ಸಂಪ್ರಭಾ ಸುಮುಖಾನಂದರ ಲೇಖನ ಯಾಕೆ ನಾಸ್ತಿಕತೆ?

ಸಂಪ್ರಭಾ ಸುಮುಖಾನಂದರ ಲೇಖನ
ಯಾಕೆ ನಾಸ್ತಿಕತೆ?
ಯಾವುದು ಆಸ್ತಿಕತೆ
ಸಮಾಜ ಶಿಕ್ಷಕರು, ಬೋಧಕರು, ಉಪನ್ಯಾಸಕರಿಗೆ ಕೊಡುವ ಗೌರವಾದರ ಅಪಾರ. ಆದರೆ, ಕೆಲವು ಶಿಕ್ಷಕರು ತಮ್ಮ ವ್ಯಕ್ತಿತ್ವ, ಸ್ಥಾನಮಾನಕ್ಕೆ ಕುಂದು ತಂದುಕೊಳ್ಳುವಷ್ಟು ಮೂಢರು, ಅಜ್ಞಾನಿಗಳೂ ಆಗಿರುತ್ತಾರೆ ಎನ್ನುವ ಗುರುತರ ಆಪಾದನೆಗಳಿವೆ. ‘ಗುರುವಿನ ಗುಲಾಮನಾಗುವ ತನಕ….ಸಿಗದಣ್ಣ ಮುಕ್ತಿ’ ಎನ್ನುವ ವಾಕ್ಯ ಗುರು-ಹಿರಿಯರನ್ನು ಉನ್ನತ ಸ್ಥಾನಕ್ಕೊಯ್ದದಕ್ಕೆ ಸಾಕ್ಷಿ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು, ಭೋದಕರೆಂದರೆ…. ಕೇವಲ ಹಣ ಲಾಭ, ಅನುಕೂಲಕ್ಕಾಗಿದುಡಿಯುವ ಸಾಮಾನ್ಯ ವೃತ್ತಿಪರರಂತಾಗುತಿದ್ದಾರೆ.
ರಾಧಾಕೃಷ್ಣನ್‍ರಿಂದ ಪ್ರಾರಂಭವಾಗಿ ಈಗಲೂ ಇರುವ ಅತ್ಯುತ್ತಮ ಶಿಕ್ಷಕರ ಪರಂಪರೆ ಒಂದೆಡೆಯಾದರೆ…, ಅದಕ್ಕೆ ವ್ಯತಿರಿಕ್ತವಾಗಿ ದೇವರು,ಜಾತಿ!,ಧರ್ಮ, ಪೂಜೆ-ಪುನಸ್ಕಾರ, ಜ್ಯೋತಿಷ್ಯ ಸಂಸ್ಕ್ರತಗಳಂಥ ಗೊಡ್ಡು ವಿಚಾರಗಳ ಭೋದಕರು, ಆಚರಣೆಯ ಮೂಢರೂ ಆಗಿ ವಿವೇಕಶೂನ್ಯ ಜನಸಾಮಾನ್ಯರಂತೆ ವರ್ತಿಸುವ ಅನೇಕ ಆಧುನಿಕ ಗುರುಗಳು ಈಗ ಎಲ್ಲೆಡೆ ಕಾಣುವಂತಾಗಿದೆ.
ಈ ಮಧ್ಯೆ ಆರ್.ವಿ.ಭಂಡಾರಿ,ಡಾ.ಎ.ಎಸ್. ಬಾಲಸುಬ್ರಹ್ಮಣ್ಯ,ಡಾ.ನರಸಿಂಹಯ್ಯನವರಂಥ ಅದೆಷ್ಟೊ ಶಿಕ್ಷಕ, ಗುರುಗಳು ಆಗಿ ಹೋಗಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯ ನಂತರ ಬರಹಗಾರರು, ಚಿಂತಕರಾಗಿ ಹೆಸರು ಮಾಡಿರುವ ಹೊನ್ನಾವರದ ಸುಮುಖಾನಂದ ಜಲವಳ್ಳಿ ಬಹಳ ವರ್ಷಗಳಿಂದ ಶಿಕ್ಷಕರಾಗಿದ್ದುಕೊಂಡೇ ‘ಸಂಪ್ರಭಾ’ ಎಂಬ ಪತ್ರಿಕೆ ನಡೆಸುತಿದ್ದಾರೆ.
