ಸಿರವಂತೆ ಚಿತ್ರಸಿರಿ ಗೌರಮ್ಮ ಇನ್ನಿಲ್ಲ

ಸಾಗರದ ಸಿರವಂತೆಯ ಚಿತ್ತಾರ ಕುಟಿರದ ಅಮ್ಮ ಗೌರಮ್ಮ ಇಂದು ನಿಧನರಾಗಿದ್ದಾರೆ. ಸಿರವಂತೆಯಲ್ಲಿ ಚಿತ್ತಾರದ ಪ್ರದರ್ಶನ, ತರಬೇತಿ ನಡೆಸುತ್ತ ಗ್ರಾಮೀಣ ಕಲೆ ಪೋಶಿಸುತ್ತಿರುವ ಚಂದ್ರಶೇಖರ್‌ ಸಿರವಂತೆಯವರ ಧರ್ಮಪತ್ನಿ ಗೌರಿ ಚಂದ್ರಶೇಖರ್‌ ರಿಗೆ ಸಹಧರ್ಮಿಣಿ,ವೃತ್ತಿಧರ್ಮಿಣಿಯಾಗಿ ಚಂದ್ರಶೇಖರ್‌ ರ ಸಾಹಸ, ಹವ್ಯಾಸಗಳಿಗೆ ಸಾಥಿಯಾಗಿದ್ದರು. ಇದೇ ವಾರ ಚಿಕ್ಕ ಅಪಘಾತಕ್ಕೀಡಾಗಿ ಪ್ರಜ್ಞಾಹೀನರಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಇಂದು ನಿಧನರಾಗಿರುವುದು ತಿಳಿದುಬಂದಿದೆ.‌

ಜೋಗ,ಸಾಗರ ರಸ್ತೆಯ ತಮ್ಮ ಪುಟ್ಟ ಮನೆಯಲ್ಲಿ ಗಂಡನೊಂದಿಗೆ ಚಿತ್ತಾರ ಕುಟಿರ ಕಟ್ಟಿಕೊಂಡಿದ್ದ ಗೌರಿ ತಮ್ಮ ಮುಗ್ಧತೆ,ಆತಿಥ್ಯಗಳಿಂದ ಪರಿಚಿತರ ಆತ್ಮೀಯರಾಗಿದ್ದರು.ಮೃತರು ಗಂಡ ಚಂದ್ರಶೇಖರ್‌,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗೌರಮ್ಮನವರ ಸಾವಿಗೆ ದಿಗ್‌ ಭ್ರಾಂತರಾಗಿರುವ ಅನೇಕರಲ್ಲಿ ಡಾ. ಮಹೇಂದ್ರಕುಮಾರ್‌,ರಾಮಪ್ಪಡಿ,ಪರಿಸರತಜ್ಞ ಎಂ.ಬಿ.ನಾಯ್ಕ,ಹರ್ಷಕುಮಾರ ಕುಗ್ವೆ,ತೀ.ನಾ.ಶ್ರೀನಿವಾಸ್‌,ಶಿವರಾಮ ಪಡವಗೋಡು,ಹುಚ್ಚಪ್ಪ ಮಂಡಗಳಲೆ ಸೇರಿದಂತೆ ಕೆಲವರು ಸಂತಾಪ ಸೂಚಿಸಿದ್ದಾರೆ.

