


ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ದಲ್ಲಿ ಗುರುವಾರ ರಾತ್ರಿವೇಳೆ ಜೆ.ಸಿ.ಬಿ.ಯಂತ್ರದಿಂದ ಮನೆ ಜಖಂಗೊಳಿಸಲು ಪ್ರಯತ್ನಿಸಿದ್ದ ಬಗ್ಗೆ ಒಟ್ಟೂ ಏಳು ಜನರ ವಿರುದ್ಧ ದೂರು ದಾಖಲಾಗಿದ್ದು ದೂರು ನೀಡಿರುವ ನಿವೃತ್ತ ನೌಕರ ಕೆ.ಕೆ.ನಾಯ್ಕ ಆರೋಪಿಗಳಾಗಿರುವ ೮ ಜನರು ಅಕ್ರಮಕೂಟ ಕಟ್ಟಿಕೊಂಡು ತಮ್ಮ ಮನೆಗೆ ಹಾನಿ ಮಾಡಿದ್ದಲ್ಲದೆ ತಮಗೆ ಮತ್ತು ತಮ್ಮ ಪತ್ನಿ ಸೀತಾಗೆ ದುಖಾ:ಪತ್ತು ಮಾಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ.

ರಾತ್ರಿ ೯.೪೦ ರ ವೇಳೆಗೆ ಕೆ.ಕೆ.ನಾಯ್ಕರ ಮನೆಯ ಆವರಣ ಪ್ರವೇಶಿಸಿದ ಆರೋಪಿಗಳಾದ ಅಶೋಕ ನಾಯ್ಕ, ಅರುಣ ನಾಯ್ಕ, ನಾರಾಯಣ ನಾಯ್ಕ, ಅಪರ್ಣಾ ನಾಯ್ಕ, ಸಾವಿತ್ರಿ ನಾಯ್ಕ ಮನೋಜ್ ನಾಯ್ಕ, ಲಕ್ಷ್ಮೀ ನಾಯ್ಕ ಸೇರಿದ ೭ ಜನರ ತಂಡ ತಮ್ಮ ಮನೆಗೆ ಹಾನಿ ಮಾಡಿದ್ದಲ್ಲದೆ ವೃದ್ಧರಾದ ತಮಗೆ ಮತ್ತು ತಮ್ಮ ಹೆಂಡತಿಗೆ ಬಟ್ಟೆ ಹರಿದು ತೊಂದರೆ ನೀಡಿದ ಬಗ್ಗೆ ವಿವರಿಸಿ ದೂರಿದ್ದಾರೆ.
ಜಮೀನು ವ್ಯಾಜ್ಯದ ಸಂಬಂಧ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