ಆ ಪತ್ರಿಕೆಯಲ್ಲಿ ವಿಚಾರ ಪ್ರಚೋದಕ ವಿಷಯಗಳು ಚರ್ಚಾರ್ಹ, ಸಂಗ್ರಹಯೋಗ್ಯ ಲೇಖನಗಳು ಪ್ರಕಟವಾಗುತ್ತಿವೆ.
ಇತ್ತೀಚೆಗೆ ಅವರ ಸಂಪ್ರಭಾದಲ್ಲಿ ಪ್ರಕಟವಾದ ಒಂದು ಲೇಖನ ಅವರ ಆಸಕ್ತಿ, ಗುರುತ್ವಕ್ಕೆ ಸಾಕ್ಷಿ.
ಈ ಲೇಖನದ ಮೂಲಕ ಅವರೊಂದಿಗೆ ಅವರ ಪತ್ರಿಕೆ, ಅವರ ವೈಚಾರಿಕ ಜ್ಞಾನಪರಿಚಯಿಸುವುದು ಈ ಬರಹದ ಉದ್ದೇಶ.
ಸತ್ಯನಾರಾಯಣ ಕತೆ, ಗೃಹ ಪ್ರವೇಶದ ವಾರ್ಷಿಕೋತ್ಸವ!?!ದ ಧಾರ್ಮಿಕ ಕಾರ್ಯ!? ಮಾಡುವ ಮೂಢ ಶಿಕ್ಷಕರು ಹೇಗೆ ವಿದ್ಯಾರ್ಥಿಗಳಿಗೆ ಮಾದರಿ, ಮಾರ್ಗದರ್ಶಿ ಆಗಬಲ್ಲರು?
ಈ ಹಿನ್ನೆಲೆಯಲ್ಲಿ ಸುಮುಖಾನಂದರ ಲೇಖನ, ವ್ಯಕ್ತಿತ್ವ ಕೆಲವು ಮೂಢ ಶಿಕ್ಷಕರ ಆತ್ಮಾವಲೋಕನಕ್ಕಾದರೂ ನೆರವಾಗಲಿ ಎನ್ನುವ ಉದ್ದೇಶ ನಮ್ಮದು.
ಶಿಕ್ಷಕರ ಗುರು ಸುಮುಖಾನಂದರಂಥ ಶಿಕ್ಷಕ, ಭೋದಕರ ಸಂಖ್ಯೆ ವೃದ್ಧಿಸಲಿ ಎಂಬ ಕಳಕಳಿ ಕೂಡಾ ಸಮಾಜಮುಖಿಯದ್ದು. (-ಸಂ)
….ಭಾರತೀಯರ ವಿಕಾಸದಲ್ಲಿ ಆಸ್ತಿಕವಾದ ಮತ್ತು ನಾಸ್ತಿಕ ವಾದಗಳೆರಡೂ ಪರಸ್ಪರ ಮುಖಾಮುಖಿಯಾಗುತ್ತ ಬೆಳೆದು ಕೊಂಡು ಬಂದಿವೆ.
ವೇದ ಪಾರಮ್ಯವನ್ನು ಒಪ್ಪಿಕೊಂಡು ಬದುಕುವವರು ಆಸ್ತಿಕರು; ಅದನ್ನು ಒಪ್ಪದವರು ನಾಸ್ತಿಕರು ಎನ್ನಲಾಗಿದೆ.
ವೇದಗಳು ಅನೇಕ ಕಲ್ಪನೆಗಳನ್ನು ಕೊಟ್ಟಿವೆ. ಆ ಕಲ್ಪನೆಗಳಲ್ಲಿ ದೇವರೂ ಒಂದು. ಸಾಮಾನ್ಯವಾಗಿ ನಾಸ್ತಿಕರು ಎಂದರೆ ದೇವರನ್ನು ನಂಬದವರು; ದೇವರ ಅಸ್ತಿತ್ವವನ್ನು ನಿರಾಕರಿಸುವವರು ಎಂದು ಮಾತ್ರವೇ ಬಿಂಬಿಸಲಾಗಿದೆ.
ದೇವರು ಇದೆ ಅನ್ನುವುದಕ್ಕೆ ಏನು ಪ್ರಾಮಣ್ಯವಿದೆ? ಇದೊಂದು ಅಮೂರ್ತ ಕಲ್ಪನೆ ಹೊರತೂ ವಾಸ್ತವವಲ್ಲ.
ಕಲ್ಪನೆ ಎಂದೂ ಸತ್ಯವಾಗದು. ಮಕ್ಕಳಿಗೆ ಗುಮ್ಮನ ಕತೆ ಹೇಳಿದಂತೆ ಇಲ್ಲದ ದೇವರಿಗೆ ಯಾಕೆ ಹೆದರಬೇಕು;
ಹೆದರಿಕೆಯನ್ನು ಬೆಳೆಸಿಕೊಂಡು ಯಾಕೆ ಕುಗ್ಗಬೇಕು? ಇಂಥ ಕುಗ್ಗುವಿಕೆಯಿಂದ ಏನು ಸಾಧನೆ ಸಾಧ್ಯ? ದೇವರ ಭಯ ಜ್ಞಾನಕ್ಕೆ ಮೂಲ ಅನ್ನುವುದು ಅಪ್ಪಟ ಸುಳ್ಳು. ಜ್ಞಾನಕ್ಕೆ ಮೂಲ ಪ್ರೀತಿಯೇ ಹೊರತು ಭಯವಲ್ಲ ಎಂಬಗ್ರಹಿಕೆ ನಾಸ್ತಿಕವಾದದಲ್ಲಿದೆ…
ಮನುಷ್ಯ ವಿಚಾರವಂತ, ಮನುಷ್ಯ ಸುಳ್ಳನ್ನು ತಿರಸ್ಕರಿಸುತ್ತಾನೆ, ತನ್ನ ಅನುಭವಕ್ಕೆ ಬರುವ ಸತ್ಯವನ್ನು ಸ್ವೀಕರಿಸುತ್ತಾನೆ. ನಾಸ್ತಿಕ ದೃಷ್ಟಿಯವರು ದೇವರು ಮಾತ್ರವಲ್ಲ ಸ್ವರ್ಗ, ನರಕ, ಪಾಪ, ಪುಣ್ಯ, ಪುನರ್ಜನ್ಮ, ಜೋತಿಷ್ಯ, ಭವಿಷ್ಯ, ಹೋಮ, ನೇಮ, ಯಾಗ, ಯಜ್ಞ, ಭೂತ-ಪ್ರೇತ, ಇಂಥ ಕಲ್ಪನೆಗಳಿಗೆ ಇಂಬು ಕೊಡುವುದಿಲ್ಲ. ಆದರೆ, ಬದುಕಿನ ಮೌಲ್ಯಗಳನ್ನು ಅವರು ಒಪ್ಪಿಕೊಳ್ಳುತ್ತಾರೆ. ಪ್ರೀತಿ, ಕರುಣೆ, ತಾಳ್ಮೆ,ಕ್ಷಮೆ, ಪರೋಪಕಾರ, ತ್ಯಾಗ, ಸೇವೆ, ಇಂಥ ಜೀವ ದ್ರವ್ಯಗಳನ್ನು ನಂಬುತ್ತಾರೆ. ದುಡಿಮೆಯನ್ನು ಗೌರವಿಸುತ್ತಾರೆ. ಮಾನವಾಂತಃಕರಣವನ್ನು ಪ್ರೀತಿಸುತ್ತಾರೆ. ಆದರೆ, ಆಸ್ತಿಕರ ಭೂತಗನ್ನಡಿಯಲ್ಲಿ ನಾಸ್ತಿಕರು ಅಕರಾಳ ವಿಕರಾಳವಾಗಿ ಕಂಡರೆ….. ಅದಕ್ಕಾರು ಹೊಣೆ?
ಈಗ ಅದಲ್ಲ ವಿಷಯ, ದೇವರನ್ನು ನಂಬದವರು ನಾಸ್ತಿಕರು ಅಂತ ಹೇಳುವುದಾದರೆ, ನಾಸ್ತಿಕರು ಯಾರು? ಯೋಚಿಸಬೇಕು. ಆಸ್ತಿಕರು, ಆಸ್ತಿಕರು ಎಂದು ಹೇಳುತ್ತೇವಲ್ಲ, ಈ ಆಸ್ತಿಕ ರೊಳಗಿರುವ ನಾಸ್ತಿಕರನ್ನು ಎಷ್ಟು ಜನ ಕಂಡಿದ್ದಾರೆ?

ಎಷ್ಟು ಜನಬೇಡ, ತಾವಾದರೂ ತಮ್ಮೊಳಗಿನ ನಾಸ್ತಿಕತೆಯನ್ನು ಕಂಡುಕೊಂಡಿದ್ದಾರಾ?
ದೇವರನ್ನು ನಂಬದವರು ನಾಸ್ತಿಕರಾದರೆ ದೇವರನ್ನು ನಂಬದ, ಆದರೆ ನಂಬಿದಂತೆ ತೋರಿಸಿಕೊಳ್ಳುವವರನ್ನು ಏನನ್ನೋಣ?
ನಮ್ಮ ಪುರಾಣ ಕತೆಗಳು, ಕ್ಷೇತ್ರ ಮಹಾತ್ಮೆಗಳು ದೇವರ ಮಹಿಮೆಯನ್ನು ಸಾರುತ್ತವೆ. ಈ ಕತೆಗಳೆಲ್ಲ ಕಾಲ್ಪನಿಕವಾದವು. ಇವು ಯಾವುವೂ ಸತ್ಯವಲ್ಲ. ದೇವರ ಬಗ್ಗೆ ಜನರನ್ನು ನಂಬಿಸಬೇಕೆಂದೇ ಬರೆದ ಸುಳ್ಳು ಕತೆಗಳು. ಈ ಪುರಾಣ ಕತೆಗಳನ್ನು ಬರೆದವರಿಗೂ ಗೊತ್ತು ಇವು ಸತ್ಯ ಅಲ್ಲ ಅಂತ.
ಬರೆಸಿದವರಿಗೂ, ಪ್ರಚಾರ ಮಾಡಿದವರಿಗೂ ಇವು ಸುಳ್ಳು ಕತೆಗಳು ಅಂತ ಗೊತ್ತು. ಆದರೂ ಯಾಕೆ ಈ ಕೆಲಸ ಮಾಡುತ್ತಾರೆ? ಇದೊಂದು ಸತ್ಕಾರ್ಯ ಎಂಬ ರೀತಿಯಲ್ಲಿ ನಿರ್ವಹಿಸುತ್ತಾರೆ. ಪ್ರತಿಯೊಂದು ದೇವ ಕಲ್ಪನೆಯ ಹಿಂದೆಯೂ ಜಾತಿ, ಧರ್ಮ, ತತ್ವ, ಸಿದ್ಧಾಂತ ಇತ್ಯಾದಿಗಳಿವೆ.
ತಮ್ಮ ತಮ್ಮದೇ ಶ್ರೇಷ್ಠ ಎಂದು ವೈಭವೀಕರಿಸಿಕೊಳ್ಳುವುದಕ್ಕಾಗಿ, ತಮ್ಮ ವರ್ಚಸ್ಸನ್ನು ಮೆರೆಯುವುದಕ್ಕಾಗಿ ದೇವರನ್ನು ಒಂದು ಪ್ರಬಲ ಸಾಧನವಾಗಿ ಬಳಸಿಕೊಂಡ ಜನ ಇಲ್ಲಿದ್ದಾರೆ. ದೇವರ ಮೂಲಕ ಇವರು ಬಯಸುವುದು ತಮ್ಮ ಆರಾಧನೆಯನ್ನು. ಜನರ ಮುಂದೆ ತಮ್ಮನ್ನೇ ದೇವರೆಂದು ನೇರವಾಗಿ ಬಿಂಬಿಸಿಕೊಳ್ಳಲು ಆಗದಿದ್ದಾಗ ದೇವರನ್ನು ಮುಂದು ಮಾಡಿ ಅದರ ಹಿಂದೆ ತಾವು ನಿಂತಿದ್ದಾರೆ. ದೇವರ ಕುರಿತು ತಾವು ಕಟ್ಟಿದ ಈ ಸುಳ್ಳು ಕತೆಗಳೆಲ್ಲ ಸತ್ಯ ಅಂತ ಜನರಲ್ಲಿ ನಂಬಿಕೆ ಹುಟ್ಟಿಸಿ, ಭಯ ಭಕ್ತಿಯನ್ನು ಬಿತ್ತಿ ಮಾನಸಿಕ ದಾಸ್ಯಕ್ಕೆ ದೂಡಿದ್ದು ಸುಳ್ಳೇನೂ ಅಲ್ಲ. ಇಂಥ ನಂಬಿಕೆಗಳನ್ನು ಜನರಲ್ಲಿ ಗಟ್ಟಿಗೊಳಿಸಲುಬಳಸಿಕೊಂಡಿದ್ದು ಸಾಹಿತ್ಯ, ಸಂಗೀತ, ನೃತ್ಯ,ಶಿಲ್ಪದಂತಹ ಲಲಿತ ಕಲೆಗಳನ್ನು. ನಮ್ಮ ಕರಾವಳಿಯ ಯಕ್ಷಗಾನವಂತೂ ಇದಕ್ಕೆ ಸ್ಪಷ್ಟ ನಿದರ್ಶನ.