ಸಿರವಂತೆಯ ಅನಾಮಿಕ ಶಕ್ತಿ ಗೌರಮ್ಮ-

ಸಾಗರ ಜೋಗ ರಸ್ತೆಯ ಬಲಬದಿಗೆ ಸಿರವಂತೆಯಲ್ಲಿ ಇರುವ ಚಿತ್ರಸಿರಿ ಚಿತ್ತಾರ ಕುಟೀರದಲ್ಲಿ ಅನಾಮಿಕಳಂತೆ ಸದಾ ಚಟುವಟಿಕೆಯಿಂದ ಇರುತಿದ್ದ ಒಂದು ಜೀವದ ಹೆಸರು ಗೌರಿ,ಅಲ್ಲಿ ಬರುತಿದ್ದ ಅನೇಕರಿಗೆ ಚಂದ್ರಶೇಖರ್‌ ಸಿರವಂತೆ ಮಾತನಾಡಿಸುತ್ತಾರೆ,ಚರ್ಚಿಸುತ್ತಾರೆ,ಅವರದೇ ಕಲ್ಪನೆಯ ಕಣ್ಣು ತೆರೆಯುವ ಬುದ್ಧನ ಬಗ್ಗೆ ತಿಳಿಸಿ ಪ್ರವಾಸಿಗರ ಹೃದಯ ಅರಳಿಸುತ್ತಾರೆ. ಆದರೆ ಗೌರಿ ಅಕ್ಷರಶ: ಅನಾಮಿಕಳಂತೆ ಕೆಲಸ ಮಾಡುತ್ತಾ ಗಂಡನ ಸಂಜ್ಞೆ,ಸೂಚನೆ ಮೇರೆಗೆ ಆಯಾ ಸಮಯಕ್ಕೆ ತಕ್ಕಂತೆ ಟೀ,ಕಾಫಿ,ಕಷಾಯ ನೀಡಿ ಮುಗ್ಧತೆಯ ಮಾತಿನಿಂದ ಆತ್ಮೀಯರಾಗುತ್ತಾರೆ. ಈ ಸಂದರ್ಭಗಳಿಗೆ ಸಾಕ್ಷಿಯಾದ ನನ್ನಂತಹ ಅನೇಕರಿಗೆ ಚಿತ್ರಸಿರಿ,ಚಂದ್ರಣ್ಣ,ಗೌರಕ್ಕ ಅವರ ಕುಟುಂಬವೆಂದರೆ.. ಒಂಥರಾ ಆತ್ಮೀಯತೆ.

ಲೋಕದ ಕೊಂಕಿಗೆ ಕೂದಲನ್ನೂ ಕೊಂಕಿಸಿಕೊಳ್ಳದ ಈ ಜೋಡಿ ಸನ್ಮಾನಿಸಿದ ಸಾಧಕರೆಷ್ಟು,ನಾಡು, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಮಲೆನಾಡಿನ ಚಿತ್ತಾರ,ಭತ್ತದ ತೆನೆ ಸರ ಪರಿಚಯಿಸಿದ ಊರುಗಳೆಷ್ಟು ಲೆಕ್ಕವಿಟ್ಟವರ್ಯಾರು? ಈ ಸಾಧನೆಯ ಕೇಂದ್ರವ್ಯಕ್ತಿ ಚಂದ್ರಶೇಖರ್‌ ಆದರೆ ಚಂದ್ರಣ್ಣನವರಿಗೆ ಬೇಕಾದಾಗಲೆಲ್ಲಾ ಒದಗುವ ಎಡಗೈ, ಬಲಗೈ ಗೌರಮ್ಮ ಹೀಗಿರದಿದ್ದಿದ್ದರೆ ಚಂದ್ರಣ್ಣ ದೇಶ-ಕೋಶ ನುಗ್ಗುತ್ತಿರಲಿಲ್ಲ. ಸದಾ ಸಂಗಾತಿಯಾಗಿ ನೋವು-ನಲಿವಿನಲ್ಲಿ ಒಂದಾಗಿರುತಿದ್ದ ಗೌರಮ್ಮ ಇಲ್ಲದೆ ಚಂದ್ರಣ್ಣ ಅಪೂರ್ಣ. ನಾಡಿನ ಅನೇಕರ ಪ್ರೀತಿ ಪಾತ್ರ ಗೌರಮ್ಮ ಚಿಕ್ಕ ಅಪಘಾತಕ್ಕೊಳಗಾಗಿ ನಮ್ಮಿಂದ ದೂರವಾಗಿರುವುದು ನಮಗೆಲ್ಲರಿಗೆ ಬೇಸರ ನಾಡಿಗೆ ನಿಜಕ್ಕೂ ತುಂಬದ ಹಾನಿ. ಸಿರವಂತೆಯ ಚಿತ್ರಸಿರಿಯಲ್ಲಿ ಉಸಿರಾಗಿ,ಹೆಸರಾಗಿ ಹಿತವಾಗಿ ಮಿತವಾಗಿ ಬದುಕಿದ್ದ ಗೌರಮ್ಮನ ಸಾವು ನಮ್ಮೆಲ್ಲರ ಪಾಲಿಗೆ ನೋವು. -ಕನ್ನೇಶ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *