ನಗುವನ್ನು ಹರಾಜಿಗಿಡಲಾಗಿದೆ…..ಮಧುರ ಕಾವ್ಯ

ಕವನ ಸುಂದರಿ: ನಾಗರೇಖಾ ಗಾಂವಕರ: ನಗುವನ್ನು ಹರಾಜಿಗಿಡಲಾಗಿದೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ, ಕವನ ಸುಂದರಿ 


ನಗುವನ್ನು ಹರಾಜಿಗಿಡಲಾಗಿದೆ

ಈ ನಗರದಲ್ಲಿ ನಗುವನ್ನೂ ಹರಾಜಿಗೆ ಇಡುತ್ತಾರೆ
ಅದು ಸೂಸುವ ಕಂಪಿಗೂ
ಬಲೆ ನಿಗದಿ ಇದೆ.
 

ನಸುಗೆಂಪು ಕೆನ್ನೆಗಳ ಕಿರು ಮಂದಹಾಸ
ಕಾವಿಗೆ ಒಡೆಯುತ್ತವೆ ಮೊಟ್ಟೆಗಳು
ಸ್ಮೈಲ್ ಬಿಗ್ ಆಫರ್‌ಗಳಲ್ಲಿ
ಸೆಲ್ ಮೋರ್ ಎನ್ನುತ್ತವೆ..
 

ನಗುವಿನ ನಸೀಬು
ನಕ್ಕವಳ ನಸೀಬು ಎರಡೂ ಬದಲಾಗುವುದು
ಯಾರದೋ ಬೆರಳಿಗೆ ಮೀಟಿದ ತಂತಿ
ಚಡಪಡಿಸಿದಾಗ.
ಆ ನಗುವಲ್ಲಿ ಗಾಳಿ
ಮಳೆ, ಕೆಲವೊಮ್ಮೆ ಬೆಂಕಿಗಳು
ಅರಳಲೂಬಹುದು
ಇಲ್ಲ… ಬೆಳಕು
ಬೆಳದಿಂಗಳು ನಾಟ್ಯವಾಡಬಹುದು.
 

ಗೋಡೆಯಲ್ಲಿ ತೂಗುಬಿದ್ದ
ದರ್ಪಣ ಸುಂದರಿಯ ತುಟಿಯಂಚಲ್ಲಿ
ಟ್ರೈಫೋಲ್ಡ್ ಕನ್ನಡಿಗಳಲ್ಲಿ
ಪ್ರತಿಫಲಿಸಲೂಬಹುದು
 

ಯಾರೂ ಬೇಕಾದರೂ
ಕೊಂಡುಕೊಳ್ಳಬಹುದಂತೆ..
 

ಸಣ್ಣಗೆ ಉರಿಯುವ ಪೆಟ್ರೊಮ್ಯಾಕ್ಸ್
ಪಕ್ಕದಲ್ಲಿ ನಿಂತ ಸ್ಮಿತವದನೆ
ಮೊಗದ ದುಮ್ಮಾನ
ಸೆಲ್ ಮೋರ್ ಬರಹಗಳ ಹೊತ್ತ
ಗ್ಲೋಸಿ ಫ್ಲಾಯರ್‌ಗಳಲ್ಲಿ ಹುದುಗಿದಂತೆ.
 

ಬಾರ್ಗೆನು ಮಾಡುವುದು ಮರ್ಯಾದೆಯ
ಪ್ರಶ್ನೆ ಇಲ್ಲಿ !!
ನಾಜೂಕು ಹವಳದ ತುಟಿಗಳಲ್ಲಿ
ನಗು ತುಂಬಿಕೊಂಡ
ಯವನಿಕೆಯರು ನಿಮ್ಮನ್ನೆ ನೋಡುತ್ತಾರೆ..
 

ನೀವಿಲ್ಲಿ ನಗುವಿನ
ಹರಾಜಿನಲ್ಲಿ ಏನೂ ಬೇಕಾದರೂ ಕೊಳ್ಳಬಹುದು.
ಕಿಸೆಯಲ್ಲಿ ಹಣವಿರುವ ತನಕ
ಹರಾಜು ಮುಗಿದ ಮೇಲೆ ಈ
ನಗುವನ್ನು ದರ್ಪಣದಲ್ಲಿ ಬಂಧಿಸಿಡಲಾಗುತ್ತದೆ  (kpc)
 



ಕವಯಿತ್ರಿ, ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ ಸ್ನಾತಕೋತ್ತರ ಪದವೀಧರೆಯಾದ ಇವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಬರ್ಫದ ಬೆಂಕಿ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಲಭಿಸಿದೆ. ಆಕಾಶವಾಣಿ ಧಾರವಾಡ, ಕಾರವಾರಗಳಲ್ಲಿ ಚಿಂತನ ಕಾರ್ಯಕ್ರಮಗಳಲ್ಲಿ ಕತಾವಾಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಅವರದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *