

- ವಿಶೇಶಚೇತನರಿಗೆ ತಾಲೂಕಾ ಆಸ್ಫತ್ರೆಯಲ್ಲಿಯೇ ಪ್ರಮಾಣಪತ್ರ ನೀಡಿಕೆ.
ಪ್ರತಿಮಂಗಳವಾರ ವಿಶೇಶಚೇತನರ ಪ್ರಮಾಣಪತ್ರ,ಚಿಕಿತ್ಸೆಗೆ ದಿನ ನಿಗದಿ - 2019 ರ ಆಗಸ್ಟ್ ನಿಂದಲೇ ಮಂಗನಕಾಯಿಲೆ ನಿರೋಧಕ ಲಸಿಕೆ ನೀಡಿಕೆ ಪ್ರಾರಂಭ,84 ಸಾವಿರ ಡೋಜ್ ಗುರಿ,58706 ಜನರಿಗೆ ಲಸಿಕೆ ನೀಡಲು ಯೋಜನೆ, ಈಗಾಗಲೇ 11 ಸಾವಿರ ಜನರಿಗೆ ನೀಡಿಕೆ.
- ಜನ,ಜಾನುವಾರುಗಳ ರಕ್ಷಣೆಗೆ ಹೈಪರ್ಮೆಟ್ರಿನ್ ಔಷಧಿ ಬಳಕೆ.
*ಫೆಬ್ರವರಿ ಅಂತ್ಯದ ಒಳಗೆ ಲಸಿಕೆ ನೀಡಿಕೆ ಸಮಯಮಿತಿ. - ಮಂಗನಕಾಯಿಲೆಯ ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ, ಮೂರು ತುರ್ತು ವಾಹನ ವ್ಯವಸ್ಥೆ.
*ಅರಣ್ಯ ಪ್ರವೇಶಕ್ಕೆ ಆರೋಗ್ಯಇಲಾಖೆಯ ಗುರುತಿನ ಚೀಟಿ ಕಡ್ಡಾಯ. - ರಕ್ತ ಪರೀಕ್ಷಾ ವರದಿ 48 ಗಂಟೆಗಳೊಳಗೆ ಲಭ್ಯ.
- ಮಂಗನ ಕಾಯಿಲೆಗೆ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸರ್ಕಾರದಿಂದ ವೆಚ್ಚಭರಣ
- ಜಿಲ್ಲೆಯ266 ಶಾಲೆಗಳಲ್ಲಿ ನೋಡೆಲ್ ಟೀಚರ್ ನೇಮಕ.
- ಜಿ.ಪಂ.ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಕೆಲಸ.
- ತಾಲೂಕು ಆಸ್ಫತ್ರೆಯ ಹೊರ ರೋಗಿ ಪ್ರವೇಶ ಚೀಟಿ ಶುಲ್ಕ 15 ರಿಂದ 10 ರೂ ಗಳಿಗೆ ಇಳಿಕೆ.
- ಕಾಡುಪ್ರವೇಶಿಸುವವರಿಗೆ ಸೈಪರ್‍ಮೆಟ್ರಿನ್ ಜೊತೆ ಸಂಪೂರ್ಣ ಬಟ್ಟೆ ಧರಿಸಲು ಸೂಚನೆ, ಕಾಡಿಗೆ ಹೋಗಿ ಬರುವ ಜಾನುವಾರುಗಳು,ಕೊಟ್ಟಿಗೆಗೆ ಸೈಪರ್ ಮೆಟ್ರಿನ್ ನಿಂದ ನಿತ್ಯ ಸ್ನಾನದ ಸಲಹೆ.
- ತಾಲೂಕಾ ಆಸ್ಫತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ರಿಂದ ಆಸ್ಫತ್ರೆ ಸುಧಾರಣೆಗೆ ಬೇಡಿಕೆಗಳ ಬೃಹತ್ ಪಟ್ಟಿ ಸಲ್ಲಿಕೆ.
ಮಂಗನ ಕಾಯಿಲೆ ಮುನ್ನೆಚ್ಚರಿಕೆ ಮತ್ತು ರೋಗಿಗಳ ಉಪಚಾರಕ್ಕೆ ಸರ್ವಸಿದ್ಧತೆಗಳಾಗಿದ್ದು ಸಿದ್ಧಾಪುರ ಮತ್ತು ಉತ್ತರ ಕನ್ನಡದ ಜನತೆ ಈ ಬಗ್ಗೆ ಆತಂಕಕ್ಕೊಳಗಾಗುವ ಅನಿವಾರ್ಯತೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ ಹೇಳಿದ್ದಾರೆ.
ಇಲ್ಲಿಯ ಸರ್ಕಾರಿ ಆಸ್ಫತೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ವರ್ಷ ಅನಿರೀಕ್ಷಿತವಾಗಿ ಬಂದ ಮಂಗನಕಾಯಿಲೆ ಸಾವು-ನೋವುಗಳನ್ನು ಉಂಟುಮಾಡಿ ಜನರು ಭಯಭೀತರಾಗುವಂಥ ಸ್ಥಿತಿ ಉದ್ಭವಿಸಿತ್ತು. ಈ ವóರ್ಷ ಕಳೆದ ವರ್ಷದಂತೆ ಆಗಬಾರದೆಂಬ ಮುನ್ನೆಚ್ಚರಿಕೆಯಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮಂಗನಕಾಯಿಲೆ ನಿರೋಧ ಮತ್ತು ನಿಯಂತ್ರಣಕ್ಕೆ ಅವಶ್ಯವಾದ ಎಲ್ಲಾ ಅನುಕೂಲ, ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗಿದೆ ಎಂದರು.
ಇಲ್ಲಿಯವರೆಗೆ ತಾಲೂಕಿನಲ್ಲಿ 19 ಮಂಗಗಳು ಸಾವನ್ನಪ್ಪಿದ್ದು ಮಂಗನಕಾಯಿಲೆ ನಿರೋಧಕ್ಕಾಗಿ ಹನ್ನೊಂದುಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದರು.
