

ಅಕ್ರಮ ಮದ್ಯ ಮಾರಾಟದಿಂದ ಸಾಮಾಜಿಕ ಅಶಾಂತಿ ಹೆಚ್ಚುತಿದ್ದು ಅಕ್ರಮ ಮದ್ಯ ಮಾರಾಟ ನಿಯಂತ್ರಿಸಲು ರಾಜ್ಯದಾದ್ಯಂತ ಹೋರಾಟ ಮಾಡಲು ತೀರ್ಮಾನಿಸಿರುವುದಾಗಿ ನಾಡದೇವಿ ಹೋರಾಟ ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಗಾಂಧಿ ಜಯಂತಿ ನೆನಪಿಗಾಗಿ ಅಕ್ರಮ ಮದ್ಯದ ಮಾರಾಟದ ವಿರುದ್ಧ ಹೋರಾಟ ಪ್ರಾರಂಭಿಸುತಿದ್ದು ಅದು ಸಿದ್ಧಾಪುರ ದೊಡ್ಮನೆ ಗ್ರಾಮ ಪಂಚಾಯತ್ ದಿಂದ ಪ್ರಾರಂಭವಾಗಲಿದೆ ಎಂದರು.
