ಇದು ಧರ್ಮದ ಅಂಧಕಾರವೆ?

ಧರ್ಮದ ಅಂಧಕಾರ ತೊಲಗುವುದ್ಯಾವಾಗ?
ನಮ್ಮೂರಿನಲ್ಲಿ ಒಬ್ಬ ಅಜ್ಜನಿದ್ದ.
ಶಿರಸಿಯ ಮಾರಿಕಾಂಬೆಯ ಪರಮ ಭಕ್ತ. ವರ್ಷಕ್ಕೆ ಮೂರುಬಾರಿಯಾದರೂ ಅಮ್ಮನವರ ದರ್ಶನಕ್ಕೆ ಹೋಗಿಬರುತ್ತಿದ್ದನಂತೆ. ಒಮ್ಮೆ ಇದೇ ಆರಿದ್ರ ಮಳೆಯ ಸಂದರ್ಭದಲ್ಲಿಯೇ ಶಿರಸಿಗೆ ಹೋಗಲು ಯಾವುದೋ ತೊಂದರೆಯುಂಟಾಗಿ ತನ್ನ ಗದ್ದೆಯ ಬದಿಯ ಅರಳಿ ಮರದ ಬುಡದಲ್ಲಿ ಮಾರಿಕಾಂಬೆಯ ಹೆಸರು ಹೇಳಿ ಒಂದು ಕಲ್ಲನ್ನು ಪ್ರತಿಷ್ಠಾಪಿಸಿದನಂತೆ.
ಅಲ್ಲೇ ವರ್ಷಕ್ಕೆರಡು ಬಾರಿ ಕೋಳಿಗಳನ್ನು ಬಲಿ ತೆಗೆದುಕೊಳ್ಳತೊಡಗಿದನಂತೆ. ಈಗ ಆ ಸ್ಥಳದಲ್ಲಿಯೇ ಪುಟ್ಟ ದೇವಾಲಯವೊಂದು ತಲೆಯೆತ್ತಿದೆ. ಪಾಪ ಅರಳಿ ಮರ! ಜನ ಈಗ ತಮ್ಮ ಹರಕೆಯ ಹೊರೆಯನ್ನೆಲ್ಲಾ ಅದಕ್ಕೆ ಹೊರಿಸುತ್ತಿದ್ದಾರೆ. ಕೈಗೆಟುಕುವಷ್ಟು ಎತ್ತರಕ್ಕೆ ಚೂರೂ ಜಾಗ ಬಿಡದಂತೆ ಮೊಳೆ ಹೊಡೆದಿದ್ದಾರೆ. ಇನ್ನೂ ಹೊಡೆಯುತ್ತಲೇ ಇದ್ದಾರೆ. ತಾವು ತಂದ ಗಂಟೆ, ತೊಟ್ಟಿಲುಗಳು, ವಿಧವಿಧದ ತಗಡುಗಳು, ಚಿತ್ರ ವಿಚಿತ್ರ ಕಲಾಕೃತಿಗಳೆಲ್ಲ ಮರದ ಬುಡದಲ್ಲಿ ಬಂದು ಸೇರಿವೆ. ಯಾರದೋ ದೇವರ ಮನೆಯಲ್ಲಿ ಒಂದು ಕಾಲದಲ್ಲಿ ಆರತಿ ಬೆಳಗಿಸಿಕೊಂಡಿದ್ದ ಗಾಜು ಒಡೆದ ಫೋಟೊಗಳು ವಿಮೋಚನೆ ಸಿಗದ ಕೈದಿಗಳಂತೆ ಬಿದ್ದುಕೊಂಡಿವೆ. ಇಂದೂ ಕೂಡ ನಮ್ಮೂರಿನಲ್ಲಿ ಏನಾದರೂ ಹಬ್ಬವಾದರೆ ಗದ್ದೆ ತಲೆಯ ಮಾರಮ್ಮನಿಗೂ ಒಂದು ಕೋಳಿ ಕೊಯ್ಯಲೇ ಬೇಕು.
ಭಾರತದಲ್ಲಿ ಒಂದು ಧರ್ಮವಿದೆ.
ಅವರು ದೇವರಿಗೆ ಎಷ್ಟು ನಿಷ್ಟರೆಂದರೆ ಪೂರ್ವಾಪರ ಯೊಚಿಸುವುದೇ ಇಲ್ಲ. ಪ್ರಶ್ನಿಸುವುದು ನಂತರದ ಮಾತು. ದೇವರೆಂಬುದು ಇಲ್ಲಿ ಪ್ರಶ್ನಾತೀತ. ಪ್ರಶ್ನಿಸಿದವ ಇಲ್ಲಿ ಪರಮ ಪಾಪಿ. ಚಪ್ಪಲಿ ಬಿಟ್ಟು, ಕೈ ಜೋಡಿಸಿ, ಕಣ್ಮುಚ್ಚಿದವ ಸದ್ಭಕ್ತ.
