ಲಾಕ್‍ಔಟ್ ತೊಂದರೆಗೆ ಸ್ಥಳಿಯಾಡಳಿತದ ಸಹಕಾರ, ಹಾಲಿಗೆ ಹಾಂ, ಮಾಂಸಕ್ಕೆ ನೊ!

ಮುಂಜಾಗೃತೆಯಿಲ್ಲದೆ ವಿದೇಶಿಯರು, ವಿದೇಶದಲ್ಲಿದ್ದ ಸ್ವದೇಶಿಯರನ್ನು ಒಳಗೆ ಬಿಟ್ಟುಕೊಂಡ ಕೇಂದ್ರಸರ್ಕಾರ ದಿಢೀರ್ ಲಾಕ್‍ಔಟ್ ಘೋಶಿಸಿ ದೇಶವನ್ನೇ ಗೊಂದಕ್ಕೀಡುಮಾಡಿದೆ. ಈ ಸಮಯದಲ್ಲಿ ಗ್ರಾಮ, ವಾರ್ಡ್, ಎಲ್ಲೆಡೆ ದಿನಸಿ, ತರಕಾರಿ ಪೂರೈಸುವ ಮೂಲಕ ಸ್ಥಳಿಯಾಡಳಿತ ಜನರ ತೊಂದರೆಗೆ ಸ್ಫಂಧಿಸಿದೆ.

ಈ ಪರಿಹಾರ ಕ್ರಮಗಳ ನಡುವೆ ಬಹುತೇಕ ಕಡೆ ದಿನಬಳಕೆಯ ಮೊಟ್ಟೆ, ಮಾಂಸ, ಮೀನಿಗಾಗಿ ಹಾಹಾಕಾರವೆದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೇರಿದಂತೆ ಕೆಲವೆಡೆ ಮೀನು-ಮಾಂಸಗಳಿಗೆ ತೊಂದರೆಯಾಗುತ್ತಿಲ್ಲ ಎನ್ನುವ ವರದಿಗಳನ್ನು ಹೊರತು ಪಡಿಸಿದರೆ ಬಹುತೇಕ ಕಡೆ ಮಾಂಸಾಹಾರಿಗಳು, ಮದ್ಯಪ್ರೀಯರಿಗೆ ಅನಿವಾರ್ಯ ಸನ್ಯಾಸದ ಅನುಭವವಾಗುತ್ತಿದೆ. ಈ ಪರಿಸ್ಥಿತಿಯ ಲಾಭ ವೆಂದರೆ ನಾಟಿ ಅಥವಾ ಹಳ್ಳಿಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ನಾಟಿಕೋಳಿ ಸಾಕುವವರಿಗೆ ಈ ಶತಮಾನದಲ್ಲಿ ಮೊದಲ ಬಾರಿಗೆ ಮಹತ್ವ, ಪ್ರಾಮುಖ್ಯತೆ ಬಂದಿದ್ದು ನಾಟಿಕೋಳಿ ಸಾಕಾಣಿಕೆದಾರರು ಕಳೆದ ತಿಂಗಳ ದರದ ಮೂರುಪಟ್ಟು ಬೆಲೆಗೆ ಕೋಳಿಗಳನ್ನು ಮಾರಾಟ ಮಾಡುತಿದ್ದಾರೆ.

ಸಿದ್ಧಾಪುರದಲ್ಲಿ ಮೀನು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಿಸಿರುವ ಸ್ಥಳಿಯ ಆಡಳಿತ ಮಾಂಸಾಹಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಸಮಾಜಮುಖಿಗೆ ಪ್ರತಿಕ್ರೀಯಿಸಿದ ತಹಸಿಲ್ದಾರ ಮಂಜುಳಾ ಭಜಂತ್ರಿ ಜಿಲ್ಲಾಡಳಿತವನ್ನು ಕೇಳಿ ಈ ಬೇಡಿಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೆಲವು ಮೀನು, ಮಾಂಸದ ವ್ಯಾಪಾರಿಗಳು ಸಾಗಾಟದ ತೊಂದರೆಯಿಂದ ಮೀನು-ಮಾಂಸ ತರುವುದೇ ಕಷ್ಟವಾಗಿದೆ ಎಂದಿದ್ದಾರೆ ಎಂದರು.

ಸಿದ್ಧಾಪುರ ಸೇರಿದಂತೆ ರಾಜ್ಯ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಪ್ರತಿಶತ 75 ಆದರೆ ಅಲ್ಫಸಂಖ್ಯೆಯ ಸಸ್ಯಾಹಾರಿಗಳಿಗೆ ಅಗತ್ಯಗಳನ್ನು ಪೂರೈಸುತ್ತಿರುವ ದೇಶದ ಆಡಳಿತ ಯಂತ್ರ ಆಹಾರ, ಆಚಾರ, ವಿಚಾರ ಸೇರಿದಂತೆ ಎಲ್ಲದರಲ್ಲೂ ಬಹುಸಂಖ್ಯಾತ 70% ಜನರಿಗೆ ವಿರುದ್ಧವಾಗಿ ವರ್ತಿಸುತ್ತಿರುವುದು ಈ ಶತಮಾನದ ಅವ್ಯವಸ್ಥೆ, ವೈದಿಕ ವೈಭೋಗಕ್ಕೆ ಸಾಕ್ಷಿ ಎನ್ನುವಂತಿದೆ.

(ಸಿದ್ದಾಪುರ,ಏ,06)
ಎಲ್ಲೆಲ್ಲಿ ಹಾಲಿನಿಂದ ಬಡಕೂಲಿ ಕಾರ್ಮಿಕರು ವಂಚಿತರಾಗಿದ್ದಾರೊ ಅವರನ್ನು ಗುರುತಿಸಿ ಕೆಎಂಎಫ್ ಹಾಲನ್ನು ಉಚಿತವಾಗಿ ವಿತರಿಸುತ್ತಿದ್ದು ಸಿದ್ದಾಪುರದಲ್ಲಿ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಪಟ್ಟಣದ ಬಡಕೂಲಿಕಕಾರ್ಮಿಕರ ಕುಟುಂಬಕ್ಕೆ ಭಾನುವಾರ ಹಾಲು ವಿತರಿಸಿದರು.
ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಮಾರ್ಗದ ವಿಸ್ತರಣಾಧಿಕಾರಿ ಪ್ರಕಾಶ ಇದ್ದರು.

ಪ್ರಭುತ್ವ, ಜನಪ್ರತಿನಿಧಿಗಳ ಕಪಟನಾಟಕ, ರೈತರಿಗೆ ಸಂಕಷ್ಟ
ಕರೋನಾ ಲಾಕ್‍ಔಟ್ ನಿಂದ ಮಲೆನಾಡಿನ ರೈತರು ಹಾನಿ ಅನುಭವಿಸುವಂತಾಗಿದ್ದು,ಅವರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ತೊಂದರೆಗೆ ಒಳಗಾಗಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದ ರೈತರು ತೊಂದರೆಗೆ ಒಳಗಾಗಿದ್ದಾರೆ. ಬನವಾಸಿ, ಸಾಗರ, ಸೊರಬ ಪ್ರದೇಶಗಳಲ್ಲಿ ಅನಾನಸ್, ಪಪ್ಪಾಯಿ ಬೆಳೆ ಹಣ್ಣಾಗಿ ಹಾಳಾಗುತ್ತಿದೆ. ಸಿದ್ದಾಪುರ ಮತ್ತು ಗೋಕರ್ಣ ಭಾಗಗಳಲ್ಲಿ ತರಕಾರಿ ಬೆಳೆದ ರೈತರು ಹಾನಿಯಿಂದ ಕಂಗಾಲಾಗುವಂತಾಗಿದೆ. cont..reading visit-samajamukhi.net

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *