sdp local express- ಕಣಸೆ ಅಪ್ಪೆಮಿಡಿ ಕಷಿ ಯಶಸ್ವಿ, ಗಣಪತಿ ನಾಯಕ ಪ್ರಥಮ

ಅಳಿದುಹೋಗುತ್ತಿರುವ ಸಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಡಿನಾದ್ಯಂತ ಹಲವು ಆಸಕ್ತರು ಹಲವು ರೀತಿಯಲ್ಲಿ ಕಾಯಕಲ್ಪ ನಡೆಸುತ್ತಿದ್ದು ಅವುಗಳಲ್ಲಿ ಕಸಿ ಮಾಡುವ ಮೂಲಕ ಮೂಲ ಸಸ್ಯದ ಗುಣವಿಶೇಷಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ಒಂದು.

ಎಲ್ಲೆಡೆ ಪ್ರಸಿದ್ಧವಾಗಿದ್ದ ತಾಲೂಕಿನ ಹೇರೂರು ಭಾಗದಲ್ಲಿದ್ದ ಅನಂತಭಟ್ಟನ ಅಪ್ಪೆ ಎನ್ನುವ ಅಪ್ಪೆಮಾವಿನ ವೈಶಿಷ್ಠ್ಯವನ್ನು ಕೇಳಿ ದೂರದ ದಕ್ಷಿಣಕನ್ನಡದಿಂದ ಹೆಸರಾಂತ ತೋಟಗಾರಿಕಾ ತಜ್ಞ ಕೋ.ಲ.ಕಾರಂತರು( ಶಿವರಾಮ ಕಾರಂತರ ಅಣ್ಣ) ಸ್ವತ: ಬಂದು ಅದಕ್ಕೆ ಕಸಿ ಮಾಡಿ ಇಂದಿಗೂ ಅದರ ಸಂತತಿಯನ್ನು ಉಳಿಸಿರುವದು ಒಂದು ರೀತಿಯಲ್ಲಿ ಐತಿಹಾಸಿಕ ಸಂಗತಿಯೇ.
ಆ ನಿಟ್ಟಿನಲ್ಲಿ ವಡ್ಡನಗದ್ದೆಯ ಗಣಪತಿ ಹೆಗಡೆಯವರ ಪ್ರಯತ್ನವೂ ಶಾಘ್ಲನೀಯವಾದ್ದೇ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾಡಿನ ಬೀಜಗಳ ಸಂಗ್ರಹ, ಅವುಗಳ ನಾಟಿ, ಔಷಧೀಯ ಸಸ್ಯಗಳ ಸಂಗ್ರಹ, ಅವುಗಳ ಪಾಲನೆ ಮುಂತಾಗಿ ತಮ್ಮ ಬಹುತೇಕ ಸಮಯವನ್ನು ಈ ನಿಟ್ಟಿನಲ್ಲಿ ಮೀಸಲಿಡುತ್ತ ಬಂದಿರುವ ಗಣಪತಿ ಹೆಗಡೆ ಆಸಕ್ತಿಯಿಂದ ಕರಗತಮಾಡಿಕೊಂಡ ಕಸಿ ಕಟ್ಟುವ ವಿಧಾನವನ್ನು ವಿನೂತನ ರೀತಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಅದಕ್ಕೆ ಒಂದು ನಿದರ್ಶನ ಇತ್ತೀಚೆಗೆ ತಮ್ಮ ಭಾರತೀಸಂಪದ ಹಾಗೂ ಬಹುಕಾಲದಿಂದ ಅವರ ಕಾರ್ಯಗಳಿಗೆ ಬೆಂಬಲವಾಗಿರುವ ಪ್ರಯೋಗ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಸಹಕಾರದಲ್ಲಿ ಕೈಗೊಂಡ ಕಾರ್ಯ. ವಿನಾಶದಂಚಿನಲ್ಲಿರುವ ಕಣಸೆ ಅಪ್ಪೆ ಎಂದು ಸ್ಥಳಿಯರು ಕರೆಯುವ ಅಪ್ಪೆ ಮಾವಿನ ತಳಿಯೊಂದನ್ನು ಕಸಿ ಕಟ್ಟಿ ಅದರ ತಳಿಯನ್ನು ಉಳಿಸಿಕೊಳ್ಳಲು ಮುಂದಾದ ಗಣಪತಿ ಹೆಗಡೆ ಅದಕ್ಕೆ ಅರಣ್ಯ ಇಲಾಖೆಯ ಸಹಕಾರವನ್ನು ಕೋರಿದರು.

ತಾಲೂಕಿನ ಗಡಿಭಾಗದ ಸಾಗರ ತಾಲೂಕಿನ ಕಣಸೆ ಎನ್ನುವ ಗ್ರಾಮದಲ್ಲಿನ ರುಚಿ, ಸುವಾಸನೆಗಳಿಂದ ಪ್ರಸಿದ್ಧವಾದ ಈಗ ಶಿಥಿಲವಾಗುತ್ತಿರುವ ಸುಮಾರು 300 ವರ್ಷಗಳಿಗೂ ಹೆಚ್ಚು ವಯಸ್ಸಾಗಿರಬಹುದಾದ ಅಪ್ಪೆ ಮಾವಿನ ಮರದ ಆಯ್ದ ಸಣ್ಣ ಗೆಲ್ಲುಗಳಿಗೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಿದ ಕಾಡು ಮಾವಿನ ಮರದ ಸಸಿಯ ಜೊತೆ ಮೂರು ತಿಂಗಳ ಹಿಂದೆ ಕಸಿ ಕಟ್ಟಿದರು. ಆಗಿನ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಸ್ವಾಮಿ ಹಾಗೂ ಇನ್ನಿತರರು ಸಹಕರಿಸಿದ್ದರು. ಹಳೆಯ ಮರದ ಉದ್ದನೆಯ ರೆಂಬೆಗಳ ತುದಿಯಲ್ಲಿನ ಗೆಲ್ಲುಗಳಿಗೆ ಪ್ರಯಾಸಪಟ್ಟು 16 ಕಾಡುªಮಾವಿನ ಸಸಿ ಜೊತೆ ಕಸಿ ಕಟ್ಟಿದ್ದು ನಂತರದಲ್ಲಿ ಪರೀಕ್ಷಿಸಿದಾಗ ಅವೆಲ್ಲ ಯಶಸ್ವಿಯಾಗಿವೆ. ನಂತರದಲ್ಲಿ ಶನಿವಾರ ಅರಣ್ಯ ಇಲಾಖೆಯ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಚಿಕ್ಕಣ್ಣನವರ್, ಗಾರ್ಡ ಅಶೋಕ ರಾಥೋಡ ಹಾಗೂ ರಾಜು ದ್ಯಾಮಣ್ಣನವರ್ ಮತ್ತು ಪ್ರಯೋಗ ಸ್ವ.ಸೇ.ಸಂಸ್ಥೆಯ ಗಂಗಾಧರ ಕೊಳಗಿಯವರ ಜೊತೆಗೂಡಿ ಆ ಕಸಿಗೆಲ್ಲುಗಳನ್ನು ರೆಂಬೆಗಳಿಂದ ಕತ್ತರಿಸಿ ಸುರಕ್ಷಿತವಾಗಿ ಮರದಿಂದ ಇಳಿಸಿ, ಅರಣ್ಯ ಇಲಾಖೆಯ ಸುಪರ್ಧಿಗೆ ನೀಡಲಾಯಿತು.
ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಕೊಂಚ ವ್ಯತ್ಯಾಸವಾದರೂ ಕಟ್ಟಿದ ಕಸಿಯೇ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ತಾಳ್ಮೆ, ನೈಪುಣ್ಯತೆ, ಆಸಕ್ತಿಯ ಫಲವಾಗಿ ಕಟ್ಟಿದ ಎಲ್ಲ ಕಸಿಯೂ ಯಶಸ್ವಿಯಾಗಿದೆ.
ಒಂದು ವಿಶಿಷ್ಠ ತಳಿ ಮತ್ತು ಅಳಿದುಹೋಗುತ್ತಿರುವ ಕಣಸೆ ಅಪ್ಪೆ ಮಾವಿನ ಸಂತತಿಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಕಣಸೆ ಅಪ್ಪೆಮಾವಿನ ಮರಕ್ಕೆ ಕಸಿ ಕಟ್ಟಿ ಅದರ ಸಸಿಗಳನ್ನು ಬೆಳೆಸುವ ನಿರ್ಧಾರ ಮಾಡಿದೆ. ಅದಕ್ಕೆ ಇಲ್ಲಿನ ಈ ಮೊದಲಿನ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಸ್ವಾಮಿ, ಈಗಿನ ಸೆ.ಫಾರೆಸ್ಟರ್ ಮಂಜುನಾಥ್, ಗಾರ್ಡ ಅಶೋಕ ರಾಥೋಡ ಮತ್ತು ರಾಜು ದ್ಯಾಮಣ್ಣವರ್, ಮೊದಲಿನಿಂದ ನನ್ನ ಚಟುವಟಿಕೆಗಳಿಗೆ ಸಹಕರಿಸುತ್ತ ಬಂದ ಗಂಗಾಧರ ಕೊಳಗಿ ಅವರ ಸಹಕಾರ ಹೆಚ್ಚಿನದು. ಈ ಕಸಿ ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯ ಉಸ್ತುವಾರಿಗೆ ನೀಡಲಾಗುತ್ತಿದೆ- ಗಣಪತಿ ಹೆಗಡೆ ವಡ್ಡಿನಗದ್ದೆ
ವಿನಾಶದಂಚಿನಲ್ಲಿರುವ ಸಸ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಶಾಘ್ಲನೀಯವಾದದ್ದು. ಇಂಥ ಕಾರ್ಯಗಳಿಗೆ ಅರಣ್ಯ ಇಲಾಖೆ ಯಾವತ್ತೂ ಸಹಕರಿಸುತ್ತದೆ. ಈ ರೀತಿಯ ಚಟುವಟಿಕೆ ನಿರಂತರವಾಗಿರಬೇಕು. ಗಣಪತಿ ಹೆಗಡೆ ಹಾಗೂ ಪ್ರಯೋಗ ಸಂಸ್ಥೆಗೆ ಅಭಿನಂದನೆಗಳು- ಮಂಜುನಾಥ ಚಿಕ್ಕಣ್ಣನವರ್- ಸೆಕ್ಷನ್ ಫಾರೆಸ್ಟರ್.

ಕವನ ಅಂತರಂಗದಿಂದ ಬರುವ ರಸಾನುಭವ – ಸು. ಮತ್ತಿಹಳ್ಳಿ

 ಕವನ ಅಂತರಂಗದಿಂದ ಹೊರಹೊಮ್ಮಿದ ಗಾಢ ರಸಾನುಭವ, ಅದು ಒತ್ತಾಯಪೂರ್ವಕವಾಗಿ ಹುಟ್ಟುವಂತದ್ದಲ್ಲ. ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇತ್ತೀಚಿಗೆ ಸಿದ್ದಾಪುರದ ಪೌರ್ಣಿಮಾ ಸಾಹಿತ್ಯಿಕ ಸಾಂಸ್ಕೃ ತಿಕ ವೇದಿಕೆ  ಇತ್ತೀಚೆಗೆ ನಿಧನರಾದ ಗಾನಗಾರುಡಿಗ ಡಾ. ಎಸ್ ಪಿ ಬಾಲಸುಬ್ರಮಣ್ಯಂ ರವರಿಗೆ ನುಡಿನಮನ ಸಲ್ಲಿಸಲು ಏರ್ಪಡಿಸಿದ ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 
  ಈ ಅಂತರ್ಜಾಲ ಕವನ ರಚನಾ ಸ್ಪರ್ಧೆಯಲ್ಲಿ ಒಟ್ಟು 48 ಕವಿಗಳು ಭಾಗವಹಿಸಿದ್ದು ಪ್ರಥಮ ಸ್ಥಾನ_ ಗಣಪತಿ ನಾಯಕ ಯಾದಗಿರಿ ಜಿಲ್ಲೆ¬. ದ್ವಿತೀಯ ಸ್ಥಾನ--ಸಾತು ಗೌಡ ಬಡಿಗೇರಿ ಅಂಕೋಲಾ,ತೃತೀಯ ಸ್ಥಾನ- ಶ್ರೀಮತಿ ಆಶಾ ಮಯ್ಯ ಪುತ್ತೂರು ದ.ಕ. ಕ್ರಮವಾಗಿ ಮೊದಲ 3 ಸ್ಥಾನ ಗಳಿಸಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ಅಂತರ್ಜಾಲದ ಮೂಲಕ ಸ್ವೀಕರಿಸಿದರು. ನಂತರದ 15 ಕವಿಗಳು ನಿರ್ಣಾಯಕರ ಮೆಚ್ಚುಗೆ ಗಳಿಸಿದ ಅಭಿನಂದನಾ ಪತ್ರ ಸ್ವೀಕರಿಸಿದರು. ನಿರ್ಣಾಯಕರಾಗಿ ಸಾಹಿತಿಗಳಾದ ಶ್ರೀಧರ ಶೇಟ್ ಶಿರಾಲಿ, ಕೂಡಿ ಚಂದ್ರಶೇಖರ ಶಿವಮೊಗ್ಗ, ರತ್ನಾಕರ ನಾಯ್ಕ ಪಾಲ್ಗೊಂಡಿದ್ದರು. ಪೌರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲ ಕೆ.ನಾಯ್ಕ ಕಾರ್ಯಕ್ರಮದ ನೇತೃತ್ವವಹಿಸಿ ನಾಡು ಹೊರನಾಡುಗಳಿಂದ ಸಕಾಲದಲ್ಲಿ ಕವನ ಕಳಿಸಿ ಕಾರ್ಯgಕ್ರಮ ಯಶಸ್ವಿಗೊಳಿಸಿದ ಎಲ್ಲ ಕವಿಗಳನ್ನು ಅಭಿನಂದಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ನಿರ್ಣಾಯಕರ ಪರವಾಗಿ ಮಾತನಾಡಿದರು.  ಟಿ ಕೆ ಎಮ್ ಅಜಾದ್ ಸ್ವಾಗತಿಸಿದರು. ಪ್ರಕಾಶ ಮೌರ್ಯ ವಂದಿಸಿದರು.  

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *