ಕೆರೆಬೇಟೆ ಹುಡುಗನಿಗೆ ಹೆಚ್ಚಿದ ಬೇಡಿಕೆ

ಕೆರೆಬೇಟೆ ಚಿತ್ರದ ಯುವ ನಿರ್ಧೇಶಕ ಗುರುರಾಜ್‌ ಬಿ. ಯಾನೆ ರಾಜ್‌ ಗುರು ಚಿತ್ರ ಬಿಡುಗಡೆಗೆ ಮುನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವಿರತ ೧೬ ವರ್ಷಗಳ ಶ್ರಮದ ನಂತರ ಕೆರೆಬೇಟೆ ಚಿತ್ರ ತೆರೆಗೆ ಬರುವ ಮೊದಲು ಕನ್ನಡ ಚಿತ್ರರಂಗ ಮತ್ತು ಮಾದ್ಯಮಲೋಕ ರಾಜ್‌ ಗುರು ಪ್ರತಿಭೆ ಗುರುತಿಸಿದೆ. ವಿನಯ ರಾಜ್‌ ಕುಮಾರ ಜೊತೆ ಎರಡನೇ ಸಿನೆಮಾಕ್ಕೆ ತಯಾರಿ ನಡೆಸುತ್ತಿರುವ ರಾಜ್‌ ಗುರು ಚಿಂಗುಮಣೆ ಮೂಲಕ ಮತ್ತೆ ಮಲೆನಾಡಿನಸೊಬಗು ಪರಿಚಯಿಸಲಿದ್ದಾರೆ. ಕೆರೆಬೇಟೆಯ ಪ್ರಸವ ವೇದನೆಯ ಖುಷಿಯಲ್ಲಿ ಉತ್ಸಾಹ ಹೆಚ್ಚಿಸಿಕೊಂಡಿರುವ ಗುರು ಆತ್ಮವಿಶ್ವಾಸದಿಂದಿರುವುದು ಅವರ ಮುಂದಿನ ಹಾದಿಗೆ ಪೂರಕವಾಗಲಿದೆ.

samajamukhi.net ಸಂಪಾದಕ ಕನ್ನೇಶ್‌ ಕೋಲಶಿರ್ಸಿ ಜೊತೆ ನಿಧೇಶಕ ರಾಜ್‌ಗುರು ( ಹಳೆಯ ಚಿತ್ರ)

https://samajamukhi.net/2022/08/20/arasu-a-social-desiner/

‘ಕೆರೆಬೇಟೆ’ ಬಿಡುಗಡೆಗೆ ಸಿದ್ಧ; ಚಿತ್ರದಲ್ಲಿ ನನ್ನ ಹುಟ್ಟೂರು ಮಲೆನಾಡಿನ ಸೊಬಗು ಆಳವಾಗಿ ಬೇರೂರಿದೆ: ನಿರ್ದೇಶಕ ರಾಜಗುರು

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

ನಿರ್ದೇಶಕ ರಾಜ್‌ಗುರು – ಕೆರೆಬೇಟೆ ಚಿತ್ರದ ಸ್ಟಿಲ್

ಗೂಗ್ಲಿ ಮತ್ತು ನಟಸಾರ್ವಭೌಮದಂತಹ ಚಿತ್ರಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಗುರು ಬಿ ತಮ್ಮ ಚೊಚ್ಚಲ ಚಿತ್ರ ಕೆರೆಬೇಟೆಯೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಚಿತ್ರವು ಮಾರ್ಚ್ 15ರಂದು ಬಿಡುಗಡೆ ಸಿದ್ಧವಾಗಿದ್ದು, ನಿರ್ದೇಶಕರು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

‘ಕೆರೆಬೇಟೆ ಚಿತ್ರದ ಮೂಲಕ ನಿರ್ದೇಶಕನಾಗಿ ಪದಾರ್ಪಣೆ ಮಾಡುತ್ತಿರುವುದು ಸುದೀರ್ಘ ಹೋರಾಟದ ಪರಾಕಾಷ್ಠೆಯಾಗಿದೆ. ನಾನು 2008ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರೂ, ಸಿನಿಮಾ ನಿರ್ದೇಶಿಸುವ ನನ್ನ ಕನಸು ನನಸಾಗಲು ಇಷ್ಟು ವರ್ಷಗಳು ಬೇಕಾಯಿತು. ಈ ದಾರಿಯುದ್ದಕ್ಕೂ ವಿಷಾದದ ಕ್ಷಣಗಳು ಇದ್ದವು. ಆದರೆ, ಈಗ ಅದು ಕಾರ್ಯರೂಪಕ್ಕೆ ಬರುವುದನ್ನು ನೋಡಿ ನನಗೆ ತೃಪ್ತಿ ಇದೆ’ ಎನ್ನುತ್ತಾರೆ ರಾಜ್‌ಗುರು.

ಕಂಟೆಂಟ್ ಆಧರಿತ ಸಿನಿಮಾ ಮಾಡುವ ಅವರ ನಿರ್ಧಾರದ ಬಗ್ಗೆ ಮಾತನಾಡುವ ಅವರು, ‘ನಾನು ಕಮರ್ಷಿಯಲ್ ಚಿತ್ರವನ್ನು ಆಯ್ಕೆ ಮಾಡಿದ್ದರೆ ಮನ್ನಣೆ ಗಳಿಸಬಹುದು. ಆದರೆ, ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಮಲೆನಾಡು ಪ್ರದೇಶದಿಂದ ಬಂದವನಾಗಿ, ಕೆರೆಬೇಟೆ ನನ್ನ ಸ್ಥಳೀಯ ಸೊಬಗು ಆಳವಾಗಿ ಬೇರೂರಿರುವ ಮತ್ತು ನನ್ನ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಸಾಂಕ್ರಾಮಿಕ ರೋಗದ ನಂತರ ಪ್ರೇಕ್ಷಕರ ಬದಲಾಗುತ್ತಿರುವ ದೃಷ್ಟಿಕೋನಗಳು ಮತ್ತು ಹೊಸ ಕಂಟೆಂಟ್‌ಗೆ ಉದ್ಯಮದ ಮುಕ್ತತೆ ನನ್ನ ಚೊಚ್ಚಲ ಪ್ರವೇಶಕ್ಕೆ ಪರಿಪೂರ್ಣ ಅವಕಾಶವನ್ನು ಒದಗಿಸಿದೆ’ ಎಂದು ಅವರು ಹೇಳುತ್ತಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

‘ಇಂದಿನ ಪ್ರೇಕ್ಷಕರು ವಾಸ್ತವಕ್ಕೆ ಹತ್ತಿರವಾದ ಕಥೆಗಳ ಹುಡುಕಾಟದಲ್ಲಿ ಕಂಟೆಂಟ್ ಆಧರಿತ ಸಿನಿಮಾದತ್ತ ಆಕರ್ಷಿತರಾಗಿದ್ದಾರೆ. ಬಲಿಷ್ಠ ಕಥೆ ಹೇಳುವ ಸಂಪ್ರದಾಯಕ್ಕೆ ಹೆಸರಾದ ನಮ್ಮ ಕನ್ನಡ ಸಿನಿಮಾಗಳು ಹೊರಗಿನ ಪ್ರಭಾವಗಳಿಂದ ತಮ್ಮ ಬೇರುಗಳಿಂದ ದೂರ ಸರಿದಿದ್ದವು. ಆದಾಗ್ಯೂ, ನಮ್ಮ ಪರಂಪರೆಯನ್ನು ಸಂಭ್ರಮಿಸುವ ಕಥೆಗಳ ಪುನರುತ್ಥಾನವನ್ನು ನಾವು ಈಗ ನೋಡುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ಕೆರೆಬೇಟೆ ಸಿನಿಮಾ ಮಲೆನಾಡು ಪ್ರದೇಶಗಳಲ್ಲಿನ ಹಳೆಯ ಮೀನುಗಾರಿಕೆ ಸಂಪ್ರದಾಯಗಳ ಸುತ್ತ ಸುತ್ತುತ್ತದೆ. ಅದರ ಶೀರ್ಷಿಕೆಯನ್ನು ಸಮರ್ಥಿಸುವ ನಿರೂಪಣೆಯೊಂದಿಗೆ ಕಮರ್ಷಿಯಲ್ ಮನರಂಜನೆಯ ಅಂಶಗಳನ್ನು ಸೇರಿಸಲಾಗಿದೆ.

ಮಲೆನಾಡಿನವರೇ ಆದ ನಟ ಗೌರಿ ಶಂಕರ್ ಅವರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ನಿರ್ದೇಶಕ ರಾಜ್‌ಗುರು ಅವರು ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಗೌರಿ ಶಂಕರ್ ಅವರು ಕಥೆಯನ್ನು ಮೆಚ್ಚಿಕೊಂಡರು ಮತ್ತು ನಟ ಮತ್ತು ನಿರ್ಮಾಪಕರಾಗಿಯೂ ನೆರವಾದರು ಎನ್ನುತ್ತಾರೆ.

ನಿರ್ದೇಶಕ ರಾಜ್‌ಗುರು - ಕೆರೆಬೇಟೆ ಚಿತ್ರದ ಸ್ಟಿಲ್

ಜನಮನ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ದಿನಕರ್ ತೂಗುದೀಪ ಪ್ರಸ್ತುತಪಡಿಸಿ ಜೈಶಂಕರ್ ಪಟೇಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಿಂದು ಶಿವರಾಮ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಮತ್ತು ಸಂಪತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ ಸಂಯೋಜನೆಯಿದ್ದು, ಡಿಒಪಿ ಆಗಿ ಕೀರ್ತನ್ ಪೂಜಾರಿ ಮತ್ತು ಸಂಕಲನಕಾರರಾಗಿ ಜ್ಞಾನೇಶ್ ಬಿ ಮಾತಾಡ್ ಇದ್ದಾರೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *