


ಶಿಕ್ಷಣ ಮಾತ್ರ ಬದಲಾವಣೆಯ ಅಸ್ತ್ರ ಎಂದು ಪ್ರತಿಪಾದಿಸಿರುವ ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಕೆ. ಶಿಕ್ಷಣ ವಿಲ್ಲದಿದ್ದರೆ ಮನುಷ್ಯ ಪಶು ಸಮಾನನಾಗುತ್ತಾನೆ. ಶಿಕ್ಷಣದ ಜೊತೆಗೆ ವಿವೇಕ ಸೇರಿದರೆ ಅದರ ಪರಿಣಾಮ ಹೆಚ್ಚು ಎಂದಿದ್ದಾರೆ. ಸಿದ್ದಾಪುರ ತಾಲೂಕಾ ತಹಸಿಲ್ಧಾರ ಕಛೇರಿಯಲ್ಲಿ ಸಂಘಟಿಸಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು ಬಂಜಾರ ಸೇರಿದಂತೆ ಕೆಳವರ್ಗಗಳು ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡುವುದು ಕಡಿಮೆ. ಪಾಲಕರು ತಮ್ಮ ಮಕ್ಕಳೀಗೆ ಮುತುವರ್ಜಿಯಿಂದ ಶಿಕ್ಷಣ ನೀಡಿದರೆ ಅವರ ಬದುಕು ಹಸನಾಗುತ್ತದೆ ಎನ್ನುವುದಕ್ಕೆ ತಾನೇ ಉದಾಹರಣೆ ಎಂದರು.


ಸಿದ್ಧಾಪುರ ತಾಲೂಕಾ ಬಂಜಾರ ಸಮಾಜದ ಸಂಘದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಶ ಉಪನ್ಯಾಸ ನೀಡಿದ ಬಂಜಾರ ಮುಖಂಡ ಇಂದ್ರ ನಾಯಕ ಸಂತ ಸೇವಾಲಾಲರ ಬದುಕು, ಸಾಧನೆ, ಸಿದ್ಧಾಂತಗಳನ್ನು ವಿವರಿಸಿದರು. ಪಮ್ಮಾರ್ ಸ್ವಾಗತಿಸಿದರು. ಬಂಜಾರ ಸಮಾಜದ ಸಂಘದಿಂದ ಕು. ಕಾವ್ಯಾರಾಣಿ.ಕೆ. ರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಲೆಮಾರಿ ಸಮೂದಾಯಗಳಲ್ಲಿ ಮೌಢ್ಯ ಪ್ರಗತಿಗೆ ಅಡ್ಡಿಯಾಗಿದೆ. ಸಂತ ಸೇವಾಲಾಲರಂಥವರು ಮೌಢ್ಯ ತೊಲಗಿಸಲು ಪ್ರಯತ್ನಿಸಿ ಸಂತರಾಗಿದ್ದಾರೆ, ಅವರ ತತ್ವ,ಚಿಂತನೆಗಳಿಂದ ಪ್ರಭಾವಿತರಾಗಿ ನಾವು ಆಧುನಿಕತೆಯೊಂದಿಗೆ ಬೆರೆಯಬೇಕಿದೆ. -ಕಾವ್ಯಾರಾಣಿ ಕೆ. & ಇಂದ್ರ ನಾಯಕ್


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
