ಬಿ.ಜೆ.ಪಿ. ನಾಯಕರಿಗ್ಯಾಕೆ ತಮ್ಮ ಪಕ್ಷದವರ ಮೇಲೇ ಸಿಟ್ಟು!?

ರಾಮಮಂದಿರ, ಹಿಂದುತ್ವ, ದೇಶಪ್ರೇಮದ ಬಾಣ ಬಿಟ್ಟು-ಬಿಟ್ಟು ಸೋತಿರುವ ಬಿ.ಜೆ.ಪಿ.ಗೆ ಈಗ ಹೊಸ ಅಸ್ತ್ರ ಸಿಗದ ಹತಾಸೆ ಕಾಡುತ್ತಿದೆಯೆ? ಎನ್ನುವ ಪ್ರಶ್ನೆ ಈಗ ಭಾರತೀಯರನ್ನು ಕಾಡುತ್ತಿದೆ.

ಸತ್ತ ಸಾವು ಹೊಡೆಯುವಂತೆ ಕಾಂಗ್ರೆಸ್‌ ವಿರುದ್ಧ ವಿಷ ಕಾರುವ ಬಿ.ಜೆ.ಪಿ. ಮುಖಂಡರು ಚುನಾವಣೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದಾರೆಯೆ? ಎನ್ನುವ ಅನುಮಾನ ಈಗ ಎಲ್ಲರನ್ನೂ ಕಾಡುವಂತಾಗಿದೆ.

ಇಂಡಿಯಾ ಒಕ್ಕೂಟ ನಿಧಾನವಾಗಿ ಮೋದಿ ವಿರುದ್ಧ ಒಂದಾಗುತಿದ್ದರೆ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್‌ ನಿಂದಿಸುತ್ತಾ ಕಳೆದ ಹತ್ತು ವರ್ಷ ಆಡಳಿತ ಮಾಡಿದ್ದು ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಯೋ? ಕಾಂಗ್ರೆಸ್ಸೋ ಎನ್ನುವ ಗೊಂದಲದಲ್ಲಿ ಮಾತನಾಡಿದಂತೆ ಗೋಚರಿಸತೊಡಗಿದ್ದಾರೆ.

ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳನ್ನು ಐ.ಟಿ. ಇ.ಡಿ ಗಳ ಮೂಲಕ ಬೇಟೆಯಾಡಿದ ಮೋದಿ ಪರಿವಾರ ಹತಾಸೆಯ ಹಂತ ತಲುಪಿದಂತಿದ್ದು ತನ್ನ ಎಲ್ಲಾ ತಂತ್ರ-ಮಂತ್ರ ಬಳಸಿದ ಮೇಲೆನಿತ್ರಾಣನಾಗುವಂತಾದ ಮೋದಿ ನೇತೃತ್ವದ ಪರಿವಾರ ಈಗ ಹತಾಸೆಯ ಹಂತ ದಾಟಿ ಸ್ಯಾಡಿಸ್ಟ್‌ ಎನಿಸಿಕೊಳ್ಳತೊಡಗಿದೆ.

ಇದಕ್ಕೆ ಉದಾಹರಣೆ- ದೇಶದಾದ್ಯಂತ ಪ್ರಭಾವಿ ನಾಯಕರನ್ನು ಹೆದರಿಸಿ ಪಕ್ಷಕ್ಕೆ ಸೇರಿಸಿಕೊಂಡಿರುವ ಬಿ.ಜೆ.ಪಿ. ಗುಜರಾತ್‌ (ಇನ್ನೂ ಹೆಚ್ಚು ಸ್ಥಾನ) ನಲ್ಲಿ ಮತ್ತೆ ಗೆಲ್ಲಲು ಅವಕಾಶವೇ ಇಲ್ಲ, ಮಧ್ಯಪ್ರದೇಶ, ಉತ್ತರ ಪ್ರದೇಶಗಳ ಸ್ಥಿತಿ ಗುಜರಾತ್‌ ಗಿಂತ ಭಿನ್ನವಿಲ್ಲ. ದೆಹಲಿ, ಪಂಜಾಬ್‌,ರಾಜಸ್ಥಾನ, ಕರ್ನಾಟಕ, ಕೇರಳ, ತಮಿಳುನಾಡು,ಆಂಧ್ರಗಳಲ್ಲಿ ಈ ಚುನಾವಣೆಯಲ್ಲಿ ಬಿ.ಜೆ.ಪಿ. ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಈ ವಾಸ್ತವ ಅರಿತಿರುವ ಬಿ.ಜೆ.ಪಿ. ನಾಯಕರು ಹತಾಶರಾಗಿ ಮತಿವಿಕಲರಂತೆ ಅರಚುತಿದ್ದಾರಾ ಎನ್ನುವ ಅನುಮಾನ ಸತ್ಯವಾಗುವಂತೆ ಬಿ.ಜೆ.ಪಿ. ನಾಯಕರ ವರ್ತನೆ ಇದೆ.

ಅಹಿಂದ್‌ ವಿರೋಧಿಗಳಾದ ಮನುವಾದಿ ಬಿ.ಜೆ.ಪಿ. ದೇಶದಲ್ಲಿ ಜನ ಕೇಳದೆ ಇ.ವಿ.ಎಸ್.‌ ಮೀಸಲಾತಿ ಪ್ರಕಟಿಸಿತು. ಮುಸ್ಲಿಂ ಮೀಸಲಾತಿ ವಿರೋಧದ ನೆಪದಲ್ಲಿ ಅಲ್ಪಸಂಖ್ಯಾತ ಮತಧರ್ಮಗಳ ವಿರೋಧಕ್ಕೆ ಕಾರಣವಾಗಿರುವ ಬಿ.ಜೆ.ಪಿ. ದೇಶದ ಬಹುಸಂಖ್ಯಾತ ಮೂಲನಿವಾಸಿ ಬಹುಜನರ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ.

ಈ ಹಿನ್ನೆಲೆಯಲ್ಲಿ ಪಿ.ಎಂ. ಕೇರ್ಸ್‌, ಚುನಾವಣಾ ಬಾಂಡ್‌ ಬ್ರಷ್ಟಾಚಾರದ ಬಗ್ಗೆ ಉತ್ತರಿಸುವ ನೈತಿಕತೆ ಕಳೆದುಕೊಂಡಿರುವ ಬಿ.ಜೆ.ಪಿ. ನಿರಂತರ ಕಾಂಗ್ರೆಸ್‌ ವಿರೋಧ ಮಾಡುವುದನ್ನು ಇಂಡಿಯಾದ ಜನತೆ ಒಪ್ಪುತ್ತಿಲ್ಲ.

ತಾನು ಕಳ್ಳ, ಪರರನ್ನು ನಂಬ ಎನ್ನುವಂತಾಗಿರುವ ಬಿ.ಜೆ.ಪಿ. ಬೂಟಾಟಿಕೆಗೆ ಮೋದಿಯೇ ಮಾದರಿಯಾದರೆ ಅವರ ಪಕ್ಷ ಪರಿವಾರದ ನಾಯಕರು ಈಗ ಈ ವಿಚಾರದಲ್ಲಿ ಗೇಲಿಯ ವಸ್ತುವಾಗಿದ್ದಾರೆ.

ಮೋದಿ ವಿರೋಧ ಪಕ್ಷಗಳನ್ನು ಟೀಕಿಸುವುದು ತಾನು ತನ್ನ ಪರಿವಾರವನ್ನೇ ಹೊಗಳಿಕೊಳ್ಳುವುದು ಮಾಡುತ್ತಾ ಆಡುತ್ತಿರುವ ಕಪಟ ನಾಟಕ ಎಂಥ ದಡ್ಡರಿಗೂ ಅರ್ಥವಾಗುತ್ತದೆ.

ಕೇಜ್ರವಾಲ್‌ ವಿರುದ್ಧ,ರಾಹುಲ್‌ ವಿರುದ್ಧ, ಖರ್ಗೆ ವಿರುದ್ಧ. ಪಿಣರಾಯಿ ವಿರುದ್ಧ, ಸ್ಟಾಲಿನ್‌ ವಿರುದ್ಧ, ಉದಯನಿಧಿ ವಿರುದ್ಧ, ಮಮತಾ ಬ್ಯಾನರ್ಜಿ ವಿರುದ್ಧ, ಉದ್ಭವ್‌ ಠಾಕ್ರೆ ವಿರುದ್ಧ ಹೀಗೆ ಮೋದಿ, ಬಿ.ಜೆ.ಪಿ. ಪರಿವಾರ ಕತ್ತಿಮಸೆಯುತ್ತಿರುವ ಪ್ರಮುಖರಲ್ಲಿ ಬಿ.ಜೆ.ಪಿ.ಯವರನ್ನು ಬಿಟ್ಟು ಉಳಿದವರೆಲ್ಲರೂ ಸೇರಿರುವುದು ಕಾಕತಾಳೀಯವಲ್ಲ.

ಇದು ದೇಶದ ಕತೆಯಾದರೆ ವಿರೋಧ ಪಕ್ಷದ ನಾಯಕ ಅಶೋಕ ಬಾಲಿಶತನ, ಈಶ್ವರಪ್ಪ ಮೂರ್ಖತನ, ಪ್ರತಾಪಸಿಂಹನ ಹುಚ್ಚಾಟ, ತೇಜಸ್ವಿಸೋರ್ಯನ ಗೋಸುಂಬೆತನ ಅನಂತಕುಮಾರ ಹೆಗಡೆಯ ತಿಕ್ಕಲುತನ ಇವುಗಳನ್ನೆಲ್ಲಾ ನೋಡುತ್ತಿರುವ ಕನ್ನಡಿಗರು ಮತಾಂಧ ಅವಿವೇಕಿಗಳು ಮಾತ್ರ ಹೀಗಿರಲು ಸಾಧ್ಯ ಎಂದು ಛೀ.. ಥೂ… ಎನ್ನುತಿದ್ದಾರೆ.

ಇಷ್ಟಾದ ಮೇಲೆ ಅಸಲು ವಿಚಾರಕ್ಕೆ ಬಂದರೆ ಉತ್ತರ ಕನ್ನಡ ಸಂಸದ ತನ್ನ ಲಾಗಾಯ್ತಿನ ನೀಚತನದಂತೆ ಭಟ್ಕಳದಲ್ಲಿ ಸಭೆಯ ಮೇಜಿನ ಮೇಲೆ ಕುರ್ಚಿ ಇಟ್ಟು ತಾಕತ್ತಿದ್ದರೆ ನೀವ್ಯಾರಾದರೂ ಕೂರಿ ಎಂದು ತನ್ನ ಷಂಡತನ ಪ್ರದರ್ಶಿಸಿದ್ದು ಕರಾವಳಿ ಜನರ ಬೇಸರಕ್ಕೆ ಕಾರಣವಾಗಿದೆ. ಒಂದೆರಡು ದಶಕಗಳ ಧೀರ್ಘ ನಿದ್ರೆಯಿಂದ ಎಚ್ಚೆತ್ತ ಈ ಹೆಗಡೆ ಟಿಕೇಟ್‌ ತಪ್ಪುವ ಹೆದರಿಕೆಯಿಂದ ಹೀಗೆ ತನ್ನ ಪಕ್ಷದ ಕಾರ್ಯಕರ್ತರ ಮೇಲೆ ರೇಗುತಿದ್ದಾನೆ ಎಂದು ಸಂಘದ ಜನರೇ ಮತನಾಡುತಿದ್ದಾರೆ. ಇದು ಮೂವತ್ತು ವರ್ಷ ಜನಪ್ರತಿನಿಧಿಯಾದ ಒಬ್ಬನಿಷ್ಪ್ರಯೋಜಕ ಸಂಸದ,ಮಾಜಿ ಮಂತ್ರಿಯ ಸ್ಥಿತಿಯಾದರೆ ಇದೇ ರೀತಿ ನಿರಂತರ ಮೂವತ್ತು ವರ್ಷ ಜನಪ್ರತಿನಿಧಿಯಾಗಿ ಕನಿಷ್ಟ ಸೌಜನ್ಯ ದಿಂದಾದರೂ ಮಾತನಾಡುತ್ತಾರೆ ಎನ್ನುವ ರಿಯಾಯತಿ ಇರುವ ಮಾಜಿ ಸ್ಫೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕತೆ ಇದಕ್ಕಿಂತ ಭಿನ್ನವಲ್ಲ. ರಾಜ್ಯ ವಿಧಾನಸಭೆಯ ಕಳೆದ ಅವಧಿಯ ಸೋಲಿನಿಂದ ಹೊರಬರದ ಕಾಗೇರಿ ಒಂದು ವರ್ಷದಲ್ಲಿ ಕನಿಷ್ಟ ಹತ್ತು ಬಾರಿ ಅವರ ಪಕ್ಷದ ಪ್ರಮುಖರು, ಕಾರ್ಯಕರ್ತರ ವಿರುದ್ಧ ವೇ ಹರಿಹಾಯ್ದಿದ್ದಾರೆ.

ಸಿದ್ಧಾಪುರದಲ್ಲಿ ನಡೆದ ಬಿ.ಜೆ.ಪಿ. ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ ಮೋದಿಯಂತೆ ಅನಾವಶ್ಯಕ ಆರೋಪದ ಮಾತುಗಳನ್ನಾಡಿದರು. ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ, ತನ್ನಿಂದಲೇ ಎಲ್ಲಾ ಎನ್ನುವ ವ್ಯಕ್ತಿಗಳಿಗೆ ಸಂಘಟನೆ ಉತ್ತರ ನೀಡುತ್ತದೆ ಎಂದರು. ಈ ಟಾಂಗ್‌, ನಂಜಿನ ಮಾತು ಅವರದೇ ಪಕ್ಷದ ಕೆಲವು ಭಿನ್ನಮತೀಯರ ವಿರುದ್ಧ ಎನ್ನುವುದು ಬಹಿರಂಗ ಗುಟ್ಟು.

ಅಭಿವೃದ್ಧಿ, ಜನಪರತೆ ಇಲ್ಲದ ಮತಾಂಧ ಪರಿವಾರ ಅಧಿಕಾರ ಇದ್ದಾಗ, ಇಲ್ಲದಾಗ, ಕೈ ತಪ್ಪಿ ದಾಗ ತಲುಪುವ ಹೀನಾಯ ಸ್ಥಿತಿಗೆ ಬಿ.ಜೆ.ಪಿ. ಮತ್ತು ಬಿ.ಜೆ.ಪಿ. ಮುಖಂಡರ ಈ ವರ್ತನೆಗಳು ಸಾಕ್ಷಿ. ಈಗ ಜನರ ಕೈಯಲ್ಲಿ ಅಧಿಕಾರವಿದೆ ಇಂಥ ಸುಳ್ಳುಬುರುಕ, ಜನವಿರೋಧಿ, ಜನದ್ರೋಹಿ, ದೇಶದ್ರೋಹಿ ಮತೀಯಶಕ್ತಿಗಳಿಗೆ ಇಂಡಿಯಾದಲ್ಲಿ ಉಳಿಗಾಲ ಬೇಕೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *