ಹೊನ್ನಾವರ ಕೆಕ್ಕಾರ ನ ವಿನಾಯಕ ಗೌಡ ರ ಸಾಧನೆ

ಅಯೋಧ್ಯೆ ರಾಮಮಂದಿರಕ್ಕೆ ಮತ್ತೊಬ್ಬ ಕನ್ನಡಿಗನ ಅಳಿಲು ಸೇವೆ: ಕೆಕ್ಕಾರ ಹುಡುಗ ಕೆತ್ತಿದ ಗಣೇಶನ ಶಿಲ್ಪಕ್ಕೆ ದೇವಾಲಯದಲ್ಲಿ ಸ್ಥಾನ!

ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

Vinayak Gouda Kekkara

ಹೊನ್ನಾವರ (ಉತ್ತರ ಕನ್ನಡ): ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

ಉತ್ತರ ಕನ್ನಡದ ಹೊನ್ನಾವರ ಮೂಲದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರು ಕೆತ್ತಿರುವ ಗಣಪತಿ ಪ್ರತಿಮೆ ಜನವರಿ 22ರಂದು ಪ್ರಾಣ ಪ್ರತಿಷ್ಠಾನದ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳಲಿದೆ.

ಮಂದಿರದ ರಂಗಮಂಟಪವನ್ನು ರಚಿಸುವ ಹೊಣೆಯನ್ನು ಇವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದರಲ್ಲಿ ಇವರು ರಚಿಸಿದ ಗಣಪತಿ ಮೂರ್ತಿ ಹಾಗೂ ಕೆತ್ತನೆಗಳು ಸೇರಿರಲಿವೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡವು ತನ್ನ ವಿಶಿಷ್ಟ ಗಣಪತಿ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಹಲವು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿವೆ. ಅದರಂತೆ ಹೊನ್ನಾವರದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರಿಗೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಗಣಪತಿ ವಿಗ್ರಹವನ್ನು ಕೆತ್ತುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಶಿಲ್ಪ ಶೀಘ್ರದಲ್ಲೇ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ.

ಸಾಧಾರಣ ಕುಟುಂಬದಲ್ಲಿ ಜನಿಸಿದ ವಿನಾಯಕ ಗೌಡ ಅವರು, ಹೆಚ್ಚು ಶಿಕ್ಷಣ ಪಡೆದಿಲ್ಲ. ಇವರು ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಶಿಲ್ಪಕಲೆಯ ಬಗ್ಗೆ ಉತ್ಸಾಹ ಹೊಂದಿದ್ದ ಇವರು, ಬಿಡುವಿನ ವೇಳೆಯಲ್ಲಿ ಅದನ್ನು ಕಲಿತಿದ್ದರು.

ನಂತರ 18 ತಿಂಗಳ ಕಾಲ ಶಿಲ್ಪಕಲೆಯನ್ನು ಅಧಿಕೃತವಾಗಿ ಕಲಿತರು. ಪ್ರಸಿದ್ಧ ಶಿಲ್ಪಿಗಳಾದ ಸುರೇಶ್ ಗುಡಿಗಾರ್ ಮತ್ತು ಅಶೋಕ್ ಗುಡಿಗಾರ್ ಅವರಲ್ಲಿ ವಿಶೇಷ ತರಬೇತಿ ಪಡೆದರು. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿವಿಧ ಕೃತಿಗಳನ್ನು ರಚಿಸಿದರು.

“ಹುಬ್ಬಳ್ಳಿ ಮೂಲದ ರವೀಂದ್ರ ಆಚಾರ್ ಅವರ ಸಹಾಯದಿಂದ ಅಯೋಧ್ಯೆಯಲ್ಲಿ ಗಣಪತಿ ಪ್ರತಿಮೆಯನ್ನು ಕೆತ್ತಲು ನನಗೆ ಅವಕಾಶ ಸಿಕ್ಕಿತು. ಈ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ. “ನಮಗೆ ರಂಗಮಂಟಪದ ರಚನೆಯನ್ನು ಒಪ್ಪಿಸಲಾಯಿತು. ಅಲ್ಲಿ ನಾವು 68 ಗಣಪತಿಗಳನ್ನು ವಿವಿಧ ವಿನ್ಯಾಸಗಳು ಮತ್ತು ರೂಪಗಳಲ್ಲಿ ಕೆತ್ತಬೇಕಾಗಿತ್ತು.

ಕರ್ನಾಟಕದ ಐವರು ಕಲಾವಿದರು- ನಾನು, ಚಿತ್ರದುರ್ಗದ ಕೀರ್ತಿ ಮತ್ತು ಶಿವಮೊಗ್ಗದ ರಾಜೇಶ್ ನಾಲ್ಕು ಗಣಪತಿಗಳನ್ನು ಕೆತ್ತಿದ್ದೇವೆ. ರಮೇಶ್ ಗದಗ, ನಾಗಮೂರ್ತಿ ಗದಗ, ರವೀಂದ್ರ ಆಚಾರ್ ಅವರ ಬಳಿ ಕೆಲಸ ಮಾಡಿದ್ದೇವೆ. ಅವರು ಚಿತ್ರ ಬಿಡಿಸುತ್ತಿದ್ದರು. ನಾವು ಅವುಗಳನ್ನು ಕೆತ್ತಿದ್ದೇವೆ. ನಾನು ಎರಡು ವಿಗ್ರಹಗಳನ್ನು ಕೆತ್ತಿದ್ದೇನೆ. ರಮೇಶ್ ಮತ್ತು ನಾಗಮೂರ್ತಿ ದೇವಸ್ಥಾನದ ವಿನ್ಯಾಸಗಳನ್ನು ಕೆತ್ತಿದ್ದಾರೆ” ಎಂದು ವಿನಾಯಕ್ ಹೇಳಿದ್ದಾರೆ.

“ಈ ದೇವಾಲಯವು ಎಲ್ಲಾ ಭಾರತೀಯ ಕಲಾ ಪ್ರಕಾರಗಳ ಪರಾಕಾಷ್ಠೆಯಾಗಿದೆ. ದೇವಾಲಯವು ಮೊದಲ ಮಹಡಿಯಲ್ಲಿ ಸುಮಾರು 160 ಕಂಬಗಳಿದ್ದು, ಇದು ಸಿಂಹ ದ್ವಾರ, ರಂಗಮಂಟಪ ಮತ್ತು ಇತರ ದ್ವಾರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *