

ಉತ್ತರಕನ್ನಡ ಜಿಲ್ಲೆ, ಶಿವಮೊಗ್ಗಗಳಲ್ಲಿ ಕರೋನಾ ವಿಸ್ಫೋಟವಾದಂತಾಗಿದೆ.
ಮಲೆನಾಡಿನ 200 ಕಿ.ಮೀ. ವ್ಯಾಪ್ತಿಯಲ್ಲಿ ಇಂದುಅರ್ಥ ಶತಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳ ಹಿಂದೆ ಬೆಂಗಳೂರಿನಿಂದ ಮರಳಿಬಂದವರ ಪಾಲಿದ್ದರೆ, ಶಿರಸಿ ಆಸ್ಫತ್ರೆಯ ಆಯಾ ಮತ್ತು ಲ್ಯಾಬ್ ಟೆಕ್ನಿಶಿಯನ್ ಗಳಲ್ಲಿ ಪತ್ತೆಯಾಗಿರುವ ಕರೋನಾ ಹೇಳುವ ಕತೆಯೆ ಬೇರೆ!
ಧಾರವಾಡದ ಕಳ್ಳನನ್ನು ಪರೀಕ್ಷಿಸಿದ ವೈದ್ಯರು, ದಾದಿಯರಿಗೆ ಬರದ ಕೋವಿಡ್ ಸೋಂಕು ದೂರದಿಂದ ನೋಡಿದ ಆಯಾ, ಲ್ಯಾಬ್ ಟೆಕ್ನಿಶಿಯನ್ ಗಳಿಗೆ ಬಂದಿದೆ. ಆಯಾ ಯಾರ ಸಂಪರ್ಕಕ್ಕೂ ಬಂದಿರಲಿಲ್ಲ ಎನ್ನುವುದನ್ನೇ ನಂಬುವುದಾದರೆ ಶಿರಸಿಯಲ್ಲಿ ಕರೋನಾ ಸಾಮೂದಾಯಿಕವಾಗಿದೆ ಎಂದು ನಂಬಬೇಕಾಗುತ್ತದೆ.
ಹಾಗೆಯೇ ಶಿರಸಿ ಸರ್ಕಾರಿ ಆಸ್ಫತ್ರೆಯ ಲ್ಯಾಬ್ ಟೆಕ್ನಿಶಿಯನ್ ಮಂಗಳೂರಿನಿಂದ ಶಿರಸಿ, ಶಿರಸಿಯಲ್ಲಿ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಫತ್ರೆಯಲ್ಲಿ ಕೂಡಾ ಕೆಲಸ ಮಾಡುತಿದ್ದ. ಇವರೊಂದಿಗೆ ಜೈಲ್ ಸಿಬ್ಬಂದಿಗಳಿಗೂ ಕರೋನಾ ದೃಢ ಆಗಿರುವುದರಿಂದ ಈ ಕರೋನಾ ಸೋಂಕು ವಿಸ್ತರಣೆ ಹಿಂದೆ ಕಳ್ಳನ ಕೈವಾಡವನ್ನು ಶಂಕಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳ, ಹಳಿಯಾಳಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು ಕರೋನಾ ದೃಢಪಟ್ಟ 36
ಜನರಲ್ಲಿ ಭಟ್ಕಳದವರ ಸಂಖ್ಯೆ ಹೆಚ್ಚಿರುವುದು ನಿರೀಕ್ಷಿತ.
ಭಟ್ಕಳ,ಹಳಿಯಾಳ, ಶಿರಸಿಗಳ ಕರೋನಾ ಸೋಂಕಿತರ ಪ್ರವಾಸ ಚರಿತ್ರೆ ನೋಡಿದರೆ ಜಿಲ್ಲೆಯಲ್ಲಿ ಕರೋನಾ ಸಾಮೂದಾಯಿವಾಗಿದೆ ಎನಿಸುತ್ತಿಲ್ಲ. ಆದರೆ ಶಿರಸಿಯ ಪ್ರಕರಣಗಳು, ಸ್ಥಳಿಯರ ಅಭಿಪ್ರಾಯ ಕೇಳಿದರೆ ಶಿರಸಿಯಲ್ಲಿ ಕರೋನಾ ಸಾಮೂದಾಯಿಕವಾಗಿದೆಯಾ ಎನ್ನುವ ಅನುಮಾನಕ್ಕೆ ಆಸ್ಫದವಾಗುವಂತಿದೆ.
(relaed) ಶಿರಸಿಯನ್ನು ನಡುಗಿಸಿದ ಆ ಎರಡು ಪ್ರಕರಣಗಳ್ಯಾವು ಗೊತ್ತಾ?
ಕರೋನಾ ನಾಗಾಲೋಟ ಮುಂದುವರಿದಿದೆ. ಉತ್ತರಕನ್ನಡ,ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಈ ವಾಸ್ತವದ ಜೊತೆ ಶಿರಸಿಯನ್ನು ಆತಂಕಕ್ಕೀಡುಮಾಡಿದ್ದು ಆ ಎರಡು ಪ್ರಕರಣಗಳು. ಮೊದಲ ಪ್ರಕರಣ ಶಿರಸಿಯ ಸುಗಾವಿ ಪ್ರಾ.ಆ. ಕೇಂದ್ರದ ಸಿಬ್ಬಂದಿಯೊಬ್ಬರಲ್ಲಿ ಕರೋನಾ ಪತ್ತೆಯಾಗಿರುವುದು ಮತ್ತು ವಿಶಾಲನಗರದ ಬೆಂಗಳೂರಿನಿಂದ ಮರಳಿದ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿರುವುದು.
ವಿಶಾಲನಗರದ ವ್ಯಕ್ತಿ ಚಿಕಿತ್ಸೆಗಾಗಿ ತೆರಳಿದ್ದ ಎರಡು ಖಾಸಗಿ ಆಸ್ಫತ್ರೆಗಳು ಮತ್ತು ವಿಶಾಲನಗರದ ನಾಲ್ಕು ಮನೆಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಶಿಸಲಾಗಿದೆ. ಶಿರಸಿಯ ಗ್ರಾಮೀಣ ಪ್ರದೇಶ ಸುಗಾವಿ ಸರ್ಕಾರಿ ಆಸ್ಫತ್ರೆಯ ಸಿಬ್ಬಂದಿಯಲ್ಲಿ ಕರೋನಾ ದೃಢಪಟ್ಟಿರುವುದರಿಂದ ಆ ಪ್ರಾ.ಆ.ಕೇಂದ್ರವನ್ನು ಶೀಲ್ ಡೌನ್ ಮಾಡಲಾಗಿದೆ.
(related) ಕರೋನಾದಿಂದ ತತ್ತರಿಸಲಿದೆ ಮಲೆನಾಡು?
ಬೆಂಗಳೂರಿನಿಂದ ಬಂದವರ ಬಗ್ಗೆಯೂ ಜಾಗೃತೆ ವಹಿಸಿ
ಕರೋನಾ ವಾರದಿಂದ ವಾರಕ್ಕೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಈ ವರೆಗೆ 6.5 ಲಕ್ಷ ಕರೋನಾ ಪೀಡಿತರನ್ನು ಹೊಂದಿರುವ ಭಾರತಕ್ಕೆ ಕರೋನಾ ಸೋಂಕಿತರ ಸಂಖ್ಯೆಯ ಏರಿಕೆ ಕ್ರಮ ಭಾರವಾಗುವ ಅಪಾಯ ಸಮೀಪಿಸುವಂತಿದೆ. ಜುಲೈ 4 ರ ಶನಿವಾರವಾದ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 34 ಜನರಲ್ಲಿ, ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 25 ಜನರಲ್ಲಿ ಕರೋನಾ ಸೋಂಕು ದೃಢವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಮಾಹಿತಿಯ ಆಧಾರದಲ್ಲಿ ಮಳೆಯಿಂದ ತತ್ತರಿಸಲಿರುವ ಮಲೆನಾಡು, ಕರಾವಳಿಯನ್ನು ಕರೋನಾ ಕಾಡುವುದು ನಿಶ್ಚಿತವಾಗಿದೆ.
