ಶಾಸಕ ಹಾಲಪ್ಪ ಮೇಲೆ ಕ್ರಮಕ್ಕೆ ಗೋಪಾಲಕೃಷ್ಣ ಒತ್ತಾಯ

ಶಾಸಕ ಹಾಲಪ್ಪ ಸುಮ್ಮುಖದಲ್ಲೇ ಹಲ್ಲೆ ಪ್ರಕರಣ : FIR ದಾಖಲಿಸುಂತೆ ಬೇಳೂರು ಗೋಪಾಲಕೃಷ್ಣ ಆಗ್ರಹ

https://samajamukhi.net/2022/03/?fbclid=IwAR3rTX5NW1YjVupLan6YLob_Wjpsyy5PkLDXCU-VZhYc7yyj6mByosuo-ps

ಶಾಸಕ ಹಾಲಪ್ಪ ಎಫ್ಐಆರ್ ಹಾಕದಂತೆ ಪೊಲೀಸರ ಮೇಲೆ ಹಾಕಿರುವ ಒತ್ತಡವನ್ನು ಹಿಂಪಡೆದು, ಅವರೇ ಎಫ್ಐಆರ್ ದಾಖಲಿಸಬೇಕು. ಅವರ ಸಮ್ಮುಖದಲ್ಲೇ ನಡೆದ ಹಲ್ಲೆಗೆ ಬೇರೆ ಯಾರು ಸಾಕ್ಷಿ ಬೇಡ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಸಾಗರದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಸಮ್ಮುಖದಲ್ಲೇ ಹಲ್ಲೆ ನಡೆದಿದ್ದು, ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಸಾಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.https://prod.suv.etvbharat.com/v2/smart_urls/6243294e71d60097bf977eed/embedplayer1?player_version=v3&notplay=true&autoplay=false&mute=false&thumbnailurl=https://etvbharatimages.akamaized.net/etvbharat/prod-

ಬೇಳೂರು ಗೋಪಾಲಕೃಷ್ಣ ಆಗ್ರಹ

ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ‌ ಸಮ್ಮುಖದಲ್ಲಿ ನಡೆದಂತಹ ಹಲ್ಲೆಯನ್ನ ಖಂಡಿಸಬೇಕಾಗಿದೆ. ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ಸರ್ವ ಸದಸ್ಯರ ಸಭೆಯಲ್ಲಿ ಶಾಸಕರ ಬೆಂಬಲಿಗರು ಮಾಡಿದ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತದ್ದು. ಹಲ್ಲೆ ನಂತರ ಜಗದೀಶಗೌಡ ಮತ್ತು ಶ್ರೀಪಾದ ಹೆಗಡೆ ನಿಸರಾಣಿಯವರ ಮನೆಗೆ ನಾನು ಭೇಟಿ ನೀಡಿ ಸಮಾಧಾನ ಹೇಳಿದ್ದೇನೆ. ನಾನು ಭೇಟಿ ನೀಡಿದಾಗ ಅವರು ಕುಟುಂಬದ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಅದರ ಶಾಪ ಶಾಸಕ ಹಾಲಪ್ಪಗೆ ತಟ್ಟಲಿದೆ ಎಂದು ಕಿಡಿಕಾರಿದರು.

ಪೊಲೀಸರು ಸಹ ಹಾಲಪ್ಪರ ಬೆಂಬಲಕ್ಕೆ ನಿಂತಿದ್ದಾರೆ : ಶ್ರೀಪಾದ ಹೆಗಡೆಯವರ ಹೆಂಡತಿ ಮತ್ತು ಮಗಳು ಹಲ್ಲೆಯಾದಾಗ ಅಳುತ್ತಿದ್ದರು. ಆದರೆ ಶಾಸಕ ಹಾಲಪ್ಪ ಅದನ್ನು ನೋಡಿ ನಗುತ್ತಿದ್ದರಂತೆ ಇದು ನೀಚತನದ ಪರಮಾವಧಿ. ಬಿಜೆಪಿ ಶಿಸ್ತಿನ ಪಕ್ಷ, ಆದರೆ ಹಲ್ಲೆ ನಡೆದ ಸ್ಥಳದಲ್ಲಿದ್ದ ಶಾಸಕರ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ವಿಷಯದಲ್ಲಿ ಪೊಲೀಸರು ಸಹ ಹಾಲಪ್ಪರ ಬೆಂಬಲಕ್ಕೆ ನಿಂತಿದ್ದಾರೆ. ಈವರೆಗೂ ಎಫ್ಐಆರ್ ದಾಖಲಾಗದಿರುವುದು ದುರಂತವೇ ಸರಿ ಎಂದು ದೂರಿದರು.

ಈ ವಿಷಯವನ್ನು ನಾನು ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಳಿ ಪ್ರಸ್ತಾಪಿಸುತ್ತೇನೆ. ಶಾಸಕರಾದವರು ಎಲ್ಲರನ್ನು ಜೊತೆಗೊಯ್ಯಬೇಕು. ಆದರೆ ಒಡೆದು ಆಳುವ ತಂತ್ರಮಾಡುವ ಕೆಲಸ ಶಾಸಕ ಹಾಲಪ್ಪ ಮಾಡುತ್ತಿದ್ದಾರೆ. ಶಾಸಕರಿಗೆ ಸಾಗರದ ಜನತೆ ಮತ ನೀಡಿದ್ದು, ಯಡಿಯೂರಪ್ಪನವರ ಮುಖ ನೋಡಿಯೇ ವಿನಃ ಹಾಲಪ್ಪನನ್ನು ನೋಡಿ ಅಲ್ಲ.‌ ವಲಸಿಗರಾದವರು ಶಾಸಕರಾದರೇ ಹೊಡೆದಾಟವೇ ಗತಿ ಎಂದು ಆರೋಪಿಸಿದರು.‌

ಎಫ್ಐಆರ್ ದಾಖಲಿಸುವಂತೆ ಆಗ್ರಹ : ಈ ಕೂಡಲೇ ಶಾಸಕರು ಎಫ್ಐಆರ್ ಹಾಕದಂತೆ ಪೊಲೀಸರ ಮೇಲೆ ಹಾಕಿರುವ ಒತ್ತಡವನ್ನು ಹಿಂಪಡೆದು, ಅವರೇ ಎಫ್ಐಆರ್ ದಾಖಲಿಸಬೇಕು. ಅವರ ಸಮ್ಮುಖದಲ್ಲಿ ನಡೆದ ಹಲ್ಲೆಗೆ ಬೇರೆ ಯಾರೂ ಸಾಕ್ಷಿ ಬೇಡ. ನಮ್ಮ ಸಾಗರ ಶಾಂತವಾಗಿತ್ತು. ಈಗ ಗೂಂಡಾಗಿರಿ ನಗರ ಆಗುತ್ತಿದೆ. ನನ್ನ ಹತ್ತು ವರ್ಷಗಳ ಆಡಳಿತದಲ್ಲಿ ಎಲ್ಲಿಯೂ ಹಲ್ಲೆಗಳು, ಗೂಂಡಾ ವರ್ತನೆಗಳು ನಡೆದಿರಲಿಲ್ಲ. ಆದರೆ, ಹಾಲಪ್ಪ ಅವಧಿಯಲ್ಲಿ ನಿರಂತರವಾಗಿ ಹಲ್ಲೆಗಳಾಗುತ್ತಿವೆ. ಆಸ್ಪತ್ರೆಯಲ್ಲೂ ಹಲ್ಲೆ ಮಾಡಿದರು. ಪ್ರಶ್ನೆ ಮಾಡುವವರನ್ನು ಹೆದರಿಸಿಡುವ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರೇ ಕೆರೆಯ ಜಾಗ ಒತ್ತುವರಿ ..? : ಶಾಸಕರು‌ ಸಂತೆ ಮಾರುಕಟ್ಟೆಯನ್ನು ಮದುವೆ ಆರತಕ್ಷತೆಗೆ ಬಳಸಿದ್ದಾರೆ. ಅದನ್ನು, ಕೂಡಲೇ ಲೋಕಾರ್ಪಣೆ ಮಾಡಬೇಕು.‌ ಗಣಪತಿ ಕೆರೆ ವಿಚಾರದಲ್ಲಿ ಒತ್ತುವರಿ ಮಾಡಿದ್ದಕ್ಕೆ ಹಾಲಪ್ಪನವರಿಗೆ ನೋಟಿಸ್ ನೀಡಲಾಗಿದೆ. ಶಾಸಕರೇ ಕೆರೆಯ ಜಾಗ ಒತ್ತುವರಿ ಮಾಡಿದರೆ ಹೇಗೆ? ಇತ್ತೀಚೆಗೆ ಸಾಗರಕ್ಕೆ ಶಿವಾಜಿ ಜಯಂತಿಗೆಂದು ಬಂದಿದ್ದ ಆರ್​ಎಸ್​ಎಸ್​ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರು ಶಾಸಕರ ವಿರುದ್ಧ ಹರಿಹಾಯ್ದಿದ್ದರು ಎಂದರು.

ಅವರು ಬಿಜೆಪಿಯವರು ಈ ಹೇಳಿಕೆ ನೀಡಿರುವುದು ಅಧಿಕಾರಿಗಳಿಂದ ತಪ್ಪು ನಡೆಯಲು ಶಾಸಕರು ಕಾರಣ ಎಂದಾಗಿರಬಹುದು. ಜಗದೀಶಗೌಡರು ಮತ್ತು ಶ್ರೀಪಾದ ಹೆಗಡೆ ನಿಸರಾಣಿ ಇಬ್ಬರು ಬಿಜೆಪಿ ಪಕ್ಷದವರು ಸ್ವಪಕ್ಷದವರ ಮೇಲೆಯೇ ಹಲ್ಲೆ ನಡೆಸುವಷ್ಟು ನೀಚತನ ತೋರಿದ್ದಾರೆ ಎಂದು ಬೇಳೂರು ವಾಗ್ದಾಳಿ ನಡೆಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೂರು ದಿವಸಗಳ ಶ್ರೀ ಬಂಕೇಶ್ವರ ದೇವರ ಅಷ್ಟಬಂಧ

ಸಿದ್ದಾಪುರ ಇಲ್ಲಿಯ ಹೊಸೂರಿನ ಶ್ರೀ ಬಂಕೇಶ್ವರ ದೇವರ ಅಷ್ಟಬಂಧ,ಪುನ:ಪ್ರತಿಷ್ಠೆ, ಶ್ರೀ ವೀರಭದ್ರ ನೂತನ ದೇವಾಲಯ ಸಮರ್ಪಣೆ, ಗಣಪತಿ.ಪಾರ್ವತಿ,ನಂದಿ, ವೀರಭದ್ರ ಸಹಿತ ದೇವರ ಪ್ರತಿಷ್ಠೆ ಹಾಗೂ...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *