

ಸಿದ್ಧಾಪುರದ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ತನ್ನ ಇತಿಹಾಸದಲ್ಲೇ ಹೆಚ್ಚಿನ ಲಾಭ ಗಳಿಸುವ ಮೂಲಕ ದಾಖಲೆ ಮಾಡಿದೆ. ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ಸಂಸ್ಥೆಯ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ೨೦೨೨-೨೩ ನೇ ಸಾಲಿನಲ್ಲಿ ಟಿಎಂಎಸ್ ಒಟ್ಟೂ ಹತ್ತು ಕೋಟಿ ೮೩ ಲಕ್ಷ ೬೪೫೯೬ ರೂ . ಲಾಭ ಗಳಿಸಿದ್ದು ೭ ಕೋಟಿ ೭೮ ಲಕ್ಷ೬೪ ೫೯೬ ರೂ. ನಿಕ್ಕಿ ಲಾಭ ಗಳಿಸಿದೆ ಎಂದರು.

ಆ೨೧ ರ ಸೋಮುವಾರ ಮಧ್ಯಾಹ್ನ೫ ಗಂಟೆಗೆ ಕಾನಸೂರು,೨೨ ರಂದು ಶಿರಸಿ ಮಾರಾಟ ಮಳಿಗೆಯಲ್ಲಿ ಹಾಗೂ ೨೩ ರ ಬುಧವಾರ ಮಧ್ಯಾಹ್ನ ಮೂರಕ್ಕೆ ಸಂಸ್ಥೆಯ ವ್ಯಾಪಾರಾಂಗಣದಲ್ಲಿ ಸಹಕಾರಿ ಸಭೆ ಮತ್ತು ವಾರ್ಷಿಕ ಸಾಮಾನ್ಯ ಸಭೆಗಳು ನಡೆಯಲಿದ್ದು ಇದೇ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಸದಸ್ಯರಿಗೆ ಸನ್ಮಾನ ನಡೆಯಲಿದೆ ಎಂದು ವಿವರಿಸಿದರು.



