ಅಣಲೇಬೈಲ್ ಗ್ರಾ.ಪಂ. ಸದಸ್ಯರ ಗೌರವಧನ ಪ್ರವಾಹ ಸಂತೃಸ್ತರ ನಿಧಿಗೆ

ಅಣಲೇಬೈಲ್ ಗ್ರಾ.ಪಂ. ಸದಸ್ಯರ ಗೌರವಧನ
ಪ್ರವಾಹ ಸಂತೃಸ್ತರ ನಿಧಿಗೆ
ಸಿದ್ಧಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು ತಮ್ಮ ಆಗಸ್ಟ್ ತಿಂಗಳ ಗೌರವಧನವನ್ನು ಮುಖ್ಯಮಂತ್ರಿಗಳ ಪ್ರವಾಹಸಂತೃಸ್ತರ ನಿಧಿಗೆ ನೀಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿದ ಸರ್ವಸದಸ್ಯರು ತಮ್ಮ ಒಂದು ತಿಂಗಳ ಗೌರವ ಧನವನ್ನು ಪ್ರವಾಹ ಸಂತೃಸ್ತರ ನಿಧಿಗೆ ದೇಣಿಗೆ ನೀಡುವ ನಿರ್ಣಯ ಕೈಗೊಂಡರು.

ಮಳೆನಿಂತುಹೋದಮೇಲೆ!-ಭಾಗ-02
ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!
ಸಿದ್ಧಾಪುರ ತಾಲೂಕಿನ ಕಾನಳ್ಳಿ ಬಹಳ ಕಾರಣಕ್ಕೆ ವಿಶಿಷ್ಟ. ಬೇಡ್ಕಣಿ ಗ್ರಾಮ ಪಂಚಾಯತ್ ಕಡಕೇರಿಯ ಕಾನಳ್ಳಿ ಇಲ್ಲಿಯ ಪ್ರಖ್ಯಾತ ಚೌಡೇಶ್ವರಿ ದೇವಾಲಯದಿಂದ ಪ್ರಸಿದ್ಧವಾದರೆ, ಇಲ್ಲಿರುವ ಪರಿಶಿಷ್ಟ ಜಾತಿಯ ಹಸ್ಲರರು ಶ್ರಮಜೀವಿಗಳೆಂದೇ ಖ್ಯಾತಿ.
ಸುಮಾರು 30 ಮನೆಗಳ ಈ ಪುಟ್ಟ ಹಳ್ಳಿಯಲ್ಲಿ ಸಾರ್ವಜನಿಕ ಕೆರೆ,ಕಿರಿಯ ಪ್ರಾಥಮಿಕಶಾಲೆ, ಸುವ್ಯವಸ್ಥಿತ ಸಂಪರ್ಕ ರಸ್ತೆಗಳೆಲ್ಲಾ ಇವೆ. ಇಲ್ಲಿಯ ಯುವಕರು ಜಾನಪದ, ಬುಡಕಟ್ಟು ಹಾಡುಗಳಿಂದ ರಾಜ್ಯಮಟ್ಟದಲ್ಲಿ ಹೆಸರುಮಾಡಿದ್ದಾರೆ.ಆಗಸ್ಟ್ 2 ನೇ ವಾರದ ಸುಮಾರಿಗೆ ಸಿದ್ದಾಪುರದಲ್ಲಿ 280ಮಿ.ಮೀ ಗಿಂತಲೂ ಹೆಚ್ಚು ಮಳೆ ಸುರಿಯಿತು ನೋಡಿ, ಆಗ ತಗ್ಗುಪ್ರದೇಶದ ಈ ಊರಿನ ಸಾರ್ವಜನಿಕ ರಸ್ತೆಯಲ್ಲಿ ನೀರುತುಂಬುತ್ತಿರುವುದನ್ನು ನೋಡುತಿದ್ದ ಬಹುತೇಕರಿಗೆ ತಮ್ಮ ಗುಡ್ಡದಮೇಲಿನ ಮನೆಗಳ ಒಳಗೆ ಜಲ ಬರುತ್ತಿರುವುದರ ಯಾವ ಸೂಚನೆಯೂ ಇರಲಿಲ್ಲ. ಆದರೆ 6-7 ಮನೆಗಳಲ್ಲಿ ಜಲಪುಟಿದೆದ್ದು ನೀರು ನುಗ್ಗಿತ್ತು. ಬಹುತೇಕ ಎಲ್ಲರ ಮನೆಯ ಅಡುಗೆ ಮನೆಗೆ ಕೆಸರುನೀರು, ಮಣ್ಣು ತುಂಬಿಹೋಗಿತ್ತು.
ಸರ್ಕಾರ ಗಂಜಿ ಕೇಂದ್ರ ಮಾಡಲು ಸಿದ್ಧಮಾಡುತಿದ್ದ ಸಮಯದಲ್ಲೇ ಸಮೀಪದ ಭಾನ್ಕುಳಿಮಠದಲ್ಲಿ ನಿರಾಶ್ರಿತರಿಗೆ ಸಕಲ ವ್ಯವಸ್ಥೆಗಳಿರುವ ಪ್ರಕಟಣೆ ಹೊರಬಿತ್ತು. ಮೂರ್ನಾಲ್ಕು ಕಿ.ಮೀ. ದೂರದ ಭಾನ್ಕುಳಿಗೆ ಹೋಗಲು ತಯಾರಾಗದ ಇಲ್ಲಿಯ ಜನರು ಸ್ಥಳಿಯರ ನೆರವು ಪಡೆದು ಕಾಲದೂಡಿದರು. ಮಳೆನಿಂತು ನಿರಾಳವೆನಿಸುವ ಸಮಯದಲ್ಲಿ ಮನೆಯ ಮುಂಭಾಗದ ಜಗಲಿಯಲ್ಲೇ ಅಡುಗೆ ಮಾಡುತ್ತಾ ದಿನಕಳೆದರು. ಸ್ಥಳಿಯರು, ಗ್ರಾಮಪಂಚಾಯತ್ ನೆರವಿನಿಂದ ಈ ಜನರ ದುಖ: ಕಡಿಮೆಯಾಯಿತು.ಈಗಲೂ ಇವರ ಅಡುಗೆ ಮನೆಯ ಮಣ್ಣು ತೆರವಾಗಿಲ್ಲ, ನೀರು ಹೋಗಲು ಮಾಡಿಕೊಟ್ಟ ಮನೆಯೊಳಗಿನ ನೀರುಕಾಲುವೆ ಮುಚ್ಚಿಲ್ಲ.
ಅದೇನಾಯ್ತೋ ಮಳೆಯ ರಭಸಕ್ಕೆ ಎತ್ತರದ ಮನೆ ಒಳಗೆ ಜಲ,ನೀರು ಬರತೊಡಗಿದಾಗ ಸ್ಥಳಿಯರ ಸಲಹೆಯಂತೆ ವಾಸಸ್ಥಾನ ಬದಲಿಸಿ, ಬೇರೆಕಡೆ ಆಶ್ರಯ ಪಡೆದರು, ಗ್ರಾಮಸ್ಥರು ಅವರ ನೆರವಿಗಿದ್ದುದರಿಂದ ಅವರಿಗೆ ಧೈರ್ಯ ಬಂತು ಎನ್ನುತ್ತಾರೆ ಕಾನಳ್ಳಿಯ ಯುವಕ ಗೋಪಾಲ ಹಸ್ಲರ್, ನಾವೆಂದೂ ಕಂಡರಿಯದ ಮಳೆ, ನೆರೆ ನಮ್ಮ ಗ್ರಾಮಕ್ಕೂ ನುಗ್ಗಿತ್ತು, ಗ್ರಾ.ಪಂ. ತಾಲೂಕಾ ಆಡಳಿತಗಳು ನಮ್ಮ ನೆರವಿಗೆ ಬಂದವು ಜನಪ್ರತಿನಿಧಿಗಳು ಸಂತೃಸ್ತರ ನೆರವಿಗೆ ಬಂದರು. ಬಂದ ಕಷ್ಟ,ಬಂದಂತೇ ಕರಗಿಹೋಯ್ತು ಎಂದವರು ರವಿ ಕಾನಳ್ಳಿ.
ಹೀಗೆ ಸಿದ್ದಾಪುರದ ಕಡಕೇರಿ ಕಾನಳ್ಳಿ ಈ ಶತಮಾನದಲ್ಲಿ ನೋಡಿದ ಮೊಟ್ಟಮೊದಲ ನೆರೆ, ಮಹಾಮಳೆ ಇದು. ಆದರೆ ಅಪಾಯಕ್ಕೆ ಅವಕಾಶವಾಗದಂತೆ ಆಡಳಿತಯಂತ್ರ, ಜನಪ್ರತಿನಿಧಿಗಳು, ಸರ್ಕಾರ ನೆರವಿಗೆ ಬಂದು ಅವರ ಕಷ್ಟ ದೂರ ಮಾಡಿದ್ದಾರೆ. ಬಹುತೇಕ ಕೂಲಿ ಕಾರ್ಮಿಕರು, ಪರಿಶಿಷ್ಟವರ್ಗ, ಪರಿಶಿಷ್ಟ ಜಾತಿಯವರೇ ಹೆಚ್ಚಿರುವ ಈ ಗ್ರಾಮದ ನೆರೆ,ಜಲ ಒಂದು ದುಸ್ವಪ್ನದಂತೆ ಬಂದು ಹೋಗಿದ್ದನ್ನು ನೆನೆಯುವಾಗ ಅವರ ಕಣ್ಣು, ಬಾಯಿ, ಮನಸ್ಸು ತೇವಗೊಳ್ಳುತ್ತವೆ. ಈ ಗ್ರಾಮದ ಪ್ರವಾಹ ತೊಂದರೆಯನ್ನು ಸೂಕ್ತಸಮಯದಲ್ಲಿ ಸರಿಯಾಗಿ ನಿರ್ವಹಿಸಿದ ಸಿದ್ದಾಪುರ ತಾಲೂಕಾ ಆಡಳಿತ ಮತ್ತು ಉ.ಕ.ಜಿಲ್ಲಾ ಆಡಳಿತಕ್ಕೆ ಧನ್ಯವಾದ ಹೇಳಲೇಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *