

ಹೆಚ್ಚಿಸಿದ ಜಿ ಎಸ್ ಟಿ ಹಿಂಪಡೆಯುವಂತೆ ಪಟ್ಟಣದಲ್ಲಿ ಆಮ್ ಆದ್ಮಿ ಪಾರ್ಟಿ ಯವರು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ವೀರಭದ್ರ ನಾಯ್ಕ, , ಮಾತನಾಡಿ
ಇಂದು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸುತ್ತಿದೆ. ಬಿಜೆಪಿ ಪಕ್ಷದ ಶಾಸಕರು ಹಾಗೂ ಸಂಸದರು ದೇಶದ ಸಂಪತ್ತನ್ನು ಲೂಟಿ ಹೊಡೆದಿರುವ ಪರಿಣಾಮ ಜನಸಾಮಾನ್ಯರ ಮೇಲೆ ಟ್ಯಾಕ್ಸ್ ಬರೆ ಎಳೆದು ಕೇಂದ್ರ ಸರ್ಕಾರ ಜಿ ಎಸ್ ಟಿ ರೂಪದಲ್ಲಿ ಟ್ಯಾಕ್ಸ್ ವಸೂಲಿಗೆ ಮುಂದಾಗಿದೆ, ಹಾಗಾಗಿ ನಮ್ಮ ಆಮ್ ಆದ್ಮಿ ಪಕ್ಷ ಈ ದೇಶದಾದ್ಯಂತ ಪ್ರತಿಭಟನೆ ಮಾಡಬೇಕು, ಪ್ರತಿ ತಾಲೂಕುಗಳಲ್ಲಿ ಈ ಕುರಿತು ಪ್ರತಿಭಟಿಸಬೇಕೆಂದು ಹೊರಡಿಸಿದ ಆದೇಶದಂತೆ ನಾವು ಇಂದಿನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ
ಆಡಳಿತರೂಢ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚುನಾವಣೆ ವೇಳೆಯಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸಬೇಕು ಹಾಗೂ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಜನಸಾಮಾನ್ಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ವಿವಿಧ ಯೋಜನೆಗಳಡಿ ರೈತರಿಗೆ ಭರ್ಜರಿ ಸಬ್ಸಿಡಿ.. ಈಗಲೇ ಅರ್ಜಿ ಸಲ್ಲಿಸಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕಾಶ್ ಅಣ್ಣಪ್ಪ ಕೊಂಡ್ಲಿ ಮಾತನಾಡಿ
ಸಾಮಾನ್ಯ ಜನರು ಬಳಸುವ ಜೀವನ ಅವಶ್ಯಕ ವಸ್ತುಗಳ ಮೇಲೆ ಟ್ಯಾಕ್ಸ್ ಹಾಕುವ ಬದಲು ಕೇಂದ್ರ ದೊಡ್ಡ ದೊಡ್ಡ ವ್ಯಾಪಾರ ವ್ಯವಹಾರ ದ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಿ. ಅದು ಕೇಂದ್ರ ಸರ್ಕಾರದಿಂದ ಸಾಧ್ಯವಿಲ್ಲ ಯಾಕೆಂದರೆ ಅವರು ಶ್ರೀಮಂತ ಜನರು ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಹಾಲು ಮೊಸರು ಸೇರಿದಂತೆ ಜೀವನವಶ್ಯಕ ವಸ್ತುಗಳ ಮೇಲೆ ಸರ್ಕಾರ 18% ವರೆಗೆ ತೆರಿಗೆ ವಿಧಿಸಿದೆ ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ ತಕ್ಷಣ ಕೇಂದ್ರ ಸರ್ಕಾರ ಜೀವನ ಅವಶ್ಯಕ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಹಿಂಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಣ ನಾಯ್ಕ್ ಪ್ರಮುಖರಾದ ಲೋಕೇಶ್ ಹೆಗಡೆ, ಹನೀಫ್ ಪಕ್ಷದ ಕಾರ್ಯಕರ್ತರು ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು.
*

