

ರಾಜ್ಯದಾದ್ಯಂತ ಇಂದು ಗ್ರಾ.ಪಂ. ಫಲಿತಾಂಶ ಪ್ರಕಟವಾಗಿದ್ದು ಅನೇಕ ಕಡೆ ಪವಾಡಗಳು ನಡೆದಿವೆ. ಸಿದ್ಧಾಪುರ ತಾಲೂಕಿನ ವಾಜಗೋಡು ಪಂಚಾಯತ್ ಕೆರೆಮನೆ ವಾರ್ಡನಲ್ಲಿ ಸ್ಫರ್ಧಿಸಿದ್ದ ಎಸ್.ಎಂ.ಭಟ್, ಕೃಷ್ಣ ಭರಮ ನಾಯ್ಕ, ವಿನಾಯಕ ನಾಯ್ಕ ಮೂವರೂ ತಲಾ 198 ಮತಗಳನ್ನು ಪಡೆದರು!. ನಂತರ ಎಲ್ಲರ ಒಪ್ಪಿಗೆಯಂತೆ ಚೀಟಿ ಎತ್ತಲಾಗಿ ಎಸ್.ಎಂ.ಭಟ್ ಆಯ್ಕೆಯಾದರು.

ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ ತಲಾ ತೊಂಭತ್ತು ಮತಗಳನ್ನು ಪಡೆದು ಸಮಾನ ಮತಗಳ ಚೀಟಿ ಎತ್ತುವ ಆಯ್ಕೆಯಲ್ಲಿ ಶರಾವತಿ ಹನುಮಂತ ನಾಯ್ಕ ಹುಲಿಮನೆ ಆಯ್ಕೆಯಾದರು. ಬೇಡ್ಕಣಿ ಗ್ರಾಮ ಪಂಚಾಯತ್ ಭಾನ್ಕುಳಿ ವಾರ್ಡನಲ್ಲಿ ಈ ಸಮಾನ ಮತಗಳನ್ನು ಪಡೆದವರು ಶರಾವತಿ ಹನುಮಂತ ನಾಯ್ಕ ಮತ್ತು ಪವಿತ್ರ ಸುರೇಶ್ ಗೌಡ.
ಗ್ರಾ.ಪಂ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿ: ಇತ್ತೀಚಿನ ಟ್ರೆಂಡ್, ಮಾಹಿತಿಗಳು ಹೀಗಿವೆ…ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ನಿರ್ಣಾಯಗ ಘಟ್ಟ ತಲುಪಿದೆ.

Posted By : Srinivas Rao BVSource : Online Desk
ಬೆಂಗಳೂರು: ರಾಜ್ಯದ 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಸಂಜೆ ಅಥವಾ ರಾತ್ರಿಯ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದ್ದು, ಇತ್ತೀಚಿನ ವರದಿಗಳ ಪ್ರಕಾರ, ಬಿಜೆಪಿ ಬೆಂಬಲಿತ 5,340 ಕಾಂಗ್ರೆಸ್ ಬೆಂಬಲಿತ 3095, ಜೆಡಿಎಸ್ ಬೆಂಬಲಿತ 1570 ಸದಸ್ಯರು ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ ಎಣಿಕೆ ವೇಳೆ ಕುಸಿದು ಬಿದ್ದು ಹೃದಯಾಘಾತದಿಂದ ಚುನಾವಣಾಧಿಕಾರಿ ಸಾವು
ಮತ ಎಣಿಕೆ ವೇಳೆ ಕೆಲವು ಅವಘಡಗಳೂ ವರದಿಯಾಗಿದ್ದು, ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ ಮೈಸೂರಿನಲ್ಲಿ ಚುನಾವಣಾಧಿಕಾರಿಯಾಗಿದ್ದ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೋರೇಗೌಡ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಚಾಕು ತಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ
ಮತ ಎಣಿಕೆ ಕೇಂದ್ರಕ್ಕೆ ಚಾಕು ತಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದೆ. ಅಭ್ಯರ್ಥಿಯ ಪರ ಏಜೆಂಟ್ ಆಗಿ ಶಹಾಪುರ ನಗರದ ಪದವಿ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರಕ್ಕೆ ಅಷ್ಫಾಕ್ ಎಂಬಾತಚಾಕು ಹಿಡಿದು ಬಂದಿದ್ದ, ಈತ ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಮಾಟ, ಮಂತ್ರ!
ಮತದಾನಕ್ಕೂ ಮುನ್ನ ವಾಮಾಚಾರ, ಮಾಟ ಮಂತ್ರಗಳ ಬಗ್ಗೆ ಈ ಹಿಂದೆ ವರದಿ ಪ್ರಕಟವಾಗಿತ್ತು. ಆದರೆ ಈಗ ಮತ ಎಣಿಕೆ ದಿನದಂದು ಮತ ಎಣಿಕೆ ಕೇಂದ್ರದ ಎದುರು ವಾಮಾಚಾರ ನಡೆದಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.
ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದ್ದು, ಸಣ್ಣ ಪೇಪರ್ ತುಂಡು ಹಾಗೂ ವಾಮಾಚಾರಕ್ಕೆ ಬಳಕೆ ಮಾಡುವ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.(kpc)








_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
