ಜಾತಿ ಸಂಘ ರಾಜಕೀಯ ಅಂಗಳವಾಗುವುದು ಸರಿಯೆ? DEEVARU-NAMADHARI ISSUE

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಜನಸಂಖ್ಯೆ ಮತ್ತು ಮತದಾರರಾಗಿರುವ ನಾಮಧಾರಿ, ಧೀವರು ಹಳೆಪೈಕ ಸಮೂದಾಯ ರಾಜಕೀಯ,ಸಾಮಾಜಿಕ ಪ್ರಾತಿನಿಧ್ಯವಿಲ್ಲದೆ ಬಳಲಲು ಇಲ್ಲಿಯ ರಾಜಕೀಯ ಹಿತಾಸಕ್ತಿ ಕಾರಣವೆ ಎನ್ನುವ ಚರ್ಚೆಯೊಂದು ಪ್ರಾರಂಭವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕೈದು ಲಕ್ಷಗಳಷ್ಟು ಜನಸಂಖ್ಯೆಯ ಸಮೂದಾಯಕ್ಕೆ ರಾಜಧಾನಿ ಮಟ್ಟದಲ್ಲಿ ನಾಮಧಾರಿ ಸಂಘ ಅಸ್ಥಿತ್ವದಲ್ಲಿದೆಯಾದರೂ ಅದರ ಜೊತೆ ಸಂಬಂಧ ಹೊಂದಿರುವ ಸಂಘ ಉತ್ತರ ಕನ್ನಡದಲ್ಲಿದ್ದಂತಿಲ್ಲ. ದೀವರು, ಬಿಲ್ಲವ ನಾಮಧಾರಿ, ಹಳೆಪೈಕರ ಸಮಾನ ಸಮೂದಾಯಗಳಾದ ಈಡಿಗರ ಒಟ್ಟೂ ೨೬ ಉಪಪಂಗಡಗಳು ಸೇರಿವೆಯಾದರೂ ಈ ಎಲ್ಲಾ ಸಂಘಗಳನ್ನು ಪ್ರತಿನಿಧಿಸುವ ಏಕೈಕ ಮಾತೃ ಸಂಘಟನೆ ಈ ವರೆಗೂ ಅಸ್ಥಿತ್ವಕ್ಕೇ ಬಂದಿಲ್ಲ.

೧೯೭೦-೮೦ ರ ದಶಕದಲ್ಲಿ ಪರಿಶಿಷ್ಟ ಗುಂಪಿಗೆ ಸೇರಬೇಕಿದ್ದ ಈಡಿಗ, ದೀವರು, ಬಿಲ್ಲವರ ಸಂಘವನ್ನು ಸಮೂದಾಯದಲ್ಲಿಟ್ಟು ಅವು ಪರಿಶಿಷ್ಟರ ಯಾದಿಗೆ ಬರದಂತೆ ತಡೆದವರು ಈ ಸಮೂದಾಯದ ಪ್ರಮುಖರಾದ ಕಾಗೋಡು ತಿಮ್ಮಪ್ಪ ಮತ್ತು ಎಸ್.‌ ಬಂಗಾರಪ್ಪ. ಈ ಇಬ್ಬರ ಈಡಿಗರ ರಾಜಕೀಯ ಶಕ್ತಿ-ಸಂಬಂಧಗಳ ಹಿನ್ನೆಲೆಯಲ್ಲಿ ಪರಿಶಿಷ್ಟರ ಯಾದಿ ಸೇರದ ಈಡಿಗರ ಸಮೂದಾಯ ಆ ಕಾಲದಲ್ಲಿ ರಾಜಕೀಯ ಶಕ್ತಿಯಾಗಿ ಪ್ರತಿಬಿಂಬಿತವಾಗಿದ್ದು ಸತ್ಯ. ಆದರೆ ಅದರ ನಂತರ ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದ ಕೆಲವು ಜಿಲ್ಲೆಗಳ ದೀವರು ಈಡಿಗರೊಂದಿಗೆ ಸೇರಿಹೋಗಿದ್ದೂ ಹೌದು. ಆದರೆ ಇತರ ಜಿಲ್ಲೆಗಳಲ್ಲಿ ಈಡಿಗರ ಸಂಘಟನೆಯೊಂದಿಗೆ ಸಂಪೂರ್ಣವಾಗಿ ಸೇರದ ಕೆಲವು ಸಂಘಟನೆಗಳು ಸ್ವತಂತ್ರವಾಗಿ ಹೊರಗುಳಿದವು. ಹೀಗೆ ಜಾತಿ ಸಂಘದ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಎರಡ್ಮೂರು ಸಂಘ, ಸಂಘಟನೆಗಳಿದ್ದರೆ ಹೊರ ಜಿಲ್ಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.

ಇಂಥ ಅಸ್ಫಷ್ಟತೆಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ಧಾಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ನಾಮಧಾರಿ ಸಂಘಗಳು ಸ್ವತಂತ್ರವಾಗಿ ಅಸ್ಥಿತ್ವದಲ್ಲಿವೆ. ಈ ಸ್ವತಂತ್ರ ಅಸ್ಥಿತ್ವದ ಸಂಘಗಳು ಜಿಲ್ಲಾ ಮಟ್ಟದಲ್ಲಿ ಒಟ್ಟಾಗಿ ಒಂದೇ ಸಂಘ ರಚಿಸಿಕೊಂಡಿಲ್ಲ. ಇಂಥ ಸ್ವತಂತ್ರ ಅಸ್ಥಿತ್ವದ ತಾಲೂಕು- ಜಿಲ್ಲಾಸಂಘಗಳು ಆಯಾ ಕಾಲದ ರಾಜಕೀಯ ಶಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದು ವಿಚಿತ್ರ ಇಂಥ ಸಂದರ್ಭದಲ್ಲಿ ಸಿದ್ಧಾಪುರದಲ್ಲಿ ಅಸ್ಥಿತ್ವಕ್ಕೆ ಬಂದ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ೧೯೯೨ ರಲ್ಲಿ ಸ್ಥಾಪನೆಯಾಗಿ ಎರಡು ದಶಕಗಳಲ್ಲಿ ಹತ್ತು ಕೋಟಿಗೂ ಮಿಕ್ಕಿದ ಆಸ್ತಿ- ವ್ಯವಹಾರ ಮಾಡಿದ್ದು ವಿಶೇಶ.

ಇಂಥ ಸಂಘದ ಅಂಗಳದಲ್ಲಿ ಚಿಕ್ಕ ಸಂಚಲನೆಯಾಗಿ ಈ ಸಂಘಗಳ ಜೊತೆಗೆ ಸಂಪರ್ಕ- ಸಂಬಂಧವೇ ಇಲ್ಲದ ಬಿ.ಎಸ್. ಎನ್.ಡಿ.ಪಿ. ಸಂಘಟನೆಯ ಅಧ್ಯಕ್ಷರಾಗಿದ್ದವರೊಬ್ಬರು ಸಂಘದ ವಿಚಾರವನ್ನು ಬಹಿರಂಗಪಡಿಸಿ ಗೊಂದಲ ಹುಟ್ಟಿಸಿದರೆಂದು ಹಲ್ಲೆಯಾದ ಬಗ್ಗೆ ಪೊಲೀಸ ಪ್ರಕರಣ ದಾಖಲಾಗಿದೆ.

ಈ ಘಟನೆ ನಂತರ ನಾಮಧಾರಿ ಅಭಿವೃದ್ಧಿ ಸಂಘ ಮಾಧ್ಯಮಗೋಷ್ಠಿ ಕರೆದು ತನ್ನ ವ್ಯವಹಾರಗಳ ಬಗ್ಗೆ ವಿವರ ನೀಡಿತು. ಈ ಬೆಳವಣಿಗೆಗಳ ನಂತರ ಮತ್ತು ಮೊದಲು ಕೂಡಾ ಸಮೂದಾಯದ ಸಂಘಟನೆಗಳಲ್ಲಿ ನೇರ ರಾಜಕೀಯ ನೇತೃತ್ವ ಸರಿಯೆ? ಎನ್ನುವ ಪ್ರಶ್ನೆ ಎದ್ದಿದೆ. ಸಮೂದಾಯದ ಸಂಘಟನೆ, ಸಂಘಗಳಲ್ಲಿ ರಾಜಕೀಯ ಪ್ರವೇಶ ಸರಿ ಎಂದಾದರೆ ಅದರ ಪೂರಕ- ಮಾರಕ ಅಂಶ ಗಳಿಗೂ ಸಂಘ ಜವಾಬ್ಧಾರಿಯಾಗಬೇಕಾಗುತ್ತದೆ. ಒಂದು ವೇಳೆ ಸಂಘದಲ್ಲಿ ರಾಜಕೀಯ ಪ್ರವೇಶ ಬೇಡ ಎಂದಾದರೆ ಆಗಲೂ ಪೂರಕ- ಮಾರಕ ಅಂಶಗಳಿಗೆ ಜವಾಬ್ಧಾರಿಯಾಗಬೇಕಾಗುತ್ತದೆ. ಸಂಘ, ಸಂಘದ ವ್ಯವಹಾರದ ವಿಚಾರ ಬಹಿರಂಗವಾಗಿ ಬೀದಿರಂಪವಾದರೆ ಆಗಲೂ ಸಂಘವೇ ಜವಾಬ್ಧಾರಿ ವಹಿಸಬೇಕಾಗುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *