

ಭಾರತ ಸೇರಿದಂತೆ, ವಿಶ್ವದಾದ್ಯಂತ ಕರೋನಾ ವಿಪರೀತ ಪರಿಣಾಮ ಬೀರಿದೆ. ಸಣ್ಣ ಉದ್ದಿಮೆಗಳು, ವ್ಯಾಪಾರಿಗಳು ಹಾನಿಗೆ ಒಳಗಾಗಿ ವ್ಯಾಪಾರ, ಉದ್ಯೋಗ, ಉದ್ದಿಮೆಗಳನ್ನೂ ಬದಲಾಯಿಸಿದ್ದಾರೆ.ಉ.ಕ. ಸಿದ್ಧಾಪುರದಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಕರೋನಾ ನೇರ ಪರಿಣಾಮ ಬೀರಿದೆ. ಬಡಸಂಸ್ಥೆಯಾದ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಂಘ ಕಳೆದ ವಾರ್ಷಿಕ ವರ್ಷದಲ್ಲಿ ಲಕ್ಷಾಂತರ ರೂಪಾಯಿಗಳ ಹಾನಿ ಅನುಭವಿಸಿದರೆ ಟಿ.ಎಂ.ಎಸ್. ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ಲಾಭ ಮಾಡಿದೆ.
ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳಸಹಕಾರಿ ಮಾರಾಟ ಸಂಘ ೨೦೨೦-೨೧ ಸಾಲಿನಲ್ಲಿ೫.೭೮ ಸಾವಿರ ನಿಕ್ಕಿ ಲಾಭ ಗಳಿಸಿದೆ. ಈ ಟಿ.ಎಂ.ಎಸ್.ತನ್ನ ೭೪ ವರ್ಷಗಳ ಇತಿಹಾಸದಲ್ಲಿ ಈ ವರ್ಷ ಗರಿಷ್ಠ ಲಾಭಗಳಿಸಿದೆ ಎಂದು ಅದರ ಆಡಳಿತ ಸಮೀತಿ ಹೇಳಿದೆ. ಟಿ.ಎಂಎಸ್. ನಲ್ಲಿ ಅಡಿಕೆ ವ್ಯಾಪಾರ, ಮಾರಾಟ, ಸಾಲ,ಇತರ ಜೀವನಾವಶ್ಯಕ ವಸ್ತುಗಳ ಮಾರಾಟ- ಖರೀದಿ ವ್ಯವಹಾರಗಳಿವೆ. ಟಿ.ಎಂ.ಎಸ್. ತನ್ನ ಸದಸ್ಯರಿಗೆ ಸಾಲ ನೀಡುತಿದ್ದು ಸಂಘದ ಏಳುಸಾವಿರಕ್ಕಿಂತ ಹೆಚ್ಚಿನ ಸದಸ್ಯರು ಅಡಿಕೆ ಮಾರಾಟ, ಇತರ ಖರೀದಿಗಳನ್ನು ಮಾಡುವ ಮೂಲಕ ಹೆಚ್ಚಿನ ವ್ಯವಹಾರ ಮಾಡಿರುವುದರಿಂದ ಟಿ.ಎಂ.ಎಸ್. ಗೆ ದಾಖಲೆಯ ಲಾಭವಾಗಿದೆ.
ಸಿದ್ಧಾಪುರದ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಂಘ೫೨೪ ಸದಸ್ಯರನ್ನು ಹೊಂದಿ ೩.೧೦ ಲಕ್ಷ ಲಾಭ ಗಳಿಸಿದೆ. ಕರೋನಾ ಅವಧಿ, ಲಾಕ್ ಡೌನ್ ಹಿನ್ನೆಲೆಗಳಲ್ಲಿ ಅಕ್ಕಿ ಮಾಡುವ ಪ್ರಮಾಣ ಮತ್ತು ಸದಸ್ಯರ ವ್ಯವಹಾರ ಕಡಿಮೆ ಇದ್ದುದರಿಂದ ಈ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಲಾಭ ಕಡಿಮೆಯಾಗಿದೆ ಎಂದು ಪ್ಯಾಡಿ ಸೊಸೈಟಿ ಅಧ್ಯಕ್ಷ ರಮಾನಂದ ಹೆಗಡೆ ಮಳಗುಳಿ ಹೇಳಿದ್ದಾರೆ. ಈ ಸಹಕಾರಿ ಸಂಸ್ಥೆಗಳ ವ್ಯವಹಾರ, ಲಾಭಗಳ ಲೆಕ್ಕದಲ್ಲಿ ಬಡ ಸಂಸ್ಥೆ, ಬಡ ಸದಸ್ಯರ ಕೃಷಿ ಹುಟ್ಟುವಳಿಗಳ ಸಂಸ್ಕರಣ ಮತ್ತು ಮಾರಾಟ ಸಹಕಾರಿ ಸಂಘ ಹಾನಿ ಅನುಭವಿಸಿದ್ದರೆ, ಶ್ರೀಮಂತ ಸಂಸ್ಥೆ ಟಿ.ಎಂ.ಎಸ್. ಲಾಭ ಗಳಿಸಿದೆ ಇದರಿಂದ ಕರೋನಾ ಹಾನಿ, ಪರಿಣಾಮ ಶ್ರೀಮಂತರಿಗಿಂತ ಬಡವರನ್ನೇ ಬಾಧಿಸಿದೆ ಎನ್ನುವಂತಾಗಿದೆ.



