
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಅಪರಾಧ: ಆದರೆ ಕಾರಿನಲ್ಲಿ ಕುಳಿತು ಎಣ್ಣೆ ಹೊಡೆಯುವುದು ಕಾನೂನು ಬಾಹೀರವೇ?
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ ಚಾಲನೆ ಮಾಡುವಾಗ್ಲೂ ಡ್ರಿಂಕ್…

ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂದು ಎಲ್ಲರಿಗೂ ಗೊತ್ತು. ಆದರೆ ಮೋಜಿಗಾಗಿ ಕಾರಿನಲ್ಲಿ ಕೂತು ಅನೇಕರು ಮದ್ಯ ಸೇವಿಸುವುದನ್ನು ನಾವು ನೋಡಿದ್ದೇವೆ. ಅನೇಕ ಜನರು ವಾಹನ ಚಾಲನೆ ಮಾಡುವಾಗ್ಲೂ ಡ್ರಿಂಕ್ ಮಾಡುತ್ತಾರೆ. ಇದು ತಪ್ಪು ಅನ್ನೋದು ನಮ್ಮ ಅರಿವಿಗೆ ಬರುತ್ತದೆ. ಆದರೆ ಕಾರು ಅನ್ನೋದು ನಿಮ್ಮ ಸ್ವಂತದ್ದಾಗಿರೋದ್ರಿಂದ ಅದರಲ್ಲಿ ಕೂತಿರುವುದು ಖಾಸಗಿ ಜಾಗ ಅನ್ನೋದು ಹಲವರ ಲೆಕ್ಕಾಚಾರ. ಇದರಲ್ಲಿ ಕುಳಿತು ಮದ್ಯ ಸೇವಿಸಿದ್ರೆ ತಪ್ಪೇನು ಅನ್ನೋದು ಹಲವರ ಅಭಿಪ್ರಾಯ.
ಇನ್ನೊಂದು ವಾದದ ಪ್ರಕಾರ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡೋದು ಅಪರಾಧ ಅಂತಾ ಇನ್ನೊಂದಿಷ್ಟು ಜನ ಹೇಳ್ತಾರೆ. ಆದ್ದರಿಂದ ಇಂದು ನಾವು ಕಾರು ಖಾಸಗಿ ಸ್ಥಳವೇ ಅಥವಾ ಸಾರ್ವಜನಿಕ ಸ್ಥಳವೇ ಅನ್ನೋ ಬಗ್ಗೆ ಸರಿಯಾದ ಉತ್ತರವನ್ನು ಹುಡುಕುವ ಕೆಲಸ ಮಾಡೋಣ. ಅಲ್ಲದೆ ಕಾರಿನಲ್ಲಿ ಕುಳಿತು ಮದ್ಯ ಸೇವಿಸುವುದು ಕಾನೂನು ಬಾಹಿರವೇ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
ಕಾರಿನಲ್ಲಿ ಮದ್ಯಪಾನ ಮಾಡುವುದು ಕಾನೂನುಬಾಹಿರವೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ಕಾರು ಸಾರ್ವಜನಿಕ ಸ್ಥಳವೇ ಅಥವಾ ಖಾಸಗಿ ಜಾಗವೇ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ನಂತರವೇ ಕಾರಿನಲ್ಲಿ ಮದ್ಯಪಾನವು ಯಾವ ವರ್ಗದಲ್ಲಿ ಸೇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ನ್ಯಾಯಾಲಯಗಳು ಸಹ ಕಾರನ್ನು ಸಾರ್ವಜನಿಕ ಹಾಗೂ ಖಾಸಗಿ ಸ್ಥಳವೆಂದು ಪರಿಗಣಿಸಿವೆ. ಆದ್ರೆ ವಾಸ್ತವವಾಗಿ ಘಟನೆಯನ್ನು ನೋಡುವಾಗ ಕಾರನ್ನು ಯಾವ ಜಾಗದಲ್ಲಿ ನಿಲ್ಲಿಸಲಾಗಿದೆ ಹಾಗೂ ಆ ಸಮಯದಲ್ಲಿನ ಪರಿಸ್ಥಿತಿಯ ಮೇಲೆ ಪ್ರಕರಣ ಅವಲಂಬಿತವಾಗಿರುತ್ತದೆ. ಅಂದಹಾಗೆ ನಿಮ್ಮ ಮನೆಯಿಂದ ಹೊರಬಂದ ನಂತರ ಕಾರು ಚಲಿಸುತ್ತಿದ್ದರೆ ಅಥವಾ ರಸ್ತೆಯ ಮೇಲೆ ನಿಲ್ಲಿಸಿದರೆ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿದ್ದರೆ ಅದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣನೆ ಮಾಡಲಾಗುತ್ತದೆ. ಈ ವೇಳೆ ಎಲ್ಲಾ ಕೆಲಸಗಳನ್ನು ಕಾರಿನಲ್ಲಿಯೂ ಮಾಡಲಾಗುವುದಿಲ್ಲ ಅನ್ನೋದನ್ನು ಸಾಮನ್ಯವಾಗಿ ನಂಬಲಾಗಿದೆ.
ದೆಹಲಿ ಹೈಕೋರ್ಟ್ ವಕೀಲರ ಪ್ರಕಾರ, “ಇತ್ತೀಚೆಗೆ, ಕಾರಿನಲ್ಲಿ ಮಾಸ್ಕ್ ಹಾಕುವ ಕುರಿತು ಚರ್ಚೆ ನಡೆದಾಗ ರಸ್ತೆಯಲ್ಲಿ ಓಡುವ ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಿ ಅದನ್ನು ಕಡ್ಡಾಯಗೊಳಿಸಲಾಗಿತ್ತು. ಕಾರನ್ನು ಖಾಸಗಿ ಸ್ಥಳವೆಂದು ಪರಿಗಣಿಸುವುದು ಕಾನೂನಿನ ಮಿಶ್ರ ಪ್ರಶ್ನೆಯಾಗಿದೆ. ಕಾರು ಸಾರ್ವಜನಿಕವೇ ಅಥವಾ ಇಲ್ಲವೇ ಎಂಬುದನ್ನು ಸ್ಥಳದಿಂದ ನಿರ್ಧರಿಸಲಾಗುತ್ತದೆ.
ಕೆಲವೊಮ್ಮೆ ನ್ಯಾಯಾಲಯದ ಕಡೆಯಿಂದ ಕಾನೂನುಗಳ ವ್ಯಾಖ್ಯಾನದ ವೇಳೆ ನ್ಯಾಯಾಂಗವೇ ನಿರಾಕರಿಸುವಂತಹ ಸನ್ನಿವೇಶಗಳು ಉದ್ಭವವಾಗುತ್ತವೆ. ದೆಹಲಿ ಹೈಕೋರ್ಟ್ ಕಾರನ್ನು ಸಾರ್ವಜನಿಕ ಸ್ಥಳವೆಂದು ಘೋಷಿಸಿದ್ದರೂ 2021ರಲ್ಲಿ ಬೂಟಾ ಸಿಂಗ್ ವರ್ಸಸ್ ಸ್ಟೇಟ್ ಆಫ್ ಹರಿಯಾಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾರನ್ನು NDPCA ಯ ಸೆಕ್ಷನ್ 43ರ ಅಡಿಯಲ್ಲಿ ಖಾಸಗಿ ಸ್ಥಳವೆಂದು ಪರಿಗಣಿಸಿತು.
ಕಾರಿನಲ್ಲಿ ಮದ್ಯ ಸೇವಿಸುವುದು ಕಾನೂನು ಬಾಹಿರವೇ?
ಇಂತಹ ಪರಿಸ್ಥಿತಿಯಲ್ಲಿ ಭಾರತದ ಕಾನೂನು ರಸ್ತೆಯಲ್ಲಿ ಓಡುವ ಅಥವಾ ನಿಲ್ಲಿಸುವ ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗುತ್ತದೆ. ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿ ಯಾರಾದರೂ ಮದ್ಯಪಾನ ಮಾಡುತ್ತಿದ್ದರೆ ಅದು ಕಾನೂನುಬಾಹೀ ರವಾಗಿದೆ. ಆದರೆ ಕಾರನ್ನು ಖಾಸಗಿ ಜಾಗದಲ್ಲಿ ಅಂದರೆ ನಿಮ್ಮ ಗ್ಯಾರೇಜ್‌ನಲ್ಲೋ ಅಥವಾ ಇನ್ಯಾವುದೋ ಪ್ರೈವೇಟ್ ಜಾಗದಲ್ಲಿ ನಿಲ್ಲಿಸಿ ಮದ್ಯ ಕುಡಿಯಬಹುದು. (KPC)
