



ಸಿದ್ದಾಪುರ
ತಾಲೂಕಿನ ವಾಜಗದ್ದೆ ಸಮೀಪದ ವಾಟೆಹಕ್ಲುವಿನ ದರ್ಶನ ಎಂ.ಹೆಗಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀ ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಆಗಿರುವುದರಿಂದ ಮೆಚ್ಚುಗೆವ್ಯಕ್ತಪಡಿಸಿ ಅವರನ್ನು ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಅಡಳಿತ ಮಂಡಳಿ ಹಾಗೂ ಊರವರು ಗೌರವಿಸಿದರು.

ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ, ಕಾರ್ಯದರ್ಶಿ ರಾಜಾರಾಮ ಹೆಗಡೆ, ಪ್ರಮುಖರಾದ ಗೋಪಾಲ ಹೆಗಡೆ ಹುಲಿಮನೆ,ಗೋಪಾಲ ಹೆಗಡೆ ವಾಜಗದ್ದೆ, ದೇವಸ್ಥಾನದ ಅರ್ಚಕ ಶಿವರಾಮ ಜೋಶಿ, ಎಸ್.ಎಂ.ಭಟ್ಟ ಎಲೆಸರ, ಪಿ.ವಿ.ಹೆಗಡೆ ಹೊಸಗದ್ದೆ, ಅನಂತ ಹೆಗಡೆ ಹೊಸಗದ್ದೆ, ಶ್ರೀಧರ ಹೆಗಡೆ ವಾಟೇಹಕ್ಲು, ಶ್ರೀಪಾದ ಹೆಗಡೆ ಕಲ್ಮನೆ, ದೇವರು ಭಟ್ಟ ಅಬ್ಬಿಗದ್ದೆ,ದೇವಸ್ಥಾನದ ಹಾಗೂ ಯುವಕ ಮಂಡಳಿಯ ಸದಸ್ಯರು, ಊರವರಿದ್ದರು. ಗೌರವವನ್ನು ಸ್ವೀಕರಿಸಿ ದರ್ಶನ ಹೆಗಡೆ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀ ಯ ಕಾರ್ಯಕಾರಿಣಿ ಸದಸ್ಯರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ನಿಧನ- ಮಂಜುನಾಥ ಪರಮೇಶ್ವರ ಹೆಗಡೆ
ಸಿದ್ದಾಪುರ: ತಾಲೂಕಿನ ಹೊನ್ನೆಹದ್ದ ಹಿತ್ಲಮನೆ ನಿವಾಸಿ ಪ್ರಗತಿಪರ ಕೃಷಿಕರಾಗಿದ್ದ ಮಂಜುನಾಥ ಪರಮೇಶ್ವರ ಹೆಗಡೆ(೬೮) ಅವರು ಸೋಮವಾರ ನಿಧನ ಹೊಂದಿದರು.
ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

