
ರಾಜ್ಯದಲ್ಲಿ ಇದೇ ತಿಂಗಳು ನಡೆಯುತ್ತಿರುವ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಪೂರ್ವತಯಾರಿ ಸಿದ್ಧತೆಗಳು ಸಂಪೂರ್ಣವಾಗಿದ್ದು ವಿದ್ಯಾರ್ಥಿಗಳ ಸುರಕ್ಷತೆ,ಸುವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ.ಹೊರ ಜಿಲ್ಲೆಗಳಲ್ಲಿ ವ್ಯಾಸಂಗಮಾಡುತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಅವರವರ ತಾಲೂಕು ಕೇಂದ್ರ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ, ಅನಿವಾರ್ಯತೆಗಳಿರುವಲ್ಲಿ ಸಾರಿಗೆ, ತುರ್ತು ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಗಳ ಏರ್ಪಾಡು ಮಾಡಿರುವ ಶಿಕ್ಷಣ ಇಲಾಖೆ ಈ ತಿಂಗಳಲ್ಲಿ ಮುಖ್ಯ ಪರೀಕ್ಷೆ ನಡೆಸಿ, ಮುಂದಿನ ತಿಂಗಳಲ್ಲಿ ಮತ್ತೆ ಪೂರಕ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು ಅನಿವಾರ್ಯ ಕಾರಣಗಳಿಂದ ಈಗ ಪರೀಕ್ಷೆ ಬರೆಯಲಾರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೂರಕ ಪರೀಕ್ಷೆ ಬರೆದರೂ ಅವರನ್ನು 2019-2020 ರ ಪ್ರೆಶ್ ವಿದ್ಯಾರ್ಥಿಗಳೆಂದು ಪರಿಗಣಿಸುವುದಾಗಿ ಸರ್ಕಾರ ತಿಳಿಸಿದೆ.
ಈ ಬಗ್ಗೆ ಇಂದು ಸಿದ್ಧಾಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸ್ಥಳಿಯ ತಹಸಿಲ್ಧಾರರು ವಿವರ ನೀಡಿದರು.
ಇಲಿಯಾಸ್ ಮನವಿ-
ಸಕಲ ಸಿದ್ಧತೆಗಳ ನಡುವೆ ಎಸ್.ಎಸ್. ಎಲ್.ಸಿ. ಪರೀಕ್ಷೆ ನಡೆಯುತ್ತಿದ್ದರೂ ಅವಗಢವಾದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಜಾತ್ಯಾತೀತ ಜನತಾದಳದ ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಮಕ್ಕಳ ಜೀವ, ಬದುಕು, ಆರೋಗ್ಯಕ್ಕಿಂತ ಶಿಕ್ಷಣ, ಪರೀಕ್ಷೆಗಳು ಮುಖ್ಯವಲ್ಲ ಅಪ್ರಾಪ್ತ ವಯಸ್ಕರ ಭವಿಷ್ಯ, ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಯನ್ನೇ ಮುಂದೂಡುವುದು ಸೂಕ್ತ ಎಂದು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
see today,s spl news in #samajamukhi.net#
ಬಡ್ಡಿ ಮಾಫಿಯಾಕ್ಕೆ ರಾಜಕೀಯ ಶ್ರೀರಕ್ಷೆ? ಜನಸಾಮಾನ್ಯರಿಗೆ ಚಿತ್ರಹಿಂಸೆ!
ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಡ್ಡಿ ಮಾಫಿಯಾ
ತಾಂಡವಾಡುತಿದ್ದು ಕರೋನಾ ಹಿನ್ನೆಲೆಯಲ್ಲಿ ಬಹುಹಿಂದೇ ಬಡ್ಡಿಗೆ ಸಾಲಕೊಟ್ಟ ಬಡ್ಡಿ ವಸೂಲಿದಾರರು ಜನಸಾಮಾನ್ಯರ ತಲೆಮೇಲೆ ಕುಳಿತು ಚಿತ್ರಹಿಂಸೆ ಕೊಡುತ್ತಿರುವ ವಿದ್ಯಮಾನ ಬಹಿರಂಗವಾಗಿದೆ.
ರಾಜ್ಯದಾದ್ಯಂತ ಮೀಟರ್ ಬಡ್ಡಿ, ದಿನದ ಬಡ್ಡಿ ಲೆಕ್ಕದಲ್ಲಿ ನಡೆಯುತ್ತಿರುವ ಬಡ್ಡಿಮಾಫಿಯಾ ಕೆಲವೆಡೆ ರಾಜಕೀಯ ಬೆಂಬಲದಿಂದ ಜನಸಾಮಾನ್ಯರಿಗೆ ಕಂಟಕವಾಗಿ ಕಾಡುತ್ತಿದೆ. ಈ ಬಡ್ಡಿವ್ಯವಹಾರ ಕರೋನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಮತ್ತೆ ಚಿಗುರಿದೆ. ಇಂಥ ಬಡ್ಡಿವ್ಯಹಾರ ಮಾಡಿ ಜನಸಾಮಾನ್ಯರನ್ನು ಹಿಂಡುವ ಬಡ್ಡಿವ್ಯವಹಾರಸ್ಥರಲ್ಲಿ ಅನೇಕರು ಸ್ವಯಂ ರಾಜಕಾರಣಿಗಳು, ರಾಜಕೀಯ ವ್ಯಕ್ತಿಗಳ ಸ್ನೇಹ-ಸಂಬಂಧ ಹೊಂದಿರುವವರು ಆಗಿರುವುದರಿಂದ ಅವರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತಿದೆ ಎನ್ನಲಾಗುತ್ತಿದೆ………… visit-#samajamukhi.net#


