



ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ ನಿರ್ಧೇಶಕ ಪರುಶುರಾಮ ವ್ಹಿ ನಾಯ್ಕ ತಿಳಿಸಿದ್ದಾರೆ. ಈ ಬಾರಿ ಪುನರಾಯ್ಕೆ ಆದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು ನನ್ನ ಹಿಂದಿನ ಸೇವಾವಧಿ ಮತ್ತು ಉದ್ಯೋಗಿಯಾಗಿದ್ದಾಗಿನ ಸಮಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ ಅದೇ ಆಧಾರದಲ್ಲಿ ನನಗೆ ಪಕ್ಷ, ಜಾತಿ, ಧರ್ಮ ನೋಡದೆ ಬಹುತೇಕರು ಮತ ಚಲಾಯಿಸಿದ್ದಾರೆ. ಎರಡು ಅವಧಿ ಜೊತೆಗೆ ಮತ್ತೆ ಆಯ್ಕೆ ಆದರೂ ನಮ್ಮ ಹಾಲು ಉತ್ಪಾದಕರ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಚುನಾವಣೆ ಜಯಿಸಿದ ಬಗ್ಗೆ ಹೈನುಗಾರರಿಗೆ ಧನ್ಯವಾದ ಅರ್ಪಿಸಿದ ಅವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ.
