

ಘಟನೆ-೧-
ಲೋಕಸಭೆ ಚುನಾವಣೆಯ ಉತ್ತರ ಕನ್ನಡ ಟಿಕೆಟ್ ವಂಚಿತ ಅನಂತಕುಮಾರ ಹೆಗಡೆ ತನ್ನ ಲಾಗಾಯ್ತಿನ ಗಿಮಿಕ್ ಗಳೆಲ್ಲಾ ಕೈಕೊಡುತಿದ್ದಂತೆ ಪ್ರತಿ ಚುನಾವಣೆ ನಂತರ ಸೇರಿಕೊಳ್ಳುವ ತಮ್ಮ ಮನೆಯ ಅಂಡರ್ ಗ್ರೌಂಡ್ ಸೇರಿಕೊಂಡರಂತೆ ಎರಡೇ ದಾರಿಗಳಿರುವ ಆ ಅಂಡರ್ ವರ್ಲ್ಡ್ ಗೆ ಈ ಹಿಂದೆ ಎರಡು ಜನರಿಗೆ ಮಾತ್ರ ಪ್ರವೇಶ ಅವಕಾಶವಿತ್ತಂತೆ. ಈಗ ಅದು ಒಬ್ಬರಿಗೆ ಮಾತ್ರ ಉಳಿದುಕೊಂಡಿದ್ದು ಈ ಅಂಡರ್ ಗ್ರೌಂಡ್ ಪ್ರವೇಶ ಕಳೆದುಕೊಂಡ ಇನ್ನೊಬ್ಬ ಯಾರು ಎನ್ನುವ ತನಿಖೆ ಈಗ ಸಂಘದಿಂದ ಪ್ರಾರಂಭವಾಗಿದೆಯಂತೆ!

ಘಟನೆ-೨-
ತನಗೆ ಚುನಾವಣೆ ಬೇಡ ಬೇನಾಮಿ, ಡುಪ್ಲಿಕೇಟ್ ಖಾತೆಗಳಲ್ಲಿ ಸಂಘಿಗಳು ಇಟ್ಟಿರುವ ಹಣ-ಸಂಪತ್ತು ಉಳಿಸಿಕೊಟ್ಟರೆ ಸಾಕು. ಅವರು ನನ್ನನ್ನು ರಕ್ಷಿಸಿದರು, ಅವರನ್ನು ನಾನು ರಕ್ಷಿಸುತ್ತೇನೆ ಎಂದು ಕದಂಬ ವೃಕ್ಷದ ಕೆಳಗೆ ಕುಳಿತಿದ್ದ ಅನಂತಮಾಣಿ ಅಲಿಯಾಸ್ ಅನಂತಕುಮಾರ ಹೆಗಡೆಯವರನ್ನು ಮಾತನಾಡಿಸಲು ಹೋದ ಕುಲಬಾಂಧವರ ಮೇಲೆ ಎಗರಿಬಿದ್ದ ಮಾಜಿ ಸಂಸದ ʼನಿಂಗ ಎಲ್ಲಾ ಆ ನಾಟ್ಕದವನ ಹಿಂದೆ ಹೋಗಿ ನನ್ನೂ ಬೀದಿಗೆ ತಂದ್ರಿ, ಆಗ ಆನೆ ಚುನಾವಣೆ ಬ್ಯಾಡ ಅಂದ್ರೆ ಇನ್ನೊಂದಸರಿ ಹೆಗಡೆರೆ ಅಂದ್ರಿ ಈಗ ಟಿಕೆಟ್ ಇಲ್ಲ, ಸಾಂತ್ವನ ಹೇಳಿ ಹೋಪನ ಅಂತ ಬಂದಗಿದ್ದ ನಿಂಗಕ್ಕೆಲ್ಲಾ ಈ ಸುಟ್ಟವನ ಮನೆ ಕಾಣ್ತಿಲ್ಲನ ಎಂದು ಗದರಿಸಿ ಕಳಿಸಿದರಂತೆ!
ಘಟನೆ ಮೂರು-
ಉತ್ತರ ಕನ್ನಡದ ಉಸ್ತುವಾರಿ ಬ್ರಾಹ್ಮಣರ ಸಂಧಾನಕಾರ್ಯಕ್ಕೆ ನಿಯೋಜಿತರಾಗಿರುವ ಹೊಳೆಕೊಪ್ಪದ ಹಾಲಪ್ಪ ಯಡಿಯೂರಪ್ಪ ಆದೇಶಾನುಸಾರ ಶಿರಸಿಗೆ ಬರಲಾಗಿ ಒಂದು ಬೆಳಿಗ್ಗೆಯಿಂದ ಶಿರಸಿ- ಮತ್ತಿಕಟ್ಟಾ ಎಂದು ಕಾಯಿಸಿ ಕೊನೆಗೂ ಹುಬ್ಬಳ್ಳಿ ರಸ್ತೆ ಕೆ.ಎಚ್.ಪಿ. ಕಾಲೊನಿಗೆ ಬರಬೇಕೆಂದು ಕರೆಸಿಕೊಂಡ ಅನಂತಕುಮಾರ ಹೆಗಡೆ ʼಹಾಲಪ್ಪ ಏನು ಬಂದದ್ದುʼ ಅಂದರಂತೆ, ತಕ್ಷಣ ಟಿ.ಎಸ್.ಎಸ್. ಘಟನೆ ನೆನಪಿಸಿಕೊಂಡ ಹಾಲಪ್ಪ ಏನಿಲ್ಲಾ ನಿಮನೆ ನೋಡಿ ಬರನ ಅಂತ ಬಂದವಪ್ಪಾ ಎಂದು ನಿಟ್ಟುಸಿರು ಬಿಟ್ಟರಂತೆ.
ಸರಿ ಹಾಗಾದ್ರೆ ನೋಡಾಯ್ತಲ್ಲ ಏನಾದರೂ ಆಸರಿಗೆ ತಗಂಡು ಹೋಗಬಹುದು ಎಂದು ಮಾತುಕತೆಯನ್ನೇ ಮುಗಿಸಿದ ಅನಂತಕುಮಾರ ವರ್ತನೆ ಕಂಡ ಹಾಲಪ್ಪ ನಾವೆ ಯಡವಟ್ಟು ಅಂದಕುಂದ್ರೆ ಈ ಮಾಣಿ ನಮಕ್ಕಿಂತ ಎಡವಟ್ ಐದನಲ್ರೋ ಎಂದು ಮುಖ ಒರೆಸಿಕೊಂಡರಂತೆ ಛೆ.
ಘಟನೆ ನಾಲ್ಕು-
ಶತಾನು ಗತಾಯ ಉತ್ತರ ಕನ್ನಡ ಲೋಕಸಭೆ ಟಿಕೇಟ್ ಗಿಟ್ಟಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ನಾನು ಅನಂತಕುಮಾರ ಅಣ್ಣ ತಮ್ಮಂದಿರಿದ್ದಂತೆ ಅವರ ಮನ ಒಲಿಸಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿ ಮಾರಿಕಾಂಬೆಗೆ ಪರಾಮಸಿಯಾತು ಅಂತನೆ ಕೈ ಮುಗಿದು ಕಾರ್ ಹತ್ತಿ ಕೆ.ಎಚ್.ಬಿ. ಅನಂತ ನಿಲಯಕ್ಕೆ ಹೋದರೆ ಅಲ್ಲಿ…… ನೋ ಎಂಟ್ರಿ, ನಾಯಿ ಇದೆ ಎಚ್ಚರಿಕೆ
ಎನ್ನುವ ಬೋರ್ಡ್ ಕಾಣಬೇಕೆ! ಇದೆಲ್ಲಾ ಇದ್ದಿದೆಯಾ ಒಳಗೆ ಅನಂತ್ ಹೆಗಡೇರು ಇದ್ರನೋ ಎಂದು ಮಾಜಿ ಸ್ಫೀಕರ್ ತಮ್ಮ ನೀಳಕಾಯ ಬಗ್ಗಿಸಿ ಕಿಟಕಿ ಹಣಕಿ ಕೇಳಿದರಂತೆ!
ಏ ಮುಂದೆ ಹೋಗಲ್ ಹೇಳಭಾವ ಬಾಳ ಬಿಜಿ ಇದ್ದಿ ಎನ್ನುವ ಗಡಸು ಸ್ವರ ಪ್ರತಿಧ್ವನಿಸಿದ್ದೇ…
ಆಯ್ತರ ಹಂಗರೆ ಕಡಿಗೇ ಫ್ರೀ….. ಇದ್ದಾಗ ಬತ್ತಿ ಅಂತ ಹೇಳ ಎಂದು ಕಾಲುಕಿತ್ತರಂತೆ.
( ಇವೆಲ್ಲಾ ಮಾಜಿ ಸಚಿವರ ಮನೆಯ ಸಿ.ಸಿ.ಕೆಮರಾಗಳಲ್ಲಿ ಸೆರೆಯಾಗಿದ್ದು ಈ ಧಾರವಾಹಿ ಆಧರಿಸಿ ʼಟಿಕೇಟ್ ಸಿಕ್ಕರೂ ಬಿಡದೀ ಮಾಯೆ, ಎನ್ನುವ ಚಿತ್ರ ತಯಾರಾಗುತ್ತಿದೆ. ಈ ಚಿತ್ರ ನಿರ್ಮಾಣ ಕ್ರೌಡ್ ಫಂಡಿಂಗ್ ನಲ್ಲಿ ನಡೆಯುತಿದ್ದು ಹರೀಶ್ ಗೌಡರ್ ನಿರ್ಧೇಶನದ ಹೊಣೆ ಹೊತ್ತಿದ್ದಾರಂತೆ!)
