


ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದ ನೆಲಕ್ಕೆ ಮೊಟ್ಟಮೊದಲ ಬಾರಿಯೆಂಬಂತೆ ಭಾರತದ ಉಪರಾಷ್ಟ್ರಪತಿಗಳ ಆಗಮನವಾಗುತ್ತಿದೆ. ಉಪರಾಷ್ಟ್ರಪತಿಗಳ ಕಛೇರಿಯ ವಿಶೇಶ ಅಧಿಕಾರಿ ರಾಜೇಶ್ ನಾಯ್ಕರ ತಾಯಿ ಲಕ್ಷ್ಮಿ ನಾರಾಯಣ ನಾಯ್ಕ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಅಧೀನ ಅಧಿಕಾರಿ ರಾಜೇಶ್ ನಾಯ್ಕ ಭೇಟಿಯಾಗಿ ಅವರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಲು ಬರುತ್ತಿರುವ ಗೌರವಾನ್ವಿತ ಭಾರತದ ಉಪರಾಷ್ಟ್ರಪತಿಗಳು ಸಿದ್ಧಾಪುರದಲ್ಲಿ ಅರ್ಧಗಂಟೆಗಳ ಸಮಯ ಕಳೆಯಲಿದ್ದಾರೆ.

ಸಿದ್ದಾಪುರದ ಹಿರಿಯ ವಕೀಲ ಎನ್.ಡಿ. ನಾಯ್ಕರ ಇಂದಿರಾನಗರದ ಮನೆಗೆ ಭೇಟಿ ನೀಡಲಿರುವ ಜಗದೀಪ ಧನಕರ ಸ್ವಾಗತಕ್ಕೆ ಜಿಲ್ಲಾಡಳಿತ ಎಲ್ಲಾ ತಯಾರಿ ನಡೆಸಿದೆ. ಕೋಲಶಿರ್ಸಿ ಗ್ರಾ.ಪಂ. ನ ತಾಲೂಕಾ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿಯಲಿರುವ ಉಪರಾಷ್ಟ್ರಪತಿಗಳು ತಾಲೂಕಾ ಕ್ರೀಡಾಂಗಣದಿಂದ ಸಿದ್ಧಾಪುರ ರಸ್ತೆಯ ಮೂಲಕ ಇಂದಿರಾನಗರಕ್ಕೆ ಬಂದು ಅಲ್ಲಿ ವೃಕ್ಷಾರೋಪಣದ ಜೊತೆಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಉಪರಾಷ್ಟ್ರಪತಿಗಳ ಅಪರೂಪದ ಭೇಟಿಗೆ ಪೂರ್ವಸಿದ್ಧತೆ ನಡೆಸಿರುವ ತಾಲೂಕಾ ಆಡಳಿತಕ್ಕೆ ರಾಜೇಶ್ ನಾಯ್ಕರ ಕುಟುಂಬ ಸಂಪೂರ್ಣ ಸಹಕಾರ ನೀಡಿದೆ. ನೀತಿಸಂಹಿತೆ, ಪ್ರೋಟೋಕಾಲ್, ಜೆಡ್ ಭದ್ರತೆಗಳ ಹಿನ್ನೆಲೆಯಲ್ಲಿ ಸೋಮುವಾರ ಬೆಳಿಗ್ಗೆ೧೧ ರಿಂದ ೧ ಗಂಟೆಯ ವರೆಗೆ ಶಿರಸಿ ರಸ್ತೆ, ಸಿದ್ಧಾಪುರದ ಕೆಲವು ಭಾಗಗಳಲ್ಲಿ ಕೆಲವು ನಿರ್ಬಂಧಗಳು ಜಾರಿಯಲ್ಲಿರಲಿವೆ. ಬೆಳಿಗ್ಗೆ ಶಿರಸಿಯಿಂದ ವಾಯುಮಾರ್ಗದಲ್ಲಿ ಸಿದ್ಧಾಪುರಕ್ಕೆ ಬರಲಿರುವ ಉಪರಾಷ್ಟ್ರಪತಿಗಳು ಮಧ್ಯಾನ್ಹದ ವರೆಗೆ ಸಿದ್ಧಾಪುರದಲ್ಲಿದ್ದು ನಂತರ ಮರಳಲಿದ್ದಾರೆ.
