


ಬಿ.ಜೆ.ಪಿ. ವಿವಿಧ ಹುದ್ದೆಗಳಿಂದ ಅನೇಕರನ್ನು ಮುಕ್ತಮಾಡಿರುವುದು ಪಕ್ಷದ ಸಹಜ ಪ್ರಕ್ರೀಯೆ ಎಂದಿರುವ ಸಿದ್ಧಾಪುರ ಬಿ.ಜೆ.ಪಿ. ತಾಲೂಕಾ ಘಟಕ ಈ ಬಗ್ಗೆ ತಮಗೆ ಅಧೀಕೃತ ಮಾಹಿತಿ ಇಲ್ಲ ಎಂದಿದೆ!
ಬಿ.ಜೆ.ಪಿ. ತಾಲೂಕಾ ಘಟಕ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಪ್ರತಿಕ್ರೀಯೆ ನೀಡಿರುವ ತಾಲೂಕಾ ಮಂಡಳದ ಅಧ್ಯಕ್ಷ ಮಾರುತಿ ನಾಯ್ಕ ಕಾಂಗ್ರೆಸ್ ನ ಶಾಸಕರು ವಿರೋಧ ಪಕ್ಷದಲ್ಲಿದ್ದಾಗ ಹೇಳುತಿದ್ದಂತೆ ಈಗ ನಡೆದುಕೊಳ್ಳುತ್ತಿಲ್ಲ ವಾಸ್ತವದಲ್ಲಿ ಅಧಿಕಾರ ಶಾಹಿ ಅವರ ಮಾತು ಕೇಳುತ್ತಿಲ್ಲ ಎನಿಸುತ್ತಿದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪಕ್ಷ ಜಿಲ್ಲಾಧ್ಯಕ್ಷರು ಕ್ರಮ ಕೈಗೊಂಡಿರುವ ಬಗ್ಗೆ ತಮಗೆ ಅಧೀ ಕೃತ ಮಾಹಿತಿ ಇಲ್ಲ ಸಂದರ್ಭ ಬಂದಾಗ ಅದಕ್ಕೆ ಉತ್ತರಿಸುತ್ತೇವೆ ಎಂದರು. (ಪಕ್ಷದ್ರೋಹಿಗಳ ಮೇಲೆ ಶಿಸ್ತು ಕ್ರಮ)

ಈ ಬಗ್ಗೆ ವಿವರಣೆ ನೀಡಿದ ಬಿ.ಜೆ.ಪಿ. ಮುಖಂಡ ರಾಘವೇಂದ್ರ ಶಾಸ್ತ್ರಿ ಪಕ್ಷದ ಕೆಲವು ತೀರ್ಮಾನಗಳು ಸಹಜ ಪ್ರಕ್ರೀಯೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಹಣಕಾಸಿನ ಕೊರತೆಯಾಗುತ್ತಿದೆ. ಬಿ.ಜೆ.ಪಿ. ಸಮರ್ಥ ವಿರೋಧ ಪಕ್ಷವಾಗಿ ನಮ್ಮ ಕೆಲಸ ಮುಂದುವರಿಸುತ್ತದೆ ಎಂದರು.

