no shivaji- ಶಿವಾಜಿ ಬೇಡ, ಸದಾಶಿವರಾಯ ನಾಯಕ ಬೇಕು

ಸದಾಶಿವಗಡ ಕೋಟೆಯ ನಿರ್ಮಾತೃ ” ಸೋದೆಸದಾಶಿವರಾಯ”

———————————ಕಾರವಾರದ ಸದಾಶಿವಗಡ ಐತಿಹಾಸಿಕ ಪ್ರದೇಶ,ಕಾರವಾರಕ್ಕೆ ಸಾವಿರಾರು ವರ್ಷದ ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದ್ದರೂ,೧೬ ನೇ ಶತಮಾನದಿಂದ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವ ಬಂದಿತ್ತು,ಕಾರಣ ಐರೋಪ್ಯರ ಆಗಮನ,ಬ್ರಿಟಿಷರು,ಪೋರ್ಚುಗೀಸರು ಈ ಪ್ರದೇಶವನ್ನು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಬಳಸಿ ಇದನ್ನು ತಮ್ಮ ವ್ಯಾಪಾರಿ ಕೇಂದ್ರವನ್ನಾಗಿಸಿಕೊಂಡಿದ್ದರು,ಆ ಸಂದರ್ಭದಲ್ಲಿ ಉತ್ತರ ಕನ್ನಡಜಿಲ್ಲೆಯ ಪ್ರಮುಖ ಆಳರಸರಾಗಿದ್ದವರು ಸೋದೆಯ ಅರಸರು,ಕಾರವಾರ ಕೂಡಾ ಇವರ ಹಿಡಿತದಲ್ಲೇ ಇತ್ತು,೧೭ ನೇ ಶತಮಾನದ ಮಧ್ಯಭಾಗದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವರಾಯನು ಬ್ರಿಟಿಷರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಕಾರವಾರದಿಂದ ಅವರನ್ನು ಓಡಿಸಲೇಬೇಕೆಂದು ತೀರ್ಮಾನಿಸಿ ಅಲ್ಲಿ ಒಂದು ಕೋಟೆಯನ್ನು ಕಟ್ಟಿಸುತ್ತಾನೆ,(ನಂತರ ಅದನ್ನು ಸೋದೆಯ ಬಸವಲಿಂಗರಾಯ ಬಲಿಷ್ಠಪಡಿಸಿದ) ಅದುವೇ ಸದಾಶಿವಗಡ ಕೋಟೆ,ಸಾಮಾನ್ಯವಾಗಿ ಗಡ ಎಂದರೆ ಕೋಟೆ ಅಂತಲೇ ಅರ್ಥ,ಸದಾಶಿವಗಡ ಎಂದರೆ ಸದಾಶಿವರಾಯನ ಕೋಟೆ ಎಂದೇ ಅರ್ಥ,

ಈ ವಿಷಯಕ್ಕೆ ಸಾಕಷ್ಟು ಆಧಾರಗಳಿವೆ,ಅಲ್ಲದೆ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಸೋಲಿಸಿದ್ದೂ ಇದೇ ಸೋದೆ ಸದಾಶಿವರಾಯ! ಆದರೆ ಈ ಕೀರ್ತಿ ಒಲಿದದ್ದು ಮಾತ್ರ ಹೈದರಲಿಗೆ!!! ಕಾರವಾರದಲ್ಲಿ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ವಿಜಯದಾಖಲಿಸಿದ್ದು ನಮ್ಮ ಹೆಮ್ಮೆಯ ಸೋದೆ ಸದಾಶಿವರಾಯ,ಆ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಸದಾಶಿವಗಡದಲ್ಲಿ ” ವಿಜಯದಿವಸ” ವನ್ನೂ ಆಚರಿಸುತ್ತಿದ್ದಾರೆ,ಇಷ್ಟೆಲ್ಲ ಇರುವಾಗ ಈಗ ಸದಾಶಿವರಾಯನ ಕೋಟೆ ಶಿವಾಜಿಯ ಕೋಟೆ ಎಂದು ಸುಮ್ಮಸುಮ್ಮನೆ ಬಿಂಬಿಸುತ್ತಾ ಅಲ್ಲಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಿಸಲು ಮುಂದಾಗಿರುವುದು ತುಂಬಾ ಬೇಸರದ ಸಂಗತಿ,ಇತಿಹಾಸದ ತಿಳಿವಳಿಕೆ ಯಾಕೆ ಬೇಕೆಂದರೆ ಅಭಿಮಾನಕ್ಕೋಸ್ಕರ,ತನ್ಮೂಲಕ ಅಭಿವೃದ್ಧಿಯ ಆಶಯಕ್ಕೋಸ್ಕರ,ಅದೇ ಅಭಿಮಾನ ಅವಾಂತರಕ್ಕೆ ಕಾರಣವಾಗಬಾರದು,ಒಂದು ವೇಳೆ ಸದಾಶಿವಗಡದ ಕೋಟೆಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಯಾದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ,ನಮಗೆ ಶಿವಾಜಿಯ ಮೇಲೂ ಆತ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಕಾರ್ಯದ ಮೇಲೂ ಅಪಾರ ಅಭಿಮಾನವಿದೆ,ಹಾಗಂತ ನಮ್ಮ‌ನೆಲದ ಹೆಮ್ಮೆಯ ಅರಸರ ಸಾಧನೆಯನ್ನು ಅಲ್ಲಗಳೆಯಲಾದೀತೇ? ಅದು ಸಮಂಜಸವಲ್ಲ,ಶಿವಾಜಿಯ ಮೂರ್ತಿಯನ್ನು ಈ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ ಸ್ಥಾಪಿಸಿ,ಈ ಸ್ಥಳದಲ್ಲಿ ಸೋದೆ ಸದಾಶಿವರಾಯನ ಮೂರ್ತಿಯನ್ನು ಸ್ಥಾಪಿಸಿ, ಆಗ ಅವರ ಪರಿಶ್ರಮಕ್ಕೊಂದು ಬೆಲೆ ಪ್ರಾಪ್ತಿಯಾಗುತ್ತದೆ, ಕಳೆದ ೪ ವರ್ಷದಿಂದ ನಾವು ಮನವಿಕೊಡುತ್ತಿದ್ದೇವೆ,ಕೇಳಿಕೊಳ್ಳುತ್ತಿದ್ದೇವೆ,ಶಿರಸಿಯ ಸ್ಥಾಪಕ ಸೋದೆ ರಾಮಚಂದ್ರ ನಾಯಕ,ಹೀಗಾಗಿ ಈ ಸಂಗತಿ ಮುಂದಿನ ಯುವ ತಲೆಮಾರಿಗೆ ತಿಳಿದಿರಬೇಕೆಂದರೆ ದಯವಿಟ್ಟು ಶಿರಸಿಯಲ್ಲಿ ಆತನದೊಂದು ಪುತ್ಥಳಿ ಸ್ಥಾಪಿಸಿ ಅಥವಾ ಯಾವುದಾದರೂ ಸರ್ಕಲ್ ಗಾದರೂ ಆತನ ಹೆಸರಿಡಿ ಎಂದು….ಯಾರಿಗೂ ಕಿವಿಯೇ ಕೇಳುತ್ತಿಲ್ಲ ನಾನೇನುಮಾಡಲಿ….ಎಲ್ಲವನ್ನೂ ರಾಜಕೀಯ ಲಾಭದ ನೆಲೆಯಲ್ಲೇ ದಯವಿಟ್ಟು ನೋಡಬೇಡಿ,ಸಾಂಸ್ಕೃತಿಕವಾಗಿ ಚಿಂತಿಸಿ,ಚರಿತ್ರೆಯ ಅದ್ಭುತ ಸಂಗತಿಗಳನ್ನು ಚಿರಂತನಗೊಳಿಸಿ

-ಲಕ್ಷ್ಮೀಶ್ ಹೆಗಡೆ, ಸೋಂದಾ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *