

ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸಮಾಡುವ ಎಂ.ಎಲ್.ಎ. ಗಳು ಎಂ.ಪಿ., ಮಂತ್ರಿ, ಅಧಿಕಾರಿ,ಇತ್ಯಾದಿ ಸರ್ಕಾರಿ ವೇತನ, ಭತ್ಯೆ, ಅನುಕೂಲ ಪಡೆದು ಕೆಲಸ ಮಾಡುವವರಿಗೆ ಅದು ಕರ್ತವ್ಯ ಮತ್ತು ಜವಾಬ್ಧಾರಿ.
ಆದರೆ ಇಂಥ ಅನುಕೂಲಗಳಿಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡುವವರು ಅನೇಕರಿದ್ದಾರೆ ಅವರು ಹೆಚ್ಚೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಹಾಕಿಕೊಳ್ಳಬಹುದು, ಅಥವಾ ಪತ್ರಿಕೆಗಳಿಗೆ ವರದಿ, ಚಿತ್ರ ನೀಡಬಹುದು. ಆದರೆ ಮನೆ, ಮಠ ಬಿಟ್ಟು ಸಂತೃಸ್ತರಿಗಾಗಿ ದುಡಿಯುವ ಈ ನಿಸ್ವಾರ್ಥ ಸೇವಕರಿದ್ದಾರಲ್ಲ ಅವರು ನಿಜಕ್ಕೂ ಸನ್ಮಾನ, ಪ್ರಶಂಸೆ, ಗೌರವಕ್ಕೆ ಅರ್ಹರು.
ಈ ವಾರದ ಉತ್ತರ ಕನ್ನಡದ ನೆರೆ ಹಾವಳಿಯಲ್ಲಿ ಹೀಗೆ ಕೆಲಸ ಮಾಡಿದ ಕೈ, ಮನಸ್ಸುಗಳು ಅನೇಕ.
ಸಿದ್ಧಾಪುರದಲ್ಲಿ ಹೆಮ್ಮನಬೈಲ್ ಮತ್ತು ಕಲ್ಯಾಣಪುರ, ಅಕ್ಕುಂಜಿಗಳಲ್ಲಿ ತಾತ್ಕಾಲಿಕ ಪುನರ್‍ವಸತಿ ಕೇಂದ್ರಗಳಲ್ಲಿ ದುಡಿದ ಅನೇಕರು ನಮ್ಮ ಗಮನ ಸೆಳೆದರು. ಆದರೆ ಅವರೆಲ್ಲರ ಮುಖ ಪರಿಚಯವಾಗಲಿ,ಸ್ನೇಹ-ಸಂಬಂಧಗಳಾಗಲಿ ನಮಗಿಲ್ಲ. ಆದರೆ ನಮ್ಮ ಪರಿಚಯದ ತಾ.ಪಂ. ಸದಸ್ಯ ನಾಸಿರ್‍ಖಾನ್ ಈ ವಾರವಿಡೀ ಈ ಸಂತೃಸ್ತರ ಜೊತೆಗಿದ್ದರು. ಸಿದ್ಧಾಪುರದ ತಹಸಿಲ್ಧಾರರು ಹುರುಪಿನಿಂದಲೇ ಇಲ್ಲಿಯ ಜವಾಬ್ಧಾರಿ ನಿರ್ವಹಿಸಿದ್ದಾರೆ. ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ದುಡಿದ ಅನೇಕರಿದ್ದಾರೆ. ಇವರೆಲ್ಲರ ಜೊತೆಗೆ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿದ್ದಾರೆ. ಇವರಲ್ಲಿ ಕೊಂಡ್ಲಿ ಗ್ರಾಮ ಚಾವಡಿಯ ಆರ್.ಐ. ದಿವಾಕರ್ ನಾಯ್ಕ ತಮ್ಮ ಬಿರುಕುಬಿಟ್ಟ ಕಾಲ್ ಬೆರಳುಗಳ ಪಾದವನ್ನೇ ಊರುತ್ತಾ ಇಡೀ ತಾಲೂಕು ಸುತ್ತಿದ್ದಾರೆ!.
ಇವರ ಮಧ್ಯೆ ಗವಿನಗುಡ್ಡ ಸೇರಿದಂತೆ ಸಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಹೀಗೆ ನಿಸ್ವಾರ್ಥ ಸೇವೆ ಮಾಡಿದ ಅನೇಕರಿದ್ದಾರೆ. ಇವರೆಲ್ಲರಿಗೆ ಧನ್ಯವಾದಗಳು. ಊರು ಕೊಚ್ಚಿಹೋದ ಮೇಲೆ ವಾರದ ಕೊನೆ ಅವಧಿಯಲ್ಲ ಓಡೋಡಿ ಬಂದು ಸುದ್ದಿ ಮಾಡಿದ ಕೆಲವು ಎಂ.ಪಿ., ಎಂ.ಎಲ್.ಎ.ಗಳಿಗೂ. ಅವರ ಚಿತ್ರ ಹಾಕಿ ಭಟ್ಟಂಗಿತನ ಮೆರೆದ ಕೆಲವು ಭಕ್ತಹುಳುಗಳಿಗೂ.