ದೇವರ ಕುರಿತು ಸುಳ್ಳುಪೊಳ್ಳು ಪುರಾಣ ಹೇಳಿ ಜನರಲ್ಲಿ ನಂಬಿಕೆ ಹುಟ್ಟಿಸಿ, ಅದರ ಪ್ರಯೋಜನವನ್ನು ತಾವು ಪಡೆವ ವಂಚನೆಯ ಮನಸ್ಸುಗಳನ್ನು ಆಸ್ತಿಕ ಎನ್ನಬಹುದೇ?
ಇಂಥ ಕತೆಗಳನ್ನೇ ಆಕರವಾಗಿಟ್ಟುಕೊಂಡು ದೇವರ ಮೂರ್ತಿಗಳನ್ನು ಕೆತ್ತಿಸಿಯೋ, ಎರಕಹೊಯ್ದೊ ಗುಡಿಕಟ್ಟಿ ಅದರೊಳಗೆ ನಿಲ್ಲಿಸಿ ಆರಾಧನೆಯನ್ನು ವೈಭವೀಕರಿಸಿ ವಿಧ ವಿಧ ಸೇವೆಗಳನ್ನು ಸೃಷ್ಟಿಸಿ ಆ ಹೆಸರಲ್ಲಿ ಜನರಿಂದ ಹಣ ಸುಲಿವ ವ್ಯಾಪಾರಿ ತಂತ್ರದ ಮನಸ್ಸುಗಳು ದೇವರ ಕುರಿತು ತಳೆದಿರುವ ಭಾವನೆ ಯಾವುದು? ಕಾಂಚಾಣದ ಹಿಂದೆ ಓಡಾಡುವ ದೇವರ ಮಂದಿಗಳು ನಿಜವಾಗಿ ದೇವರನ್ನು ನಂಬಿದ್ದಾರೆಯೇ? ದೇವಸ್ಥಾನ ನಡೆಸುವುದು ಒಂದು ಉಧ್ಯಮವಾಗಿ, ಸೇವೆಗಳೆಲ್ಲ ಹಣ ತರುವ ಮೂಲಗಳಾಗಿವೆ. ಭಕ್ತ ಗಿರಾಕಿಯಾಗಿ ಸಲ್ಲುವಲ್ಲಿ ಅನಾಥವಾಗಿ ಬಿದ್ದಿರುವುದು ಯಾವುದು? ನಾಸ್ತಿಕತೆಯೋ,ಆಸ್ತಿಕತೆಯೋ?
ಹೋಮ ಹವನಗಳು, ಯಾಗಯಜ್ಞಗಳು- ಇವೆಲ್ಲ ದೇವರ ಮುಖವಾಡದಲ್ಲೆ ಅಲ್ಲವೇ ನಡೆಯುವುದು?
ನಾಗಮಂಡಲ, ಜಾತ್ರೆಗಳಂತಹ ಉತ್ಸವಗಳು ಮತ್ತೇನು? ಇವುಗಳ ಹಿನ್ನೆಲೆ, ಮುನ್ನಲೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭಕ್ತಿ ಆರಾಧನೆಯ ಹೆಸರಿನಲ್ಲಿ ಜನರ ಸಂಪತ್ತನ್ನು ದೋಚಲು ಆಸ್ತಿಕರು ಮಾಡಿಕೊಂಡಮತ್ತೊಂದು ತಂತ್ರವಲ್ಲವೆ? ಇಲ್ಲಿ ಉಂಡು ತೇಗುವವರು, ತಿಂದು ನಲಿಯುವವರು ಯಾರು? ಇಂತಹ ಆರಾಧನೋತ್ಸವಗಳಲ್ಲಿ ಈಗ ಮಂದಿಗಳಿಂದ ಹೊರೆಗಾಣಿಕೆಗಳು ಶುರುವಾಗಿದೆ. ಹೊರೆಗಾಣಿಕೆಗೆ ಬಂದ ವಸ್ತುಗಳು ಸಗಟು ಮಾರಾಟವಾಗಿ ಹಾಗೆ ಕತ್ತಲಲ್ಲೇ ಮಾಯವಾಗುವುದು. ಮತ್ತು ಜನರನ್ನು ಮರುಳುಗೊಳಿಸಲುಮಹಾ ಅನ್ನ ಸಂತರ್ಪಣೆ ಮಾಡಿದೇವರ ಪ್ರಸಾದ ಎಂದು ಬಿಂಬಿಸುವುದು- ಇಲ್ಲೆಲ್ಲ ಇರುವ ವಂಚನೆಯ ಬುದ್ಧಿ ಆಸ್ತಿಕವೋ ನಾಸ್ತಿಕವೊ?
ದೇವರನ್ನು ನಂಬಿ ನಡೆವ ಜನಕ್ಕೂ, ದೇವರ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸಿ ಬದುಕುವ ಜನಕ್ಕೂ ವ್ಯತ್ಯಾಸವುಂಟಲ್ಲವೇ?
ಆಸ್ತಿಕವಾದಿಗಳ ಅಗ್ರಪಂಕ್ತಿ ಯಲ್ಲಿರುವವರು ಜ್ಯೋತಿಷಿಗಳು, ಭವಿಷ್ಯವಾದಿಗಳು, ಗ್ರಹಗತಿ ನೊಡುವ ಈ ಜನರು ಅದಕ್ಕೆ ಪರಿಹಾರಗಳನ್ನೂ ಸೂಚಿಸುತ್ತಾರೆ. ಗೃಹಶಾಂತಿ, ಜಪತಪಗಳಿಂದ ತೊಡಗಿ ದೊಡ್ಡ ದೊಡ್ಡ ಹೋಮ, ಯಾಗ, ವೃತ, ಪೂಜೆ ಇವೆಲ್ಲ ಅವರ ಜೋಳಿಗೆಯಲ್ಲಿರುತ್ತವೆ. ಇದು ಅವರೇ ಮಾಡಿಕೊಂಡ ವ್ಯವಸ್ಥೆ. ಅವೆಲ್ಲ ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಜನರಿಗೂ ಗೊತ್ತು. ಶಾಸ್ತ್ರ ಹೀಗೆ ಹೇಳಿದೆ ಅಂದರಾಯಿತು ಇವರು ಬಿಡುವ ರೈಲು ಸುರಳಿತ. ಶಾಸ್ತ್ರವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆ ಶಾಸ್ತ್ರಗಳನ್ನು ಮಾಡಿದ್ದು ಅವರೇ ಅಲ್ಲವೆ?
ಇವರ ಜೊತೆಗೆ ಸೇರುವವರು ಅಷ್ಟಮಂಗಲ ಪ್ರಶ್ನೆ ಹೇಳುವರು. ದೇವರಿಗೆ ಯಾವ ಯಾವ ಸೇವೆ ಆಗಬೇಕು, ಬೃಹ್ಮ ಕಲಶ, ಜೀರ್ಣೋದ್ಧಾರ ಏನೇನು ಆಗಬೇಕು, ಇಲ್ಲದಿದ್ದರೆ ಊರಿಗೇ ತೊಂದರೆ, ದಾರಿಗೆ ತೊಂದರೆ, ನೀರಿಗೆ ತೊಂದರೆ, ಎಲ್ಲದಕ್ಕೂ ತೊಂದರೆಯೇ. ತೊಂದರೆ ಕಳೆದು ಸುಖಆಗಬೇಕೆಂದರೆಅಷ್ಟಮಂಗಲದಲ್ಲಿ ಅಂದಂತೆ ಎಲ್ಲ ನೆರವೇರಬೇಕು. ಈಗ ಕೇಳಿ ಈ ಧಾರ್ಮಿಕ ಕಾರ್ಯ ನೆರವೇರಿಸುವ ಆಸ್ತಿಕರಿಗೆ ಸುಗ್ಗಿ ಹಬ್ಬವೆ.
ಅಷ್ಟಮಂಗಲದವರನ್ನು ಸುರಂಗ ಮಾರ್ಗ ಅಥವಾ ವಾಯುಮಾರ್ಗದಲ್ಲಿ ಸಂದರ್ಶಿಸಿ ತಮ್ಮ ಪರವಾಗಿ ಹೀಗೆ ಹೀಗೆ ಹೇಳಬೇಕು ಅಂತ ದೇವಾಲಯದ ಆಸ್ತಿಕರು ಮಾಡಿಕೊಳ್ಳುವ ಒಳ ಒಪ್ಪಂದವೂ ಇರುತ್ತದೆ. ಇಲ್ಲಿ ಸಾವಿರ ಸಾವಿರ, ಲಕ್ಷ ಲಕ್ಷ ಹರಿದಾಡುತ್ತದೆ.
ಇವನ್ನೆಲ್ಲ ಹೇಳಬೇಕಾದ ಅನಿವಾರ್ಯವೇನು ಅಂತ ಕೆಲವರು ಪ್ರಶ್ನಿಸಬಹುದು. ಅದು ತಪ್ಪಲ್ಲ. ಹೌದು, ಆದರೆ ದೇವರನ್ನು ನಿರಾಕರಿಸುವ ನಾಸ್ತಿಕವಾದಿ ವಿಚಾರವಂತರನ್ನೂವಾಚಾಮಗೋಚರ ಬಯ್ದು ಭಂಗಿಸುವ ಆಸ್ತಿಕ ಮನಸ್ಸುಗಳು ನಮ್ಮ ಸುತ್ತಮುತ್ತಲೂ ಕಾಣುತ್ತವೆ. ಒಂದು ಸತ್ಯವೆಂದರೆ ಈ ನಾಸ್ತಿಕವಾದಿಗಳು ಆಸ್ತಿಕವಾದಿಗಳಂತೆಅಪ್ರಾಮಾಣಿಕರಲ್ಲ, ಇವರು ದೇವರನ್ನು ನಂಬದಿದ್ದರೂ ಜೀವನ ಮೌಲ್ಯಗಳನ್ನುನಂಬುತ್ತಾರೆ. ಆದರೆ ಅದೇ ಆಸ್ತಿಕರು? ದೇವರನ್ನು ಮುಂದಿಟ್ಟುಕೊಂಡು ಸಾವಿರ ಸಾವಿರ ಸುಳ್ಳು ಹೇಳುತ್ತಾರೆ. ಜನರಲ್ಲಿ ಅಜ್ಞಾನವನ್ನು ತುಂಬುತ್ತಾರೆ. ಅಂಧ ಶ್ರದ್ಧೆಯನ್ನು ಬಿತ್ತುತ್ತಾರೆ. ದೇವರ ಹೆಸರಿನಲ್ಲಿ ವಿವಿಧ ರೀತಿಯಿಂದ ಜನರನ್ನು ವಂಚಿಸುತ್ತಾರೆ. ಶೋಷಣೆ ಮಾಡುತ್ತಾರೆ. ಪ್ರತಿಷ್ಠೆಮೆರೆಯುತ್ತಾರೆ. ಜಾತಿ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಸಮಾನತೆಯನ್ನು ತುಳಿಯುತ್ತಾರೆ. ಜನವಿರೋಧಿ ನಿಯಮವನ್ನು ಹೊಂದಿರುತ್ತಾರೆ. ಮಾನವೀಯ ಮೌಲ್ಯಗಳನ್ನು ಮೆಟ್ಟಿ ನಿಲ್ಲುತ್ತಾರೆ. ಹಾಗಾದರೆ ಆಸ್ತಿಕತೆ ಎಂದರೆ ಇದೇನಾ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *