



ಹಣಕ್ಕಾಗಿ ಅಮಾಯಕರನ್ನು ಬೆದರಿಸುವ ಪುಂಡರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಿದ್ದಾಪುರ ತಾಲೂಕಿನ ಕಂಚಿಕೈ ನಲ್ಲಿ ನಡೆದಿದೆ. ರವಿವಾರ ಭೀಮನಗುಡ್ಡ, ಉಂಚಳ್ಳಿ ಫಾಲ್ಸ್ ನೋಡುವ ಬರುವ ಪ್ರವಾಸಿಗರು ಅನೇಕ ಇಂಥ ಪ್ರವಾಸಿಗರನ್ನು ರಸ್ತೆ ಮಧ್ಯೆ ನಿಲ್ಲಿಸಿ ಹಣ ಸಂಪಾದಿಸಬಹುದೆಂದು ಯೋಚಿಸಿ ದರೋಡೆಗೆ ಇಳಿದ ಶಿರಸಿಯ ಒಬ್ಬ ವ್ಯಕ್ತಿ ಮತ್ತು ಆತನ ಸ್ನೇಹಿತ ಶಿವಮೊಗ್ಗದ ಇನ್ನೊಬ್ಬ ಪೊಲೀಸ್ ಆತಿಥ್ಯದಡಿ ಈಗ ಸಿದ್ಧಾಪುರ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ರವಿವಾರ ಬೆಳಿಗ್ಗೆ ಶಿರಸಿಯಿಂದ ಬೈಕ್ ಕದ್ದು ಶಿರಸಿ ಕುಮಟಾ ಮಾರ್ಗದಲ್ಲಿ ಕೋಳಿ ಸಾಗಿಸುತಿದ್ದ ಬೊಲೇರೋ ವಾಹನ ನಿಲ್ಲಿಸಿ ಹಣ ಕಿತ್ತ ಈ ಜೋಡಿ ಕೋಳಿ ಗಾಡಿಯವನಿಂದ ಕಿತ್ತ ೨.೫ ಸಾವಿರ ಸಾಕಾಗದೆ ಶಿರಸಿ-ಸಿದ್ಧಾಪುರ ಒಳರಸ್ತೆ ಪ್ರವೇಶಿಸಿ ಅಲ್ಲಿ ಭೀಮನಗುಡ್ಡ ನೋಡಿ ಬರುತಿದ್ದ ಯುವಜೋಡಿಯಿಂದ ಹಣ ಬಂಗಾರ ಕೀಳುವ ಪ್ರಯತ್ನ ನಡೆಸಿದೆ. ಈ ವೇಳೆ ಚೀರಿಕೊಂಡ ಯುವತಿಯ ಕೂಗನ್ನು ಆಲಿಸಿ ಬಂದ ಸ್ಥಳೀಯರು ಈ ಭಲೇಜೋಡಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸ್ಥಳೀಯರಿಂದ ಗೂಸಾ ತಿಂದ ಕಳ್ಳರ ತಂಡದ ಇಬ್ಬರು ಸದಸ್ಯರು ಈಗ ಸ್ಥಳೀಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ವಿವರ- ಆ.೨೭ ರ ರವಿವಾರ ಬೆಳಿಗ್ಗೆ ಶಿರಸಿ ಹಂಚಿನಕೇರಿಯಶಹೀದ್ ಇಸ್ಮಾಯಿಲ್ ಶೇಖ್ ಬಳಿ ಬರುವ ಶಿವಮೊಗ್ಗ ಟಿಪ್ಪು ನಗರದ ಇರ್ಪಾನ್ ಅನ್ವರ್ ಪಾಶಾ ಹಣದ ತೊಂದರೆ ಹೇಳಿಕೊಳ್ಳುತ್ತಾನೆ. ಇಬ್ಬರೂ ಯೋಜನೆ ರೂಪಿಸಿ ಶಿರಸಿ ನಗರದಲ್ಲಿ ಒಂದು ಬೈಕ್ ಕಳ್ಳತನ ಮಾಡಿ ಅಲ್ಲಿಂದ ಕುಮಟಾ ರಸ್ತೆಯಲ್ಲಿ ಸಾಗಿ ಕುಮಟಾ ರಸ್ತೆ ಬಂಡಲ್ ಬಳಿ ಕೋಳಿವಾಹನ ತಡೆದು ನಿಲ್ಲಿಸಿ ವಾಹನ ಚಾಲಕನಿಂದ ೨೫೦೦ ರೂಪಾಯಿ ಅಪಹರಿಸುತ್ತಾರೆ. ನಂತರ ಶಿರಸಿ-ಕುಮಟಾ ಮಾರ್ಗದಿಂದ ಸಿದ್ಧಾಪುರ ಮಾರ್ಗವಾಗಿ ಒಳರಸ್ತೆ ಪ್ರವೇಶಿಸಿ ಕಂಚಿಕೈ ಬಳಿ ಯುವ ಜೋಡಿಯೊಂದನ್ನು ಹೆದರಿಸಿ ಹಣ-ಬಂಗಾರ ಕೀಳುವ ವಿಫಲ ಯತ್ನ ಮಾಡಿದಾಗ ಕಂಗಾಲಾದ ಯುವತಿಯ ಕೂಗು ಕೇಳಿ ಸೇರಿದ ಸ್ಥಳೀಯರು ಈ ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.
ಎರಡು ದೂರು ದಾಖಲು- ಈ ಬಗ್ಗೆ ಎರಡು ಪೊಲೀಸ್ ದೂರುಗಳು ದಾಖಲಾಗಿದ್ದು ಶಿರಸಿ ದೇವನಳ್ಳಿ ಕುದ್ರಗೋಡ್ ಸುಬ್ರಮಣ್ಯ ಗೌಡ ತಮ್ಮನ್ನು ಹೆದರಿಸಿ ಈ ಇಬ್ಬರು ಹಣ-ಬಂಗಾರ ದೋಚಿದ್ದಾರೆ ಎಂದು ದೂರು ನೀಡಿದರೆ.
ಶಹೀದ್ ಮತ್ತು ಇರ್ಪಾನ್ ಪರವಾಗಿ ಶಹೀದ್ ಸಿದ್ಧಾಪುರ ಪೊಲೀಸರಿಗೆ ದೂರು ನೀಡಿದ್ದು
ತಾವಿಬ್ಬರು ಹೆಗ್ಗರಣಿ ಬಳಿ ನಡೆದುಕೊಂಡು ಬರುತ್ತಿರುವಾಗ ಆರೆಂಟು ಜನರ ಗುಂಪು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನ್ಯಾಯ ಕೇಳಿದ್ದಾನೆ!
