a model school of sirsi dist- ಆಧುನಿಕ ಶಿಕ್ಷಣದ ಜೊತೆಗೆ ಕೃಷಿ ಶಿಕ್ಷಣ ನೀಡುವ ಬೇಡ್ಕಣಿ ಶಾಲೆ

ಸಿದ್ದಾಪುರ ತಾಲೂಕಿನ ಸರಕಾರಿ ಮಾದರಿ ಬೇಡ್ಕಣಿ ಶಾಲೆಗೆ 117 ವರ್ಷಗಳ ಇತಿಹಾಸವಿದೆ.
ಇಂದು ತಾಲೂಕಿನ ಉತ್ತಮ ಶಾಲೆಗಳಲ್ಲಿ ಇದು ಒಂದು ಎಂದು ಗುರುತಿಸಿಕೊಂಡಿದೆ. 150 ವಿದ್ಯಾರ್ಥಿಗಳು ಇಲ್ಲಿ ಕಲಿಯುತಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆ ಇಲ್ಲಿದೆ.
ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಕಲಿಕೆಗೆ ಐದರಿಂದ ಏಳನೇ ತರಗತಿವರೆಗೆ ಪ್ರತಿ ತರಗತಿಗೆ ಸ್ಮಾರ್ಟ್ ಟಿ.ವಿ. ಇದ್ದು ಆಧುನಿಕ ಶಿಕ್ಷಣಕ್ಕೆ ಇದು ಸಹಕಾರಿಯಾಗಿದೆ.
ಈ ವರ್ಷ ಶಾಲೆಯ ಅಂಗಳದಲ್ಲಿ ಮಕ್ಕಳಿಗೆ ಕೃಷಿ ಪಾಠದೊಂದಿಗೆ ತರಕಾರಿ ಬೆಳೆಸಿದ್ದು ಹರಿವೆ , ಪಾಲಕ್ , ಟೊಮೆಟೊ ಮತ್ತು ಬದನೆಕಾಯಿ ಬೆಳೆಯಲಾಗಿದೆ. ಇದರಿಂದಾಗಿ ಮಕ್ಕಳಿಗೆ ಕೃಷಿಯನೈಜ ಅನುಭವ ನೀಡಲಾಗಿದೆ.
ಪ್ರತಿ ವರ್ಷ ಮಕ್ಕಳು ಜನವರಿ ತಿಂಗಳಲ್ಲಿ ಮಕ್ಕಳೇ ಸಂತೆ ನಡೆಸುವುದು ಇಲ್ಲಿಯ ವಿಶೇಷವಾಗಿದೆ. ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಮಕ್ಕಳಲ್ಲಿ ದೇಶಭಕ್ತಿ ಮೂಡುವಂತೆ ಯಾವುದೇ ತಾಲೂಕಾ ಮಟ್ಟದ ಕಾರ್ಯಕ್ರಮಕ್ಕೆ ಕಡಿಮೆ ಇಲ್ಲದಂತೆ ಅದ್ಧೂರಿಯಾಗಿಆಚರಿಸಲಾಗುತ್ತಿದೆ.
ಶಾಲೆಯ ಅಭಿವೃದ್ಧಿಯಲ್ಲಿ ದಾನಿಗಳಾದ ಜಿ.ಕೆ. ಹರ್ಗಿಯವರ ಪಾತ್ರ : ನಿವೃತ್ತ ಸೈನಿಕರೂ ಮತ್ತು ಶಿಕ್ಷಕರೂ ಆಗಿರುವ ಜಿ.ಕೆ ಹರ್ಗಿ ತಮ್ಮ ವೃದ್ಯಾಪ್ಯ ವೇತನದ ಹಣದಿಂದ ಶಾಲೆಗೆ ಎರಡು ಸ್ಮಾರ್ಟ್ ಟಿ.ವಿ. ಮಕ್ಕಳಿಗೆ ಸಿಹಿ ಊಟ , ಶಾಲೆಯ ಅಂಗಳಕ್ಕೆ ಪಾಟೀಕಲ್ಲು , ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ್ದು ತಮ್ಮ ಪಿತ್ರಾರ್ಜಿತ ತೋಟದ ಆದಾಯದ 15,000 ರೂ. ಗಳನ್ನು ತಮ್ಮ ಜೀವಿತಾವಧಿನಂತರವೂ ಶಾಲೆಗೆ ನಿರಂತರವಾಗಿ ಸಿಗುವಂತೆ ಪತ್ರ ಬರೆದಿರುವುದು ವಿಶೇಷ.
ಇವರ ಜೊತೆ ಎಂ.ಆರ್. ನಾಯ್ಕ , ಅಣ್ಣಪ್ಪ ನಾಯ್ಕ ಹಾಗೂ ಇನ್ನೂ ಅನೇಕರು ಶಾಲೆಗೆ ದೇಣಿಗೆ ನೀಡಿರುತ್ತಾರೆ.
ಶಾಲೆಯ ಪ್ರಭಾರೆ ಮುಖ್ಯಾಧ್ಯಾಪಕ ಕೆ.ಪಿ.ರವಿ ಯವರ ದೂರದೃಷ್ಠಿ ಇಂದು ಈ ಶಾಲೆ ಇಷ್ಟು ಪ್ರಗತಿ ಹೊಂದಲು ಕಾರಣವೆಂದರೆ ತಪ್ಪೇನಿಲ್ಲ. ಮಕ್ಕಳನ್ನು ಕ್ರೀಡಾ ಚಟುವಟಿಕೆ , ಸಹಪಠ್ಯ ಚಟುವಟಿಕೆ , ಇನ್‍ಸ್ಪೈರ್ ಅವಾರ್ಡ್ ಚಟುವಟಿಕೆಗಳಲ್ಲಿ ಶಾಲೆಯ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಇಂದು ಜಿಲ್ಲಾ ಮಟ್ಟ , ರಾಜ್ಯ ಮಟ್ಟದವರೆಗೆ ಪ್ರತಿನಿಧಿಸುವಂತೆ ಪ್ರೋತ್ಸಾಹಿಸುತ್ತಿರುವುದು ಸಮಾಜ ಇವರನ್ನು ಗೌರವಿಸುವಂತೆ ಮಾಡಿದೆ. ಶಾಲೆಯ ಮೇಲ್‍ಉಸ್ತುವಾರಿ ಸಮೀತಿ ಯುವ ಉತ್ಸಾಹಿ ಪಾಲಕರಿಂದ ಕೂಡಿದೆ. ಗ್ರಾಮಸ್ಥರು ಎಸ್.ಡಿ.ಎಂ.ಸಿ. ಅಧ್ಯಕ್ಷ ಜಯಪ್ರಕಾಶ ನಾಯ್ಕರೊಂದಿಗಿನ ಸಮೀತಿ ಈ ಶಾಲೆಯ ಪ್ರಗತಿಯ ಹಿನ್ನೆಲೆಯಲ್ಲಿ ಅಹರ್ನಿಸಿ ದುಡಿಯುತ್ತಿರುವ ಎಲ್ಲರೂ ಮೆಚ್ಚುಗೆವ್ಯಕ್ತಪಡಿಸುತ್ತಾರೆ.

ಮಂಡ್ಲಿಕೊಪ್ಪ ಬಳಿ ಬಂದ ಬಂಧೀಸರ ವನೌಷಧದ ಜನಪ್ರೀಯ ನಡೆ
ಸಿದ್ಧಾಪುರ ಬಂಧೀಸರದ ಅರುಣ ಗೌಡರ್ ನಾಟಿವೈದ್ಯರಾಗಿ ಹೆಸರುಮಾಡುತಿದ್ದಾರೆ.
ಅರುಣ್ ಗೌಡರ್ ಕುಟುಂಬದ ನಾಟಿ ಔಷಧಕ್ಕೂ ಬಿಳಗಿ ಅರಸರ ಕಾಲದ ವನೌಷಧಕ್ಕೂ ಬಾದರಾಯಣ ಸಂಬಂಧವಿದೆ.
300 ವರ್ಷಗಳ ಹಿಂದೆ ಈ ಭಾಗದ ಸಾಮಂತ ಅರಸರಾಗಿದ್ದ ಬಿಳಗಿ ಅರಸರ ಕೊನೆಯ ರಾಜರ ಹೆಂಡತಿ(ರಾಣಿ) ಈ ಮನೆತನದವರು ಎಂಬುದು ಚಾರಿತ್ರಿಕ ದಾಖಲೆ.
ಇಂಥ ಹಿನ್ನೆಲೆಯ ಇವರ ಕುಟುಂಬದ ವನೌóಷಧಕ್ಕೆ ಸುಮಾರು ನೂರಾರು ವರ್ಷಗಳ ಇತಿಹಾಸವಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅರುಣ್ ಗೌಡ.
ಬಂಧೀಸರ ಔಷಧ,ಗೌಡರ ನಾಟಿಔಷಧ ಎಂದು ಪ್ರಖ್ಯಾತವಾಗಿರುವ ಬಂಧೀಸರ ಗೌಡರ ಕುಟುಂಬದ ಔಷಧಿಗೆ ವಾಸಿಯಾಗದ ಕಾಯಿಲೆಗಳೇ ಇಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *