ಮಧು ಬಂಗಾರಪ್ಪ,ಶಾರದಾ ನಾಯ್ಕ ಸೇರಿ ಕೆಲವರು ಕಾಂಗ್ರೆಸ್‍ಗೆ

ರಾಷ್ಟ್ರರಾಜಕಾರಣದಲ್ಲಿ ಸುಳ್ಳು,ವೈಭವೀಕರಣ,ಪ್ಯಾಷಿಸ್ಟ್ ಮನೋಭಾವ ವಿಪರೀತವಾಗುತ್ತಿರುವ ಸತ್ತ್ಯೋತ್ತರ ಕಾಲದಲ್ಲಿ ಕರ್ನಾಟಕದಲ್ಲಿ ಕಟೀಲ್ ಬಿ.ಜೆ.ಪಿ.ರಾಜ್ಯಾಧ್ಯಕ್ಷರಾಗಿರುವುದು, ಶಾಸಕರನ್ನು ಖರೀದಿಸಿ ಉಪಚುನಾವಣೆ ಮಾಡುತ್ತಿರುವುದು. ಬಿ.ಜೆ.ಪಿ.ಯಲ್ಲಿ ಆರೆಸ್ಸೆಸ್ ಮತ್ತು ಬಹುಸಂಖ್ಯಾತರ ಕಾಳಗ,ಅಲ್ಲಲ್ಲಿ ವಲಸೆ, ಇಂಥ ಬೆಳವಣಿಗೆಗಳ ನಂತರ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಬೆಳವಣಿಗೆಗಳಿಗೆ ತಕ್ಕಂತೆ ಮಾಜಿಶಾಸಕಮಧುಬಂಗಾರಪ್ಪ,ಶಾರದಾ ನಾಯ್ಕ ಸೇರಿದಂತೆ ಕೆಲವರು ಕಾಂಗ್ರೆಸ್ ಕಡೆವಾಲುತ್ತಿರುವ ಸುದ್ದಿ ವೈರಲ್ ಆಗುತ್ತಿದೆ.
ಒಂದುಕಾಲದಲ್ಲಿ ಕಾಂಗ್ರೆಸ್‍ನ ಭದ್ರ ಕೋಟೆಗಳಾಗಿದ್ದ ಶಿವಮೊಗ್ಗ ಮತ್ತು ಉತ್ತರಕನ್ನಡವನ್ನು ಬಿ.ಜೆ.ಪಿ.ಜಿಲ್ಲೆಗಳನ್ನಾಗಿಸುವಲ್ಲಿ ಮಾಜಿಮುಖ್ಯಮಂತ್ರಿಗಳಾದ ಬಂಗಾರಪ್ಪ,ಕುಮಾರಸ್ವಾಮಿ,ರಾಮಕೃಷ್ಣ ಹೆಗಡೆಯವರ ಪಾತ್ರಗಳಿವೆ.
10 ಜನ ಶಾಸಕರ ರಾಜ್ಯ ಬಿ.ಜೆ.ಪಿಯನ್ನು 70 ಶಾಸಕರಿಗೇರಿಸಿದ್ದ ಬಂಗಾರಪ್ಪ ಆ ಪಕ್ಷದ ರಿಮೋಟ್ ಕಂಟ್ರೋಲರ್ ಆರೆಸ್ಸೆಸ್ಸಿನಿಂದ ಹೊಡೆತ ತಿಂದ್ದದ್ದು ಹಳೆ ಕತೆ. ಈ ವಿದ್ಯಮಾನಕ್ಕೂ ಮೊದಲು ಬಳಲಿದ್ದ ಬಿ.ಜೆ.ಪಿ.ಗೆ ಶಕ್ತಿ ತುಂಬಿದವರು ಅಂದಿನ ಜೆ.ಡಿ.ಯು.ಮುಖಂಡ ರಾಮಕೃಷ್ಣ ಹೆಗಡೆ ನಂತರ ಕುಮಾರಸ್ವಾಮಿ ಆಡಳಿತದ ನಂತರ ರಾಜ್ಯದಲ್ಲಿ ಬಿ.ಜೆ.ಪಿ.ಅಧಿಕಾರದ ರುಚಿ ನೋಡಲು ಸಾಧ್ಯವಾಗಿದ್ದು.
ಹೀಗೆ ಅನೇಕ ಬದಲಾವಣೆ, ಅವಸ್ಥಾಂತರಗಳ ನಂತರ ಕೂಡ ಅನೈತಿಕಮಾರ್ಗಗಳ ಮೂಲಕ ಅಧಿಕಾರಕ್ಕೇರಿದ ಶಿಸ್ತಿನ ಪಕ್ಷ ಬಿ.ಜೆ.ಪಿ. ರಾಜ್ಯ ಸೇರಿದಂತೆ ಹಲವೆಡೆ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಿ ಕಾಂಗ್ರೆಸ್ ವಿರೋಧವೊಂದರಿಂದಲೇ ಶಕ್ತಿಗಳಿಸಿಕೊಂಡಿದ್ದು ರಾಜ್ಯ ಮತ್ತು ದೇಶದ ರಾಜಕೀಯ ಚರಿತ್ರೆಯ ಭಾಗ.
ಈಗ ಮತ್ತೆ ಬಿ.ಜೆ.ಪಿ.ಕಾಂಗ್ರೆಸ್,ಜನತಾದಳಗಳಮುಖಂಡರು,ಶಾಸಕರನ್ನು ಮುಟ್ಟಿನೋಡುವ ಆಟ ಶುರುಮಾಡಿದೆ. ಈ ಆಟಕ್ಕೆ ಒಪ್ಪದ,ಈ ಆಟದ ವಿರೋಧಿಗಳಾದ ರಾಜುಕಾಗೆ ಸೇರಿದಂತೆ ಕೆಲವರು ಆಡಳಿತಾರೂಢ ಬಿ.ಜೆ.ಪಿ.ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದು ಹೊಸ ಬೆಳವಣಿಗೆ.
ಇದೇ ಸಮಯದಲ್ಲಿ ಸಿದ್ಧರಾಮಯ್ಯ ವಿರೋಧಿಪಕ್ಷದ ನಾಯಕರಾಗಿರುವುದು,ಕಾಂಗ್ರೆಸ್ ಹಿಡಿತ ಸಾಧಿಸಿರುವುದು ಒಂದೆಡೆಯಾದರೆ ಬಿ.ಜೆ.ಪಿ.ಯಿಂದ ರಾಜಕೀಯ ವೈರಿಯಾಗಿ ಹೊಡೆತ ತಿಂದಿರುವ ಡಿ.ಕೆ.ಶಿವಕುಮಾರ ಕುಟುಂಬ ಬಿ.ಜೆ.ಪಿ.ಅವಸಾನಕ್ಕೆ ಪಣತೊಟ್ಟಿದೆಯಂತೆ.
ಈ ಬೆಳವಣಿಗೆಯ ಭಾಗವಾಗಿ ಬಿ.ಜೆ.ಪಿ.ವಿರೋಧಿಗಳನ್ನು ಕ್ರೋಢೀಕರಿಸುತ್ತಿರುವ ಕಾಂಗ್ರೆಸ್ ನಾಯಕರು ಮೊದಲ ಹಂತದಲ್ಲಿ ಮಾಜಿ ಶಾಸಕರಾದ ಮಧುಬಂಗಾರಪ್ಪ ಮತ್ತು ಶಾರದಾ ನಾಯ್ಕರಿಗೆ ಗಾಳ ಹಾಕಿದ್ದಾರಂತೆ! ಮಧು ಬಂಗಾರಪ್ಪ ಮಲೆನಾಡು,ಕರಾವಳಿ,ಉತ್ತರಕರ್ನಾಟಕ ಭಾಗದಲ್ಲೂ ಹೆಸರಿರುವ ನಾಯಕ,ಈ ಹಿಂದೆ ಜಾ.ದಳದ ಮಲೆನಾಡು,ಕರಾವಳಿ ಜವಾಬ್ಧಾರಿಗಳನ್ನೂ ಮಧು ನಿಭಾಯಿಸಿರುವ ಅನುಭವ ಹೊಂದಿದ್ದಾರೆ. ಶಾರದಾ ನಾಯ್ಕ ಉತ್ತರಕರ್ನಾಟಕ,ಹೈದ್ರಾಬಾದ್ ಕರ್ನಾಟಕದ ಮತದಾರರು,ಮುಖಂಡರ ಮೇಲೆ ಪ್ರಭಾವ ಬೀರಬಹುದಾದ ಮಹಿಳೆ. ಜನತಾದಳದ ಈ ಮುಖಂಡರನ್ನು ಕಾಂಗ್ರೆಸ್ ಗೆ ತರುವ ಮೂಲಕ ಮಲೆನಾಡು,ಕರಾವಳಿ, ಬಯಲುಸೀಮೆಗಳಲ್ಲಿ ಪಕ್ಷಗಟ್ಟಗೊಳಿಸುವ ಉದ್ಧೇಶ ಹೊಂದಿರುವ ಕಾಂಗ್ರೆಸ್ ಗೆ ಬಿ.ಜೆ.ಪಿ.,ಜನತಾದಳಗಳಿಗೆ ಸೆಡ್ಡುಹೊಡೆಯಲೂ ಇದೇ ಅಂಶಗಳು ಅವಶ್ಯ.
ಈ ಹಿನ್ನೆಲೆಯಲ್ಲಿ ಸೊರಬದ ಸಹೋದರರು,ಪಕ್ಷಗಳ ಮೇಲಾಟದ ಸೂತ್ರದಂತೇ ಮಧು ಮತ್ತು ಶಾರದಾರನ್ನು ಕಾಂಗ್ರೆಸ್‍ಗೆ ಕರೆತಂದು ಹೊಸ ಆಟ ಆಡುವ ಸೂತ್ರ ರಚಿಸಿದ್ದಾರೆ. ಈ ತಂತ್ರದ ಭಾಗವಾಗಿ ಮತ್ತಷ್ಟು ಮುಖಂಡರು ಬಿ.ಜೆ.ಪಿ., ಜನತಾದಳಗಳಿಂದ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಸಮ್ಮಿಶ್ರ ಮೈತ್ರಿಯ ನಂತರ ಕಾಂಗ್ರೆಸ್ ಜೊತೆ ದೋಸ್ತಿ ಬೆಳೆಸಿಕೊಂಡಿರುವ ಕೆಲವರು ಜನತಾದಳದಿಂದ ಕಾಂಗ್ರೆಸ್ ಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.
ಜಾದಳ ಬಿ.ಜೆ.ಪಿ.ಜೊತೆ ಮತ್ತೆ ಸಂಖ್ಯ ಬೆಳೆಸಿದರೆ ಆಗ ಜನತಾದಳ,ಬಿ.ಜೆ.ಪಿ. ದೋಸ್ತಿಯನ್ನು ವಿರೋಧ ಮಾಡುವ ಕೆಲವು ಮುಖಂಡರು ಬಿ.ಜೆ.ಪಿ., ಜಾ.ದಳಗಳಿಂದ ಕಾಂಗ್ರೆಸ್ ಸೇರಲಿದ್ದಾರೆ.ಈ ಬೆಳವಣಿಗೆಗಳ ಲಾಭ ಪಡೆದು ಮತ್ತೆ ಮುಖ್ಯಮಂತ್ರಿಯಾಗಲು ಯೋಜಿಸಿರುವ ಸಿದ್ಧರಾಮಯ್ಯ ನಾಯಕತ್ವಕ್ಕೆ ದಿನೇಶ್ ಗುಂಡೂರಾವ ಮತ್ತು ಡಿ.ಕೆ.ಶಿವಕುಮಾರ ಹೆಗಲುಕೊಟ್ಟಿದ್ದಾರೆ. ಹಾಗಾಗಿ ಜಾದಳದ ಸ್ನೇಹದಿಂದ ಕಳೆದುಕೊಂಡ ಗೌರವ,ಶಕ್ತಿಯನ್ನು ಜಾ.ದಳ, ಬಿ.ಜೆ.ಪಿ.ಗಳವಿರೋಧದಿಂದ ಗಳಿಸುವ ತಂತ್ರದ ಅಂಗವಾಗಿ ಮಧು,ಶಾರದಾ ನಾಯ್ಕ ರೊಂದಿಗೆ ಕೆಲವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *