ಅನಾಥ, ಮಾನಸಿಕ ಅಸ್ವಸ್ಥರ ಮಾನವೀಯತೆಯ ಸೇವೆಗೆ ಸಂದ ಗೌರವ ಆಧಾರ ಶಿಕ್ಷಣ, ಸ್ವ ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಸಿದ್ದಾಪುರ ಪ್ರತಿವರ್ಷ ಜಿಲ್ಲಾ ಮಟ್ಟದಲ್ಲಿ ನೀಡುವ ದಿ.ಎಂ.ಟಿ.ಕೊಡಿಯ ನೆನಪಿನ ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟಿನ ಜಾಕಿ ಡಿಸೋಜಾರನ್ನು ಆಯ್ಕೆ... Read more »
ಕ್ಯಾಂಪಸ್ ಕಲರವ- ಸಿದ್ಧಾಪುರದ ಎಂ.ಜಿ.ಸಿ.ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಂಚೆಕಾರ್ಡಿನಲ್ಲಿ ಪತ್ರ ಬರೆಯುವ ಮೂಲಕ ಪತ್ರಬರೆಯುವ ಹವ್ಯಾಸ ಪ್ರಯೋಗ ಮಾಡಿದರು. ವಿಭಿನ್ನತೆ,ವಿನೂತನತೆಗಳಿಂದ ವಿದ್ಯಾರ್ಥಿಗಳನ್ನು ಹೊಸಕಾಲಕ್ಕೆ ಸಜ್ಜುಮಾಡುತ್ತಿರುವ ಕನ್ನಡ ಉಪನ್ಯಾಸಕ ಡಾ.ವಿಠ್ಠಲ್ ಭಂಡಾರಿ ಈ ಪ್ರಯೋಗದ ಹಿಂದಿನ ಸೂತ್ರಧಾರಿ. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಖುಷಿಯಿಂದ ಗೀಚಿದ... Read more »
ಭಾರತ, ಅಮೇರಿಕ, ಆಸ್ಟ್ರೇಲಿಯಾ, ಚೀನಾ, ಯುನೈಟೆಡ್ ಕಿಂಗಡಂ ಸೇರಿದಂತೆ ಪ್ರಪಂಚದ 178 ನಗರದಲ್ಲಿ ನಡೆಯುವ ಅಂತರಾಷ್ಟ್ರೀಯ ಗುಣಮಟ್ಟದ ಸಿಎಫ್‍ಎ (ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ) ಪರೀಕ್ಷೆಯಲ್ಲಿ ಶಿರಸಿತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ತೇರ್ಗಡೆ ಆಗಿದ್ದಾಳೆ. ಕಳೆದ ಡಿಸೆಂಬರನಲ್ಲಿ ಮುಂಬಯಿ ಸೇರಿದಂತೆ ಏಕಕಾಲಕ್ಕೆ... Read more »
ಆತ್ಮೀಯ ಬರಹಗಾರ ರಸ್ಕಿನ್ ಬಾಂಡ್‍ನ ಜೀವನ ದೃಷ್ಟಿ ಡಿ. ರಾಮಪ್ಪ ಸಿರಿವಂತೆ, ಅಂಕೋಲಾ ಬ್ರಿಟಿಷ್ ದಂಪತಿಗಳಿಗೆ ಹುಟ್ಟಿ, ಭಾರತೀಯರಲ್ಲಿ ಭಾರತಿಯನಾಗಿ ಬದುಕುತ್ತಿರುವ ರಸ್ಕಿನ್ ಬಾಂಡ್, ತನ್ನ ಭಾರತೀಯತೆಯ ಬಗ್ಗೆ – ಜನಾಂಗದ ಹೆಸರಿನಿಂದಾಗಲೀ, ಧರ್ಮದ ಹೆಸರಿನಿಂದಾಗಲೀ ತಾನು ಭಾರತೀಯನಾಗಲಿಲ್ಲ; ಬದಲಿಗೆ,... Read more »
ಆಧುನಿಕ ಆವಿಷ್ಕಾರಗಳು,ಯಾಂತ್ರಿಕತೆ ಇಲ್ಲದೆ ವ್ಯವಸಾಯ ಸುಲಭವಲ್ಲ ಎನ್ನುವ ವೇದನೆ ನಡುವೆ ರೈತರೇ ತಮ್ಮ ಅಗತ್ಯದ ಸಲಕರಣೆಗಳನ್ನು ತಯಾರಿಸಿಕೊಳ್ಳುತಿದ್ದಾರೆ. ಅಡಿಕೆ ತೆಗೆಯುವ, ಸುಲಿಯುವ, ಒಣಗಿಸುವ ಉಪಕರಣಗಳೊಂದಿಗೆ ಅಡಿಕೆಗೊನೆ ಇಳಿಸುವ ಉಪಕರಣವೊಂದು ಈಗ ಮಲೆನಾಡಿನ ತೋಟಗಳಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಹಿಂದೆ ಅಡಿಕೆ... Read more »
ನಾಟಕೋತ್ಸವ ಸಮಾರೋಪ- ಕೆ.ಆರ್. ಪ್ರಕಾಶರಿಗೆ ಸನ್ಮಾನ ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ ಅಕಾಡೆಮಿಕ್ ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ. ಅವು ಶಾಸ್ತ್ರ ಮತ್ತು ವಿಜ್ಞಾನ ಎರಡೂ ಕೂಡ. ನಮ್ಮ ಸಮಸ್ಯೆಗಳಿಗೆ ಪರಿಹಾರ... Read more »
ಲಲಿತಪ್ರಬಂಧ- ನೋಡಿದ್ದೀರಾ.. ಜೋಗದ ಗುಂಡಿ -ತಮ್ಮಣ್ಣ ಬೀಗಾರ್ ದೊಡ್ಡ ಕಲ್ಲುಬಂಡೆ, ಅದರ ಆಚೆಗಿನ ನೀರಿನ ಗುಂಡಿ ಎಲ್ಲ ಸಮೀಪ ಇದ್ದಂತೆ ಕಾಣುತ್ತಿತ್ತು. ಹಾಗೆ ಕಾಣಲು ತೊಡಗಿ ಐದು ನಿಮಿಷವೇ ಆಗಿರಬೇಕು. ಹಿಂದೆ ನೋಡಿದರೆ ಅಪ್ಪ ನನಗಿಂತ ಮೆಟ್ಟಿಲು ಹಿಂದೆ ಇದ್ದ.... Read more »
ಮಕ್ಕಳ ಪಠ್ಯವನ್ನು ಪಾಲಕರು ಅರಿತು ಮಾರ್ಗದರ್ಶನ ಮಾಡಿದರೆ ಹೆಚ್ಚು ಅನುಕೂಲ. ಹಾಗೆಯೇ ಅವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಂತದಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುತ್ತದೆ ಎಂದು ಸಮಾಜಮುಖಿ ಪತ್ರಿಕೆಯ ಸಂಪಾದಕ ಕನ್ನೇಶ್ ಕೋಲಶಿರ್ಸಿ... Read more »
ಸಿದ್ಧಾಪುರ ತಾಲೂಕಿನ ಬಿಳಗಿ ಸೇವಾ ಸಹಕಾರಿ ಸಂಘದ ನಿರ್ಧೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ 2020 ರಿಂದ 2025 ರ ಅವಧಿಗೆ ಭಾರಿ ಬಹುಮತದಿಂದ ಸುಲೋಚನಾ ಶಾಸ್ತ್ರೀ ಬಿಳಗಿ ನೇತೃತ್ವದ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸುಲೋಚನಾ ಶಾಸ್ರ್ತೀ ನಾಲ್ಕನೇ ಬಾರಿ ಆಯ್ಕೆಯಾಗಿದ್ದು... Read more »
ಸರ್ಕಾರೇತರ ಸಂಸ್ಥೆಯೊಂದಕ್ಕೆ ಮೋಸಮಾಡಿ 8 ಲಕ್ಷ ವಂಚಿಸಿದ್ದ ಅವರಗುಪ್ಪಾದ ಸಂತೋಷ ಎನ್ನುವ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಸಿದ್ಧಾಪುರ ಪೊಲೀಸರು ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಿರಸಿಯ ಸರ್ಕಾರೇತರ ಸಂಸ್ಥೆಗೆ ವಂಚಿಸಿದ್ದ ಈತ ಕಳೆದ ಕೆಲವು ವರ್ಷಗಳಿಂದಲೇ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಮಿಶ್ರ... Read more »