

ಶಿವರಾಮ ಕಾರಂತರ ತಬರ ಭೂಮಿಗಾಗಿ ಹೋರಾಡಿ ಸತ್ತ ಕಥೆ ಸಾಹಿತ್ಯದಲ್ಲಿ ಛಾಪು ಮೂಡಿಸಿದ್ದು ತೀರಾ ಹಿಂದೆ. ಆದರೆ ಈಗ ತಬರನನ್ನು ನೆನಪಿಸುವಂಥ ಆಧುನಿಕ ಆಧಾರ್ ತಬರನ ಕಥೆ ಈ ವರದಿಯ ಸಾರಾಂಶ.
ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಹುಕ್ಕಳಿಯ ರೈತಶ್ರೀಪತಿ ಸೂರಾ ನಾಯ್ಕ 2010-11 ಸುಮಾರಿಗೆ ಎಲ್ಲರಂತೆ ಆಧಾರ್ ಕಾರ್ಡ್ ಗಾಗಿ ಸರತಿಯಲ್ಲಿ ನಿಂತು ಪೋಟೋ ದಾಖಲಾತಿಯನ್ನು ಮಾಡುತ್ತಾರೆ.ಆದರೆ ಆದಾಖಲಾತಿಯಿಂದ ಅವರಿಗೆ ಆಧಾರ್ ಚೀಟಿ ಸಿಗುವುದಿಲ್ಲ. ಈ ಮೊದಲಬಾರಿಯ ಮಾಸ್ತಿಹಕ್ಕಲಿನ ಆಧಾರ್ ದಾಖಲಾತೀಕರಣದ ನಂತರ ಕಳೆದ ಹತ್ತು ವರ್ಷಗಳಲ್ಲಿ ಒಟ್ಟೂ 16 ಬಾರಿ ಆಧಾರ್ ಕಾರ್ಡ್ ಗಾಗಿ ಇವರ ಚಿತ್ರ- ದಾಖಲೆಗಳ ಸಂಗ್ರಹಣೆ ನಡೆದಿದೆ. ಆದರೆ ಒಂದೂ ಬಾರಿ ಇವರ ಆಧಾರ್ ಕಾರ್ಡ ಇವರ ವಿಳಾಸಕ್ಕೆ ಬಂದು ತಲುಪಲಿಲ್ಲ.!
ಇಂಥ ಆಧಾರ್ ರಗಳೆಯಿಂದಾಗಿ ಶ್ರೀಪತಿ ನಾಯ್ಕರಿಗೆ ಬ್ಯಾಂಕ್ ವ್ಯವಹಾರ, ಮಕ್ಕಳ ಶಿಕ್ಷಣ,ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಎಲ್ಲದಕ್ಕೂ ಈ ಆಧಾರ್ ಇಲ್ಲದ ತೊಂದರೆ ಶಾಪವಾಗಿ ಕಾಡಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ನಿಂದ ಹಿಡಿದು ತಹಸಿಲ್ಧಾರರು, ಜಿಲ್ಲಾಧಿಕಾರಿಗಳ ವರೆಗೆ ಇವರ ದೂರು ತಲುಪಿದೆ ಆದರೆ ಇಡೀ ಸರ್ಕಾರಿ ವ್ಯವಸ್ಥೆ ಇವರ ಆಧಾರ ಕಾರ್ಡ್ ಸಿದ್ಧಪಡಿಸಿಕೊಡಲು ವಿಫಲವಾಗಿದೆ.
ಸರ್ಕಾರ ನೀಡಬೇಕಾದ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ಅನುಕೂಲಗಳಿಂದ ವಂಚಿತರಾಗಿರುವ ಇವರು ಈಗ ಜಿಲ್ಲಾಧಿಕಾರಿಗಳಿಗೆ ಲೀಗಲ್ ನೋಟೀಸ್ ನೀಡಿ ನಂತರ ಈ ಬಗ್ಗೆ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇಂದು ಬಿ.ಎಸ್.ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕರ ಜೊತೆಗೆ ನಮ್ಮ ಸಮಾಜಮುಖಿ ಕಾರ್ಯಾಲಯಕ್ಕೆ ಬಂದ ಶ್ರೀಪತಿ ನಾಯ್ಕ ತಮ್ಮ ಅಳಲನ್ನು ತೋಡಿಕೊಂಡು ಸರ್ಕಾರ ನೀಡಬೇಕಾಗಿರುವ ಆಧಾರ್ ಕಾರ್ಡ್ ನೀಡದೆ ನನಗೆ ನನ್ನ ಕುಟುಂಬಕ್ಕೆ ಮಾನಸಿಕ ತೊಂದರೆ ಆರ್ಥಿಕ ಹಾನಿ ಆಗಿದೆ. ಈ ಬಗ್ಗೆ ಸೂಕ್ತಕ್ರಮ, ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಲೀಗಲ್ ನೋಟೀಸ್ ನೀಡುತ್ತೇನೆ. ನಂತರ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಮನವಿ ನೀಡಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದರು.
ಜನಸಾಮಾನ್ಯನಿಗೆ ಗುರುತಿನ ಚೀಟಿಯಾಗಿ ಆಧಾರ್ ಕಡ್ಡಾಯ ಮಾಡಿದ ಸರ್ಕಾರ ಆಧಾರ ಚೀಟಿ ನೀಡುವ ಹೊಣೆಗಾರಿಕೆ, ಜವಾಬ್ಧಾರಿ ನಿರ್ವಹಿಸಬೇಕಲ್ಲವೆ? ಒಂದು ದಶಕದಿಂದ ಮಾನಸಿಕ, ಆರ್ಥಿಕ ಹಾನಿ ಮಾಡಿರುವ ಸರ್ಕಾರ ಇವರಿಗೆ ಪರಿಹಾರ ನೀಡಿ ಆದ ಪ್ರಮಾದ ಸರಿಪಡಿಸಬೇಕಲ್ಲವೆ? ಸಂಬಂಧಿಸಿದವರೆಲ್ಲಾ ತಾಂತ್ರಿಕ ಕಾರಣದ ನೆಪ ಕೊಡುತ್ತಾ ಸಾಗ ಹಾಕಿದರೆ ಆಗಿರುವ, ಆಗುವ ಅನ್ಯಾಯ,ಹಾನಿ ತುಂಬಿಕೊಡುವವರ್ಯಾರು? ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ತಬರನಿಗಾದ ಹಾನಿಗೆ ಉತ್ತರದಾಯಿಗಳಾಬೇಕಲ್ಲವೆ?
sensational news of the week-
ಬೇನಾಮಿ ಪತ್ರದ ಮೂಲಕ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು
ನಾನಲ್ಲ ಎಂದ ಕೆ.ಜಿ. ನಾಯ್ಕ!
ಸಿದ್ಧಾಪುರದ ಪೊಲೀಸ್ ಠಾಣೆಯಲ್ಲಿ ಸದಾ ಎರಡು ಗುಂಪುಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು, ಈ ಗುಟ್ಟನ್ನು ಇಂದು ಮತ್ತೆ ಪುನರುಚ್ಛರಿಸಿದವರು
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್.
ಇಂದು ನಡೆದ ಪೊಲೀಸ್ ವರಿಷ್ಠಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸೇರಿದ್ದ ಅನೇಕರು ಥರಾವರಿ ದೂರು-ದುಮ್ಮಾನಗಳನ್ನು ಹೇಳಿಕೊಂಡರು. ಹೀಗೆ ದೂರು, ದುಮ್ಮಾನ, ಆರೋಪ ಮಾಡಿದವರಲ್ಲಿ ಕಿ.ಜಿ. ನಾಯ್ಕ ಹಣಜಿಬೈಲ್ ಒಬ್ಬರು.
ಹೀಗೆ ಕೆ.ಜಿ. ನಾಯ್ಕ ಹಣಜಿಬೈಲ್ ಪತ್ರ ಬರೆದವನು ನಾನಲ್ಲ ಎಂದು ಸಮಜಾಯಿಸಿಕೊಡಲು ಒಂದು ಪ್ರಬಲ ಕಾರಣವೇ ಇದೆ. ………. ಹಳೆ ವರದಿ ನೋಡಿ, samaajamukhi you tube channel ನೋಡಿ, samajamukhi.net ಮತ್ತು samaajamukhi youtube channel ಗೆ subscribe ಆಗಿ ಸಹಕರಿಸಿ.



