಗೆ ಈಗಿನ ವಾತಾವರಣ ಅಡಚಣೆ ಉಂಟುಮಾಡುತ್ತಿದೆ. ಮಲೆನಾಡಿನ ವಾತಾವರಣ ಬಲ್ಲವರು ಅಕ್ಟೋಬರ್ ನಿಂದ ಜನೇವರಿ ತಿಂಗಳುಗ ಳ ವರೆಗೆ ಇಲ್ಲಿಯ ಜಲಪಾತಗಳ ವೀಕ್ಷಣೆಗೆ ಬರುತ್ತಾರೆ. ಆ ಸಮಯದಲ್ಲಿ ಜಿಟಿಜಿಟಿ ಮಳೆ ಮಂಜುಕವಿದ ವಾತಾವರಣ ಇರುವುದಿಲ್ಲ. ಇಂಥ ಪ್ರತಿಕೂಲ ವಾತಾವರಣವಿದ್ದರೂ ಬೆಳಕು, ಬಿಸಿಲು ನುಸುಳುವುದರಿಂದ ಆಗೊಮ್ಮೆ ಈಗೊಮ್ಮೆಯಾದರೂ ಜಲಪಾತಗಳ ದರ್ಶನ ದೊರೆಯುತ್ತಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆಯಾಯ್ತೆಂದು ಧಾವಿಸಿಬಂದು ಇಲ್ಲಿ ಜಲಪಾತ ನೋಡಲಾಗದೆ ಚಡಪಡಿಸಿದ ಅನೇಕ ಪ್ರಕರಣಗಳ ಮಾಹಿತಿಯಿಂದ ವಿಜಯಕರ್ನಾಟಕ ಪ್ರವಾಸಿಗರಿಗೆ ಈ ವಿಶೇಶ ಮಾಹಿತಿ ನೀಡುತ್ತಿದೆ. ನೆನಪಿಡಿ ಅಕ್ಟೋಬರ್ ಮೊದಲು ಜಲಪಾತವೀಕ್ಷಣೆಗೆ ಕಾಲ ಪ್ರಸಕ್ತವಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *