

ಪತ್ರಕರ್ತರಿಗೆ ಕೋವಿಡ್-
ಶನಿವಾರ ದೃಢಪಟ್ಟ ವಾಹಿನಿಯೊಂದರ ಕ್ಯಾಮರಾಮನ್‍ನ ಕರೋನಾ ಸೋಂಕು ಪ್ರಕರಣದ ನಂತರ ಅವರ ಸಂಪರ್ಕಕ್ಕೆ ಬಂದ 40 ಕ್ಕೂ ಹೆಚ್ಚು ಜನರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಿರುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ.
ಒಬ್ಬಕ್ಯಾಮರಾಮನ್ ಜೊತೆಗೆ ಕೆಲವು ಪತ್ರಕರ್ತರು ಸೇರಿ ಸುಮಾರು 40 ಜನರ ಕ್ವಾರಂಟೈನ್ ವಿಚಾರ ಮಾಧ್ಯಮಗಳಲ್ಲೂ ಸುದ್ದಿಯಾಗದಿರುವುದು ಆಶ್ಚರ್ಯವನ್ನುಂಟುಮಾಡಿದೆ. ಟಿ.ಆರ್.ಪಿ., ಹಣ,ಕೀರ್ತಿಗಾಗಿ ಸುದ್ದಿಮಾಡಿ ಗೆದ್ದ ಪತ್ರಕರ್ತರು ಕೋವಿಡ್ ವಿಚಾರದಲ್ಲಿ ಸೋತಂತಾಗಿದೆ.ಈ ವಿಚಾರ ಸುದ್ದಿಮಾಡುವ ವಿಷಯದಲ್ಲಿ ಕೂಡಾ ಸೋತಿರುವ ಪತ್ರಕರ್ತರು ಮಾಧ್ಯಮ ಸಂಹಿತೆ ಉಲ್ಲಂಘಿಸಿದಂತಾಗಿದೆ.
ಶಿರಸಿಯಲ್ಲಿ ಕಾಳಜಿಯಿಂದ ಗಮನ ಸೆಳೆದ ವೈದ್ಯೆ- ಕರೋನಾ ವಿಚಾರದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದವರಲ್ಲಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದ್ದಾರೆ. ಅವರಿಗೆ ಸರ್ಕಾರ ಅಗತ್ಯ ವಸ್ತುಗಳನ್ನು ಪೂರೈಸಿಲ್ಲ ಎನ್ನುವ ಆರೋಪದ ನಡುವೆ ಶಿರಸಿಯ ಆಯುಷ್ ವೈದ್ಯೆ ಡಾ.ಪೂರ್ಣಿಮಾ ತಮ್ಮ ಹಣದಲ್ಲಿ ತಾಲೂಕಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಛತ್ರಿ ಮತ್ತು ದಿನಬಳಕೆ ವಸ್ತುಗಳನ್ನು ಕೊಡುವ ಮೂಲಕ ಪ್ರಶಂಸನೀಯ ಕೆಲಸಮಾಡಿದ್ದಾರೆ. ರಜಾ ದಿವಸಗಳಲ್ಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಕಾರ್ಯಕರ್ತೆಯರಲ್ಲೂ ಉತ್ಸಾಹ ತುಂಬಿ ಸಾರ್ವಜನಿಕ ಸೇವೆಗೆ ತಮ್ಮ ತನು-ಮನ-ಧನಗಳಿಂದ ಸಮರ್ಪಿಸಿಕೊಂಡಿರುವ ಡಾ.ಪೂರ್ಣಿಮಾ ಬಗ್ಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
ಹೊರಗಿನಿಂದ ಬಂದವರಿಗೆ ಕ್ವಾರಂಟೈನ್- ದೇಶ,ರಾಜ್ಯದ ಲಾಕ್ ಡೌನ್, ಉತ್ತರಕನ್ನಡ ಜಿಲ್ಲೆಯ ಬಿಗು ನಿಯಮಗಳ ಮಧ್ಯೆ ಹೊರ ಊರುಗಳಿಂದ
ವೈದ್ಯರ ವಿಶೇಶ ಕಾಳಜಿ- ಹೊರ ಊರುಗಳಿಂದ ಜಿಲ್ಲೆಗೆ ಬರುವವರ ಪ್ರಮಾಣದ ಬಗ್ಗೆ ಸ್ಥಳಿಯರು ಆತಂಕಪಡುವಂತಾಗಿದೆ.ಜಿಲ್ಲೆಯಿಂದ ಅಧೀಕೃತವಾಗಿ ಹೊರ ಊರುಗಳಿಗೆ ಪ್ರಯಾಣ ಬೆಳೆಸಿದ ಕಾರ್ಮಿಕರ ನಡುವೆ ಅನಧೀಕೃತವಾಗಿ ಜಿಲ್ಲೆ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚಿದ್ದು ಜಿಲ್ಲಾಡಳಿತಕ್ಕೂ ತಲೆನೋವಾಗಿದೆ.
ಸಮಾಜಮುಖಿಗೆ ದೊರೆತ ಖಚಿತ ಮಾಹಿತಿಗಳ ಪ್ರಕಾರ ಕಳೆದ ವಾರದ ಕೊನೆಗೆ ಕರೋನಾ ಪೀಡಿತ ಮುಂಬೈ, ಪೂನಾಗಳಿಂದ ಉತ್ತರಕನ್ನಡ ಜಿಲ್ಲೆಗೆ ನೂರಾರು ಜನರು ಬಂದಿದ್ದು ಅವರಲ್ಲಿ ಬಹುತೇಕರು ಕಾರಂಟೈನ್ ಆಗಿದ್ದಾರೆ.ಇಂಥ ಪೂನಾ ರಿಟರ್ನ್ 40 ಜನರುಸಿದ್ಧಾಪುರದಲ್ಲೇ ಕಾರಂಟೈನ್ ಆಗಿರುವುದು ವಿಶೇಶ. ಈ ರೀತಿ ಹೊರ ಊರುಗಳಿಂದ ಬಂದ ಜನರ ಮಾಹಿತಿಯನ್ನು ಸಂಬಂಧಿಸಿದವರಿಗೆ ತಿಳಿಸಿ ಸಾರ್ವಜನಿಕರ ಹಿತ ಕಾಪಾಡುವಂತೆ ಜಿಲ್ಲಾಡಳಿತ ಕೂಡಾ ಮನವಿ ಮಾಡಿದೆ.
ಆರ್.ಎಸ್.ಎಸ್. ಏನು ಮಾಡುತ್ತಿದೆ?
ಶುಕ್ರವಾರ ನಮ್ಮ ಧ್ವನಿ ಸಂಸ್ಥಾಪಕ, ಪ್ರಗತಿಪರ ಚಿಂತಕ ಮಹೇಂದ್ರಕುಮಾರ್ ನಮ್ಮನ್ನಗಲಿದರು.
ಅವರ ಸಾವಿನ ಸುದ್ದಿ ತಿಳಿದದ್ದೇ ಏನೋ ಕಳವಳ ಶುರುವಾಯಿತು. ಸ್ನೇಹಿತರಾದ ಲೋಹಿತ್, ಮಹೇಶ್ ಸೇರಿದ ಅನೇಕರು ಸಂದೇಶ ಕಳುಹಿಸಿದ್ದರು. ವಾರ್ತೆ ತಿಳಿದ ನನ್ನ ಮನಸ್ಸು ದೇಹ ಕೆಲಕಾಲ ಸ್ತಂಬ್ಧವಾದಂತಾಯಿತು. ಮಹೇಂದ್ರಕುಮಾರ ನಮಗೆ ವಿಚಾರ,ಕೃತಿಗಳಿಂದ ಇಷ್ಟವಾದ ನಾಯಕ. ಹಿಂದೆ ಅವರು ವಾಶಿಷ್ಠ ವಂಶದ ಕೆಲವು ಪರಿವಾರದ ಸಂಘಟನೆಯಲ್ಲಿದ್ದು ಅಲ್ಲಿಯ ಅವತಾರಗಳನ್ನು ನೋಡಿದವರು.
ಉಳ್ಳವರು,ಶೂದ್ರ ವಿರೋಧಿ ಮತಾಂಧರ ಪರ ಧ್ವನಿ ಮಾಡುವ ಇವರ ಜೊತೆಗಿದ್ದ ಕಟೀಲು ಸಂಸದರಾದರು,ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದರು. ಈ ಮಹೇಂದ್ರರಂತೆಯೇ ಹೃದಯದ ಭಾಷೆಯಲ್ಲಿ ಮಾತನಾಡುವ ಸತ್ಯಜಿತ್ ಸುರತ್ಕಲ್‍ರ ಕೆಲಸದ ಲಾಭ ಪಡೆದು ಶಿರಸಿಯ ಅನಂತಕುಮಾರ ಹೆಗಡೆ ಸಂಸದರಾದರು,ಸಚಿವರಾದರು.
ಆದರೆ ಸುರತ್ಕಲ್,ಮಹೇಂದ್ರಕುಮಾರ್ ಈ ರೀತಿ ಅಧಿಕಾರದ ಏಣಿ ಏರಲಿಲ್ಲ. ಸುರತ್ಕಲ್ ವಿಚಾರವಿರಲಿ, ಮಹೇಂದ್ರಕುಮಾರ್ ವಿಚಾರವಿರಲಿ ಅಥವಾ ಇತರ ವೈದಿಕೇತರ ನಾಯಕರು ಪರಿವಾರದ ಪರಿಚಾರಿಕೆಯಲ್ಲಿ ಕಳೆದುಹೋಗುತ್ತಾರೆ ಅಥವಾ ಹೊರಗೆ ನಾಶವಾಗುತ್ತಾರೆ. ಯಾಕೆ ಹೀಗೆ ಎಂದು ಗೃಹಿಸಿದರೆ.
ಸುರತ್ಕಲ್, ಮಹೇಂದ್ರಕುಮಾರ ತರಹದವರಿಗೆ ಪರಿವಾರದ ಪ್ರಮುಖರ ನೆರವಿರುವುದಿಲ್ಲ. ಯಾಕೆಂದರೆ ಪರಿವಾರ ಹೇಳಿದ್ದನ್ನು ಉಪಾಯದಿಂದಲೋ, ಹುಂಬತನದಿಂದಲೋ ಶಿರಸಾವಹಿಸಿ ಪಾಲಿಸಲು ಹ್ರದಯಭಾಷೆಯ ಮಹೇಂದ್ರಕುಮಾರ ಥರಹದವರಿಗೆ ಸಾಧ್ಯವಾಗುವುದಿಲ್ಲ. ಸುರತ್ಕಲ್, ಮಹೇಂದ್ರ ಥರಹದವರು ಪರಿವಾರದ ಭಾಷೆಯನ್ನು ಹೃದಯದಿಂದ ಪರೀಕ್ಷಿಸುತ್ತಾರೆ. ಆಗ ಅವರಿಗೆ ಅದು ಸರಿ ಕಾಣುವುದಿಲ್ಲ.
ಇಂಥ ಪರಿವಾರದ ತೆಕ್ಕೆಗೆ ಸಿಕ್ಕ ನಂತರ ಅವರಿಂದ ಬಿಡಿಸಿಕೊಂಡ ಅಸಂಖ್ಯ ಜನರು ಈ ರಾಜ್ಯ ಜಿಲ್ಲೆಯಲ್ಲಿದ್ದಾರೆ. ಅವರಲ್ಲಿ ಕೆಲವರು ತಮ್ಮ ಶಕ್ತಿ-ಯುಕ್ತಿಯಿಂದ ಬೆಳೆಯುವುದಿದೆ. ಆದರೆ ಬಹಳಷ್ಟು ಜನ ಆ ಮತಾಂಧತೆಯ ಕುರೂಪಕ್ಕೆ ಬಿದ್ದವರು ಎದ್ದು ಬಂದಿದ್ದೇ ಇಲ್ಲ. ಆಗ ಅವರ ಧ್ವನಿ ಕ್ಷೀಣವಾಗುತ್ತದೆ. ಇಂಥ ಪರಿವಾರದ ಕೂಪದಿಂದ ಹೊರಬಂದು ಸೋಲು-ನೋವು-ಸಾವು ಕಂಡವರು ಅನೇಕ. ಗೆದ್ದವರು, ಗೆಲ್ಲುವ ದಾರಿಯಲ್ಲಿ ಕಳೆದುಹೋದವರು ಕೆಲವರು. ಅಂಥವರಲ್ಲಿ ಕ್ರಮವಾಗಿ ಮಹೇಂದ್ರಕುಮಾರ,ಸೇರಿದ ಅನೇಕರನ್ನು ಹೆಸರಿಸಬಹುದು.





