ಬಿರುಗಾಳಿ ಎಬ್ಬಿಸಿದ ಹವ್ಯಕರ ಕುರಿತ ಬರಹ!

ಹವ್ಯಕ ಪುರೋಹಿತರ ಹವ್ಯಕರ ಮನೆಲಿಯೇ ಹಗಲು ದರೋಡೆ*

*ಉಂಡೂ ಹೋದ ಕೊಂಡೂ ಹೋದ ..ದೋಚಿಯೂ ಹೋದ*

ಕೊರೊನಾ ಬಂದು ಇಡೀ ದೇಶಕ್ಕೆ ದೇಶವೇ ಕಂಗಾಲಾಗಿ ಹೋದರೂ ಕೆಲವೊಂದು ಜನಂಗೊಕ್ಕೆ ಅರ್ಥವೇ ಆಯಿದಿಲ್ಲೆ.ಇಂದು ಕೊರೋನಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಯಿದು,ಆರೊಬ್ಬಂಗೂ ವ್ಯವಹಾರ ವ್ಯಾಪಾರ ಭಾರೀ ಕಷ್ಟಕರವಾಗಿ ಹೋಯಿದು.ಕೃಷಿಕರ ಪಾಡಂತೂ ಹೇಳಿ ಪ್ರೇಜನ ಇಲ್ಲೆ. ಏನೋ ಅಡಕೆಗೆ ರಜ ಬೆಲೆ ಏರಿತ್ತು ಹೇಳಿ ಅಪ್ಪಗ ಹವಾಮಾನ ವೈಪರೀತ್ಯಂದ ಆದ ಅಕಾಲಿಕ ಮಳೆ ಕೆಲವು ನಷ್ಟ ಅನುಭವಿಸಂತೆ ಮಾಡಿತು.ಇಂತಹ ಎಲ್ಲಾ ಕಷ್ಟ ಇಪ್ಪ ಈಗಾಣ. ಸಮಯಲಿ ಒಂದು ಮನೆಲಿ ಕಾರ್ಯಕ್ರಮ ಮಾಡುವ ಯೋಚನೆ ಇದ್ದರೆ ಬಿಟ್ಟೇ ಬಿಡಕ್ಕಷ್ಟೆ.ಎಂತಕೆ ಹೇಳಿರೆ ಆನು ಇಷ್ಟೆಲ್ಲಾ ಪೀಠಿಕೆ ಹಾಕುಲೆ ಕಾರಣ ಎಂತ ಹೇಳಿರೆ ನಮ್ಮಲ್ಲಿ ಅಪ್ಪ ವೈದಿಕ ಕಾರ್ಯಕ್ರಮದ ಬಗ್ಗೆ ಮಾತಾಡ್ಲೇ ಬೇಕು.ಇಲ್ಲಿ ಹೇಳ್ಳೇ ಬೇಕು,ಅದರಲ್ಲೂ ನಮ್ಮ ಪುರೋಹಿತ ದಕ್ಷಿಣೆಯ ಬಗ್ಗೆ. ಈಗ ನೇರ ವಿಷಯಕ್ಕೆ ಬತ್ತೆ…

.ಮೊನ್ನೆ ಅಕಸ್ಮಾತ್ ಆಗಿ ಎನ್ನ ಸಂಬಂದದ ಹಿರಿಯರು ಹಾರ್ಟ್ ಎಟ್ಯಾಕ್ ಆಗಿ ತೀರಿಹೋದವು .ಆಸ್ಫತ್ರೆಲಿಯೇ ಕೊರೊನ ಹೇಳಿ ಅವನ ಮಗನ ಮಂಡೆ ದೋಚಿದ ವಿಷಯಬೇರೆ.ಅದು ಬಿಡಿ.ನಂತರ ನಮ್ಮ ಹತ್ತನೇ ದಿನದ ಕಾರ್ಯಂದ ಹಿಡುದು ಬೊಜ್ಜ ಶಪುಂಡಿ ಅಪ್ಪಗ ಅಲ್ಲಿ ಈ ಕ್ರಿಯೆ ಮಾಡ್ಸಿದವರ. ಬೊಜ್ಜ ಮಾಡಲೆ ಮತ್ತೊಬ್ಬರು ರೆಡಿಯಾಯಕ್ಕಕ್ಕು.ಎಂತಕೆ ಹೇಳಿರೆ ತ್ರಿಕರ್ಮಲಿ ಕ್ರಿಯೆ ಮಾಡಿ ಬರೋಬ್ಬರಿ ದಕ್ಷಿಣೆ ಗೆ ಮುಗುದ ಕಾಣಿಕೆ ನಲವತ್ತರಿಂದ ಐವತ್ತು ಸಾವಿರ, ಊಟದ್ದು ಹಾಲ್ಂದು,ಮತ್ತೆ ಇತರ ಬೇರೆ.ಅಂಬಗ ಎಂತ ಹೇಳಕ್ಕು?? ಒಬ್ಬ ಒಬ್ಬ ಪುರೋಹಿತ ತೆಕ್ಕೊಂಬ ಕ್ರಿಯಾ ದಕ್ಷಿಣೆ ಬಿಡಿ ಬೇರೆ ಯಾವ. ಜಾತಿಲಿದೆ ಇಲ್ಲದ್ದ ಅಂಬಂಗ ಅಂಬಂಗ ಅಲ್ಲಿ ನಾಂದಿ ಬಾಬ್ತು,ಐವತ್ರು ,ಊಟದ‌ಬಾಬ್ತು ನೂರು,ಹೋಮದ ಬಾಬ್ತು ಐನೂರು ಹೇಳಿ ಅಂಬಂಗ ಅಂಬಗ ದೋಚುವ ಪೈಸೆಗೆ ಲೆಕ್ಕವೇ ಇಲ್ಲೆ,ಇದಕ್ಕೆಲ್ಲಾ ಆರು ಹೊಣೆ??

ಕೊನೆಗೆ ಎರಡೂವರೆ ಮೂರು ಸಾವಿರಂದ ಕಡಿಮೆ ಯಾವ ಬಟ್ಟಕ್ಕಳ ದಕ್ಷಿಣೆಯೂ ಇಲ್ಲೆ.ಮತ್ತೆ ಇಪ್ಪವನ ಬೊಜ್ಜ ಆಗದ್ದೆ ಇಕ್ಕೊ?? *ಸಣ್ಣ ಮಟ್ಟಿಲಿ ಸಂಧಿಶಾಂತಿ ಮಾಡ್ತರೂ ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ಬೇಕು*ಚಿನ್ನದ ಬೆಳ್ಳಿಯ ಪ್ರತಿಮೆ ಬೇರೆ,ಇತರ ನೋಟುಗಳು,ಖರ್ಚುಗಳು ಪ್ರತ್ಯೇಕ,ಇಂದಿನ ಸಂದಿಗ್ನ ಪರಿಸ್ಥಿತಿ ಲಿ ಮದ್ಯಮ ವರ್ಗದವು ಒಂದು ಕಾರ್ಯಕ್ರಮ ಮಾಡೋದಾದರೂ ಹೇಂಗೆ ?? ಉಪನಯನ ಮಾಡ್ಸಲೆ ಏನೂ ಕೆಲಸ ಇಲ್ಲದ್ದರೂ ಜನ‌ಮೂರು ನಾಲ್ಕು ಬಂದು ದಕ್ಷಿಣೆಗೆ ಸಾವಿರ ಸಾವಿರ ದೋಚುವ ಇಂದಿನ ಕಾಲಲಿ ( ಮದುವೆ ನಾಂದಿಯ ಬಗ್ಗೆ ಇನ್ನು ನಿಂಗಳೇ ಆಲೋಚನೆ ಮಾಡಿ) ಪುರೋಹಿತ ವರ್ಗ ಇದಕ್ಕೊಂದು ಕಮಿಟಿಯೋ ಸಂಘವೋ ಮಾಡಿ ಒಂದು ತೀರ್ಮಾನ ಮಾಡಕ್ಕಾದ ಅಗತ್ಯ ಖಂಡಿತ ಇದ್ದಲ್ಲದ?ಇದಕ್ಕೆಲ್ಲಾ ಒಂದು ಕೊನೆ ಬೇಕಲ್ಲದ?? ಇಷ್ಟೆಲ್ಲಾ ಕ್ರಿಯಾದಕ್ಷಣೆ ಹೇಳಿದರೆ ..ತೆಕ್ಕೊಂಡರೆ ಖಂಡಿತ ನಮ್ಮ ಜನ ಇನ್ನು ಕುಲಪುರೋಹಿತರ ಬಿಟ್ಟು ಯಾವುದೇ ಬೇರೆ ದೇವಸ್ಥಾನಲ್ಲಿಯೋ,ಬೇರೆ ಶಿವಳ್ಳಿ ಕೋಟ ಬ್ರಾಹ್ಮಣರ ಮನೆಲಿಯೋ..ಅವರ ಪೌರೋಹಿತ್ಯಲ್ಲಿಯೋ( ಈಗಾಗಲೇ ಅದೆಷ್ಟೋ ಜನ ಮಾಡ್ಸಿದ್ದವು) ಮಾಡುವ ಕಾಲ ಹತ್ತಿರ ಇದ್ದು. ಇಂದು ಶಿವಳ್ಳಿ, ಕೋಟ ಜಾತಿಲಿ ಯಾವುದೇ ಕಾರ್ಯಕ್ರಮದ ಮದ್ಯ ಮದ್ಯಲಿ *ಐವತ್ತು ನೂರು ಐನೂರು* ತೆಕ್ಕ ಹೇಳುವ ಪಂಚಾಯಿತಿಕೆ ಇಲ್ಲದ್ದೇ ಇಪ್ಪಗ ನಮ್ಮದರಲ್ಲಿ ಅದರ ಅಗತ್ಯತೆ ಎಂತ?? ಹಾಂಗೇ ಮಡುಗಸಕ್ಕೇ ಹೇಳಿ ಇದ್ದರೆ ಹತ್ತರ ನೋಟು ಆವುತ್ತಿಲ್ಲೆಯ? ಮತ್ತೆ ಕೊನೆಗೆ ಕ್ರಿಯಾ ದಕ್ಷಿಣೆ ಹೇಳಿ ಯಾವ ಪುರುಷಾರ್ಥ ಕ್ಕೆ ಕೊಡೋದು?? ತೆಕ್ಕೊಂಬಂಗೆ ಮೋರೆಲಿ ಚೋಲಿ ಇದ್ದೋ ? ಕೊನೆಗೆ ಮಂತ್ರಾಕ್ಷತೆ ಸಂದರ್ಬಲಿ ಮೂರು ಸಾವಿರ ಅವಂಗೆ…ಮೂರೂವರೆ ಗೆ ಹೇಳಿಪ್ಪಗ ಕುಲ ಪೌರೋಹಿತ್ಯರಿಂಗೆ ಎಷ್ಟು ತೆಕ್ಕೊಳಕ್ಕು?? ಆ ಸಂದರ್ಭ ಅವ ಮರ್ಯಾದಿ..ಮತ್ತೆ ಆನು ಯಾವಾಗಾದರೂ ಒಂದರಿ ಮಾಡ್ಸೊದಲ್ಲದ ಕೊಡುವ ಅಥವಾ ಇಲ್ಲಿ ಹತ್ರು ಜನರ ಎದುರು ಕೇಳಿ ಕಿರಿಕ್ ಬೇಡ ಹೇಳಿ ಕೊಡ್ತ. ಇವಕ್ಕೆಲ್ಲೆ ನಾಚಿಕೆ ಆಯಕ್ಕು.

ಇಂದು ಪಾಪದವನ ಮನೆಲಿ ಒಂದು ಕಾರ್ಯಕ್ರಮ ಮಾಡದ್ದಾಂಗೆ ಮಾಡಿ ಹಾಕಿದ್ದವು.ಇದಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ಆಯಕ್ಕೆ..ಇಲ್ಲದ್ದರೆ ಮತಾಂತರ ಎಂಬ ಕೂಪ ನಮ್ಮ ಹವ್ಯಕ ವಲಯಕ್ಕೂ ತಟ್ಟದ್ದೇ ಇರ.ಖಂಡಿತ.ಮತ್ತೆ ಇಂದು ಒಂದು ಮನೆಗೆ ಕಾರ್ಯಕ್ರಮಕ್ಕೆ ಪುರೋಹಿತಕ್ಕೆ ಬಂದರೆ ಅವಕ್ಕೆ ಅಲ್ಲಿಯಾಣ ಕಾರ್ಯಕ್ರಮದ ಬಗ್ಗೆ ಚಿಂತೆಯೇ ಇಲ್ಲದ್ದೆ ಮತ್ತೆ ವಹಿಸಿಕೊಂಡ ಕಾರ್ಯಕ್ರಮ ಕ್ಕೆ ಜನ ಮಾಡುವ ಬಗ್ಗೆ..ಮನೆಲಿ ಅಡಕೆ ತೆಗವಲೆ ಬೈಂದವಾ? ಆಳುಗ ಎಷ್ಟು ಜನ ಇದ್ದವು ಹೇಳಿ ಮೊಬೈಲ್ ಗುರುಟುದೇ ಕೆಲಸ.ಇಷ್ಟೆಲ್ಲಾ ಆಗಿದೆ ಬೇಕಾದಷ್ಟು ದಕ್ಷಿಣೆ ತೆಕ್ಕೊಂಡು ಬಂದ ಮನೆಯ ಪೂಜೆ, ಹೋಮ,ಶ್ರದ್ದೆಲಿ ಮಾಡುವ ಯಾವೊಬ್ಬ ಪುರೋಹಿತನೂ ಇಂದು ಇಲ್ಲದ್ದಿಪ್ಪದ್ದು ವಿಪರ್ಯಾಸ,ಇದಕ್ಕೆಲ್ಲಾ ಅಂತ್ಯ ಯಾವಾಗ? ಬೆಕ್ಕಿಗೆ ಘಂಟೆ ಕಟ್ಟುವವು ಆರು??

ಕೊನೆಯದಾಗಿ.ಶ್ರೀ ಮಠಂದ ಇದಕ್ಕೆ ಸೂಕ್ತವಾದ ವ್ಯವಸ್ಥೆ ಮಾಡ್ಸಕ್ಕು,ಆಯಾ ವಲಯದ ಗುರಿಕ್ಕಾರರ ಹಿಡುದು ಪುರೋಹಿತರ ಜೊತೆ ಚರ್ಚಿಸಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಕ್ಕು. ಅಥವಾ ಹಿರಿಯ ಮನೆತನದ ಪುರೋಹಿತರೇ ಆಯಾ ಊರಿನ ಗುರಿಕ್ಕಾರರ ಹಿಡುದು ಒಂದು ಸಘವೋ ಕಮಿಟಿ ಮಾಡಿದರೆ ಒಳ್ಲೆಯದೇ, ಇಲ್ಲದ್ದರೆ ಖಂಡಿತ ಅಪಾಯ ಇದ್ದೇ ಇದೆ.ಇದೆಲ್ಲಾ ಸರಿ ಆತು‌ಹೇಳಿ ಆದರೆ ಮಾತ್ರ ಒಬ್ಬ ಬಡವನೂ ದೇವರ ಕಾರ್ಯ,ಹುಟ್ಟು ಮತ್ತು ಸಾವಿನ ನಡುವೆ ಬಪ್ಪ ಎಲ್ಲಾ ಕರ್ಮಾಂಗ ಮಾಡಲೆ ಎಡಿಗು.ಇಲ್ಲದ್ದರೆ ನಾವುದೇ ಹೆರಾಣವರಾಂಗೆ ಮುಂದಿನ ದಿನಗಳಲ್ಲಿ ಕ್ಷೇತ್ರಲಿ ಪಿಂಡ ಬಿಟ್ಟು ಬಪ್ಪ ದಿನ ದೂರ ಇಲ್ಲೆ‌..ಈಗಾಗಲೇ ಎಲ್ಲಾ ಕಾರ್ಯಗಳು ಹೆರಾಣವರಾಂಗೆ ಅಪ್ಪ ಎಲ್ಲಾ ಲಕ್ಷಣ ಕಾಣ್ತಾ ಇದ್ದು.ದಯವಿಟ್ಟು ಮದ್ಯಪ್ರವೇಶಿಸಿ ಇದಕ್ಕೆ ಅಂತ್ಯ ಹಾಡಿ ಎಂಬುದೇ ಎನ್ನ ವಿನಂತಿ( ಎಲ್ಲಾ ಪುರೋಹಿತರು ಹೇಳಿ ಅಲ್ಲ,ಇಂದಿಗೂ ಕ್ರಿಯಾದಕ್ಷಣೆ ಹೇಳದ್ದೆ ಕೊಟ್ಟ ದಕ್ಷಿಣೆ ತೆಕ್ಕೊಂಬ ಪೌರೋಹಿತ್ಯ ಮನೆ ಇಂದಿಗೂ ಇದ್ದು,ಆದರೆ ಹೆಚ್ಚಿನ ಪುರೋಹಿತರ ಬಗ್ಗೆ ಮೇಲೆ ಇಪ್ಪ ವಿಷಯ)

*ಸಂದೇಶ ಸಾಕಷ್ಟು ಕಳುಹಿಸಿ ಪುರೋಹಿತರಿಂಗೂ ಮುಟ್ಟಲಿ* *ನೊಂದ ಬಡ ಬ್ರಾಹ್ಮಣ* Reply:- ನಿಜ ಹೇಳಿದ್ದೆ, ಎನ್ನ ಮಗನ ಮದುವೆಗೆ ಹವ್ಯಕ ಪುರೋಹಿತರು ಬಂದು ಎಲ್ಲಾ ದೋಚಿ ಹೋದವು, ಪ್ರಶ್ನೆ ಮಾಡಿದ್ದಕ್ಕೆ ಶಾಂತಿ ಹೋಮ ಮಾಡಿಸಿ ಹೇಳಿ ಮತ್ತಷ್ಟು ದೋಚಿದವು? ಈ ಮುಂಡೆ ಮಕ್ಕಳಿಗಾಗಿ ಯಾರೂ ಮತಾಂತರ ಆಗುವುದಿಲ್ಲ ಬದಲಿಗೆ ಮತಾಂತರ ನಿಷೇದ ಕಾನೂನು ಅಡಿ 1 ಲಕ್ಷ ದಂಡ ಕಟ್ಟುವ ಸ್ಥಿತಿ ಪುರೋಹಿತರಿಗೆ ಬರಬಹುದು…..!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *