

ಸಿದ್ದಾಪುರ: ಯಾವುದೇ ಪ್ರದರ್ಶನ ಚೆನ್ನಾಗಿ ಮೂಡಿಬರಬೇಕೆಂದರೆ ನಿರ್ದೇಶಕನ ಪಾತ್ರ ಬಹಳ ಮುಖ್ಯ. ಉತ್ತಮ ನಿರ್ದೇಶಕರಿಂದ ಮಾತ್ರ ಕಲಾವಿದರಲ್ಲಿರುವ ಕಲೆ ಬೆಳಗಲು ಸಾಧ್ಯ ಎಂದು ಸ್ವಸ್ತಿಕ್ ಟ್ರೇಡರ್ಸ್ ಮಾಲೀಕರಾದ ರಾಮಚಂದ್ರ ಸುಬ್ರಾಯ ಭಟ್ಟ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ರಂಗಸೌಗಂಧ ಏರ್ಪಡಿಸಿದ್ದ ಧರ್ಮ ಸರ್ಮಾಜ್ಯ ನಾಟಕದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿ ಎಸ್ ಎಸ್ ನಿರ್ದೇಶಕ ರಾಮಕೃಷ್ಣ ಹೆಗಡೆ ಅಳಗೊಡು ಮಾತನಾಡಿ, ಇಂದಿನ ಕಾಲದಲ್ಲಿ ನಾಟಕ ತಂಡ, ಯಕ್ಷಗಾನ ಮೇಳಗಳನ್ನು ಕಟ್ಟಿ ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ. ಯಕ್ಷಗಾನ, ನಾಟಕಗಳು ಉಳಿದಾಗ ಮಾತ್ರ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಅದಕ್ಕೆ ಅಂತಹ ಕಲಾ ತಂಡಗಳಿಗೆ ನಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಸಭೆಯಲ್ಲಿ ಉಪಸ್ಥತರಿದ್ದರು ಮಾತನಾಡಿದರು.
ನಂತರ ರಂಗ ಸೌಗಂಧ ತಂಡದವರಿಂದ ದಿ.ಸೀತಾರಾಮ ಶಾಸ್ತ್ರಿ ಹುಲಿಮನೆ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ಧರ್ಮಸಾಮ್ರಾಜ್ಯ ನಾಟಕ ಪ್ರದರ್ಶನಗೊಂಡಿತು.ಸಂಗೀತದಲ್ಲಿ ರಾಜೇಂದ್ರ ಕೊಳಗಿ,ಜಯರಾಮ ಭಟ್ಟ ಹೆಗ್ಗಾರಳ್ಳಿ,ಶುಭಾ ರಮೇಶ, ಭೂಮಿಕಾ ಹೆಗಡೆ ಹೊಸಗದ್ದೆ ಸಹಕರಿಸಿದರು.
ಗಣಪತಿ ಹೆಗಡೆ ಗುಂಜಗೋಡು, ರಾಜಾರಾಮ ಭಟ್ಟ ಹೆಗ್ಗಾರಳ್ಳಿ, ರಾಮ ಅಂಕೋಲೇಕರ,ನಾಗಪತಿ ಭಟ್ಟ ವಡ್ಡಿನಗದ್ದೆ, ಶ್ರೀಪಾದ ಹೆಗಡೆ ಕೋಡನಮನೆ, ಅಜಿತ ಭಟ್ಟ ಹೆಗ್ಗಾರಳ್ಳಿ, ಜನಾರ್ಧನ ಭಟ್ಟ ಗೋಕರ್ಣ, ನಂದನ ನಾಯ್ಕ ಅರಶಿನಗೋಡ,ಪ್ರವೀಣಾ ಹೆಗಡೆ ಗುಂಜಗೋಡು, ಜಯಶ್ರೀ ಹೆಗಡೆ ವಡ್ಡಿನಗದ್ದೆ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.


ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಕೋಟೆ ಹನುಮಂತ ದೇವಾಲಯದ ಆಡಳಿತ ಸಮಿತಿ ಹಾಗೂ ಕೋಟೆ ಹನುಮಂತ ಪ್ರತಿಷ್ಠಾನದ ವತಿಯಿಂದ ವಿಶೇಷ ಸೇವಾಕರ್ತರು, ನಿವೃತ್ತ ಯೋಧರಿಗೆ ಗೌರವ ಸಮರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ಸಂಜೆ ದೇವಾಲಯದ ಸಭಾಂಗಣದಲ್ಲಿ ಜರುಗಿತು.
ವಿಶೇಷ ಗೌರವಾರ್ಪಣೆಯಾಗಿ ನಾರಾಯಣ ನಾಯ್ಕ ಕಲಕೈ, ಮಂಜುನಾಥ ಮಡಿವಾಳ, ಮರಣೋತ್ತರವಾಗಿ ವೈಕುಂಠ ಪ್ರಭು, ಜಯಶೀಲ ಗೌಡ, ನಾಗೇಶ ನಾಯ್ಕ ಹಾಗೂ ಆರ್.ಜಿ.ನಾಯ್ಕ ಕುಟುಂಬದವರನ್ನು ಸನ್ಮಾನಿಸಲಾಯಿತು. ವಿಶೇಷ ಸೇವಾಕರ್ತರಾದ ಗೋಪಾಲ ನಾಯ್ಕ ಕಾನಳ್ಳಿ ದಂಪತಿ, ದಿ. ಈರಾ ನಾಯ್ಕ ಹುಲಿಮನೆ ಕುಟುಂಬಸ್ಥರನ್ನು, ಗಣಪತಿ ನಾಯ್ಕ ಹೊಸನಗರ, ಮಂಜುನಾಥ ಆಚಾರಿ ಘಡೆಮನೆ ಹಾಗೂ ನಿವೃತ್ತ ಸೈನಿಕರಾದ ಮಹಾಬಲೇಶ್ವರ ನಾಯ್ಕ ಮದ್ದಿನಕೇರಿ, ಗೋವಿಂದ ನಾಯ್ಕ ಬೇಡ್ಕಣಿ, ರಮೇಶ ನಾಯ್ಕ, ವಸಂತ ನಾಯ್ಕ ಹುಲಿಮನೆ ಹಾಗೂ ಷಣ್ಮುಖ ಗೌಡ ಕಲಕೈ ಹಾಗೂ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದ ವಿಧಿ-ವಿಧಾನ ನೆರವೇರಿಸಿದ ಅರ್ಚಕರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
ಜನತಾ ವಿದ್ಯಾಲಯ ಬೇಡ್ಕಣಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತ್ಯಾರ್ಸಿಯ ಮಂಜುನಾಥ ಮಾರುತಿ ನಾಯ್ಕ, ರಚನಾ ಎಂ.ಎಸ್., ದಿನೇಶ ನಾಯ್ಕ ಕಡಕೇರಿ, ಸುಮಂತ ಹೆಗಡೆ ಭಾನ್ಕುಳಿ, ಷಣ್ಮುಖ ಮಡಿವಾಳ ಮರಲಗಿ, ತೇಜಸ್ವಿನಿ ನಾಯ್ಕ ವಾಟಗಾರ, ಸುಧಾಕರ ಚೆನ್ನಯ್ಯ ಬೇಡ್ಕಣಿ, ಚಿನ್ಮಯಿ ನಾಯ್ಕ ಬೇಡ್ಕಣಿ, ಕವನಾ ಗೌಡ ಮರಲಗಿ, ಚೈತ್ರಾ ಎಂ.ಎಸ್., ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೈದಿಕರಾದ ನಿರಂಜನ್ ಜೊಯಿಸ್ ಕಾರ್ಯಕ್ರಮ ಉದ್ಘಾಟಿಸಿದರು.
ಕೋಟೆ ಆಂಜನೇಯ ದೇವಾಲಯದ ಪ್ರತಿಷ್ಠಾನ ಆಡಳಿತ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬೇಡ್ಕಣಿ ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜ ನಾಯ್ಕ, ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಪ್ರಮುಖರಾದ ಜಟ್ಟಪ್ಪ ಮೊಗೇರ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡುವ ಯಕ್ಷಸಿರಿ ಪ್ರಶಸ್ತಿಗೆ ಭಾಜನರಾದ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣಾಜಿ ಬೇಡ್ಕಣಿ ಇವರನ್ನು ಕೋಟೆ ಹನುಮಂತ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ನಾರಾಯಣ ನಾಯ್ಕ ಸ್ವಾಗತಿಸಿದರು. ದೇವಾಲಯದ ಕಾರ್ಯದರ್ಶಿ ರಮೇಶ ನಾಯ್ಕ ಹಾಗೂ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