ಈ ವರ್ಗವನ್ನು ದೇವರ ಹೆಸರಿನಲ್ಲಿಯೇ ಸುಲಿಗೆ ಮಾಡಿಕೊಂಡು ಬದುಕುವ ಇನ್ನೊಂದು ವರ್ಗವೂ ಇಲ್ಲಿದೆ. ಈ ವರ್ಗ ಧರ್ಮವನ್ನೂ, ದೇವರನ್ನೂನಿಯಂತ್ರಿಸುತ್ತಿದೆ.ಸಮಾಜವನ್ನು ಸದಾ ತನ್ನ ಕಪಿಮುಷ್ಟಿಯಲ್ಲಿರಿಸಬಯಸುತ್ತದೆ. ಪುರಾಣದ ಶುದ್ಧ ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತದೆ. ಅದು ಎಲ್ಲಿಯವರೆಗೆಂದರೆ, ಮೊನ್ನೆ ಒಬ್ಬ ಪುರೋಹಿತನನ್ನು ಭೇಟಿಯಾಗಿದ್ದೆ.
“ಹರಿಜನರು ನಿಮಗೇಕೆ ನಿಷಿದ್ಧ? ಅವರಿಗೇಕೆ ಸಮಾನತೆಯನ್ನು ನೀಡಲು ಸಾಧ್ಯವಿಲ್ಲ?” ಎಂದು ಆತನನ್ನು ಕೇಳಿದೆ. ಅದಕ್ಕವನು, ‘ಹರಿಜನರು ವಿಶ್ವಾಮಿತ್ರನ ಕೋಪದಲ್ಲಿ ಜನಿಸಿದವರಂತೆ. ರಾಜಾ ಹರಿಶ್ಚಂದ್ರನ ಸತ್ವ ಸಾಧನೆಯನ್ನು ಪರೀಕ್ಷಿಸಲು ವಿಶ್ವಾಮಿತ್ರ ಚಾಂಡಾಲ ಕನ್ಯೆಯರನ್ನು ಸೃಷ್ಟಿಸಿದನಂತೆ. ಅವರು ತಮ್ಮ ನೃತ್ಯದ ಮೂಲಕ ಹರೀಶ್ಚಂದ್ರನನ್ನುಪ್ರಸನ್ನಗೊಳಿಸಿ ತಮ್ಮನ್ನುಮದುವೆಯಾಗಬೇಕೆಂದು ಪೀಡಿಸಿದರಂತೆ. ಆದರೆ ಹರೀಶ್ಚಂದ್ರ ಏಕಪತ್ನಿ ವೃತಸ್ತನಾಗಿದ್ದರಿಂದ ಅವರ ಬೇಡಿಕೆಯನ್ನು ತಿರಸ್ಕರಿಸಿದನಂತೆ. ಹರಿಶ್ಚಂದ್ರನೇ ಅವರ ಬೇಡಿಕೆಯನ್ನು ಮನ್ನಿಸಲಿಲ್ಲ, ಮಾನವರಾದ ನಮ್ಮಿಂದಾದೀತೇ? ಹರಿಜನರು ಯಾವಾಗಲೂ ತಮಗೆ ಸಿಗದಿರುವ ಸಂಗತಿಯನ್ನೇ ಬೇಡುವುದು.’ ಎಂದು ಮಾತು ಮುಗಿಸುತ್ತಾನೆ.
ಮೊನ್ನೆ ಮೊನ್ನೆ ದೇವರಿಗೆ ಮುಡಿಕೊಡುವ ಬಗ್ಗೆ ಟಿ.ವಿ.ಯಲ್ಲೊಬ್ಬ ಹೇಳುತ್ತಿದ್ದ. “ಕೂದಲುಗಳು ಸೌಂದರ್ಯದ ಸಂಕೇತ. ದೇವರಿಗೆ ಮುಡಿ ಕೊಡುವುದರ ಅರ್ಥ ತನ್ನ ಸೌಂದರ್ಯವನ್ನು ತ್ಯಾಗ ಮಾಡಿ ದೇವರಿಗೆ ಅರ್ಪಿಸಿದಂತೆ”. ಎಂತಹವರೂ ಮೆಚ್ಚಿ ಹೌದೆನ್ನುತ್ತಾ ತಲೆದೂಗುವಂತಿತ್ತು ಆತನ ನಿರೂಪಣೆ.
ದೇವಸ್ಥಾನಗಳಲ್ಲಿ ಇನ್ನಷ್ಟು ಜನ ಮುಡಿ ಕೊಡಲು ಕ್ಯೂ ನಿಲ್ಲಲು ಅಷ್ಟು ಸಾಕು. ಆದರೆ, ಆತ ಮುಡಿ ಕೊಟ್ಟ ಕೂದಲು ಮುಂದೇನಾಗುತ್ತದೆ, ಅದನ್ನು ಯಾವ ದೇಶಕ್ಕೆ ರಪ್ತು ಮಾಡಲಾಗುತ್ತದೆ, ಅದರಿಂದ ಬರುವ ಲಾಭವೆಷ್ಟು ಎಂಬುದನ್ನು ಅಪ್ಪಿತಪ್ಪಿಯೂ ಹೇಳಲಿಲ್ಲ. ಜನತೆಗೆ ಅದು ಗೊತ್ತಾಗುವುದೂ ಇಲ್ಲ. ಪ್ರಶ್ನಿಸಿದರಲ್ಲವೆ ಗೊತ್ತಾಗುವುದು. ಇವರು ಪ್ರಶ್ನಿಸುವುದಿಲ್ಲ ಎಂದಾದಮೇಲೆ ಗೊತ್ತಾಗುವುದಾದರೂ ಹೇಗೆ?
ನಾವೆಷ್ಟು ಮೂರ್ಖರೆಂದರೆ…..
ಮನುಷ್ಯರ ನಡುವಿನ ಸಂಬಂಧವನ್ನು ಚೂರೂ ಅರಿತುಕೊಳ್ಳುವ ವ್ಯವಧಾನ ತೋರಿಸದೆ ಸೀದಾ ದೇವರನ್ನು ಹುಡುಕ ಹೊರಡುತ್ತೇವೆ. ಮನುಷ್ಯರನ್ನು ಮರೆತುಬಿಡುತ್ತೇವೆ. ಜೊತೆಗೆ ಮಾನವೀಯತೆಯನ್ನೂ. ಪಕ್ಕದ ಮನೆಯವರು ಕೇಳಿದಾಗ ಸೇರಲ್ಲಿ ಅಳೆದು ತೂಗಿ ಅಕ್ಕಿಯನ್ನು ಕೊಡುವ ನಾವು, ನಮಗೆಂದೂ ಅರ್ಥವಾಗದ ನಾಲ್ಕು ಮಂತ್ರಗಳನ್ನು ಪಠಿಸಿದ ಪುರೋಹಿತನಿಗೆ ಕೇಜಿಗಟ್ಟಲೆ ದವಸಧಾನ್ಯಗಳನ್ನು ಅರ್ಪಿಸಿ ಕೃತಾರ್ಥರಾಗುತ್ತೇವೆ.
ಸಾಲ ಮಾಡಿಯಾದರೂ ಶನಿಕತೆ ಹಾಡಿಸುತ್ತೇವೆ. ಅವರು ಹೇಳುವ ಸುಳ್ಳುಗಳನ್ನು ನಂಬಿಕೊಂಡು ಕೂತುಬಿಡುತ್ತೇವೆ. ಹೊಸ ಮನೆಯ ಗೋಡೆಯ ಮೇಲೆ ಶುಭಲಾಭ ಎಂದು ಬರೆದು ಗೋಡೆಯ ತುಂಬೆಲ್ಲ ಜೇಡಿಯಲ್ಲೋ, ಕೆಮ್ಮಣ್ಣಿನಲ್ಲೋ ಕೈ ಅದ್ದಿ ಹಸ್ತ ಮುದ್ರಿಕೆ ಹಾಕುತ್ತೇವೆ. ನಮಗೊದಗಿರುವ ಅಸಮಾನತೆ, ಸಾಮಾಜಿಕ ಬೇಧಭಾವಗಳಿಗೆಲ್ಲಾ ‘ಥೂ! ಈ ಹಾಳು ಕುಲದಲ್ಲಿ ಯಾಕಾದರೂ ಜನಿಸಿದೆನೊ’ ಎಂದು ನಮ್ಮ ಕುಲಕ್ಕೇ ಉಗಿದುಕೊಳ್ಳುತ್ತೇವೆ.
ನಮ್ಮವರೇ ಯಾರಾದರೂ ಪುರೋಹಿತಶಾಹಿಗಳ ವಿರುದ್ಧ ದನಿ ಎತ್ತಿದರೆ. ಅವರನ್ನು ಮೆಟ್ಟಲು ಎಷ್ಟು ಬೇಕೊ ಅಷ್ಟು ಪ್ರಯತ್ನಿಸುತ್ತೇವೆ. ಆದರೆ, ತಮ್ಮ ಎಂಜಲನ್ನು ಕಂಡೇ ಹೇಸಿಗೆ ಪಟ್ಟು ಬೇರೆಯವರಿಂದ ತೊಳೆಸುವ ಜನರ ಎಂಜಲ ಎಲೆಗಳ ಮೇಲೆ, ಅದನ್ನೊಂದು ಪ್ರಸಾದ ಎಂದುಕೊಂಡು ಉರುಳಾಡುತ್ತೇವೆ. ಅವರು ಕಟ್ಟುವ ದೇವಾಲಯಗಳಿಗೆ ಇಟ್ಟಿಗೆಗಳಾಗುತ್ತೇವೆ. ಆದರೆ, ಗರ್ಭಗುಡಿಯ ಹೊರಗೇ ನಿಂತಿರುತ್ತೇವೆ, ಕೈ ಚಾಚಿ…
ನಮ್ಮಗಳ ಈ ಮನಸ್ಥಿತಿಯ ಲಾಭ ಪಡೆದೇ ಮೇಲ್ವರ್ಗದವರು ಬಲಗೊಳ್ಳುತ್ತಿದ್ದಾರೆ. ನಾವು ಮಾತ್ರ ಭಕ್ತಿಯಿಂದ ಕೈ ಮುಗಿದೇ ನಿಂತಿದ್ದೇವೆ. ಭಕ್ತಿಯಿಂದ ಎನ್ನುವುದಕ್ಕಿಂತ ಭಯದಿಂದ. ಇದೇ ಭಯವನ್ನು ಬಳಸಿಕೊಂಡೇ ಅವರು ಹೆಂಡತಿಯನ್ನು ಕಾಡಿಗಟ್ಟಿದವನನ್ನು ಆದರ್ಶ ಎಂದರು.
ಸ್ತ್ರೀಲೋಲ, ಲಂಪಟ, ಕಪಟಿಯನ್ನು ಹೀರೋ ಮಾಡಿದರು. ಒಂದಂತೂ ನಿಜ, ನಾವು ಇದನ್ನೆಲ್ಲಾ ಪ್ರಶ್ನಿಸಿ ತಿರುಗಿ ಬೀಳುವವರೆಗೆ ಇದು ಹೀಗೇ ಮುಂದುವರಿದುಕೊಂಡಿರುತ್ತದೆ. ಹಿಂದೆ ಇದ್ದ ಬೆತ್ತಲೆ ಸೇವೆ, ಸತಿ ಸಹಗಮನಗಳಂತಹ ಅಸಹ್ಯ ಪದ್ಧತಿಗಳು ನಾವು ತಿರುಗಿ ಬಿದ್ದಿದ್ದರಿಂದಲೇ ನಿಂತಿದ್ದು. ಮಡೆ ಸ್ನಾನ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಎಂದು ಪುರೋಹಿತಶಾಹಿಗಳು ಅದನ್ನು ಉಳಿಸಿಕೊಳ್ಳುವುದಾದರೆ, ಸತಿ ಸಹಗಮನ ಪದ್ಧತಿಯನ್ನು ಏಕೆ ನಿಲ್ಲಸಲಾಯಿತು? ಅದೂ ಪುರಾಣ ಕಾಲದಿಂದಲೂ ಚಾಲ್ತಿಯಲ್ಲಿತ್ತಲ್ಲವೇ?
ಒಂದಂತೂ ನಿಜ ಹಿಂದುಳಿದವರ, ದಲಿತರ ಗುಲಾಮಗಿರಿಯ ಮೂಲ ಇರುವುದು ಇಲ್ಲಿಯೇ. ಆದರೆ ನಮಗದು ಅರ್ಥವಾಗುವುದಿಲ್ಲ. ನಾವು ಅರ್ಥ ಮಾಡಿಕೊಳ್ಳುವ ಗೊಡವೆಗೂ ಹೋಗುವುದಿಲ್ಲ. ಧರ್ಮಶಾಸ್ತ್ರವನ್ನು ಬರೆದ ಮನುವಿನಂತಹ ಪರಮ ಧರ್ಮಾಂಧರು ಇಂದಿಗೂ ಇದ್ದಾರೆ. ನಾವು ಈಗಲೂ ಅವರಪಾದಸೇವೆಯೇ ಪರಮಕರ್ತವ್ಯವೆಂದು, ಪಾದ ತೊಳೆದು ನೀರು ಕುಡಿಯುತ್ತಲೇ, ಸಾವಿನ ನಂತರದ ಜೀವನಕ್ಕೆ ಪುಣ್ಯದ ಗಂಟು ಕಟ್ಟಿಕೊಳ್ಳುತ್ತಿದ್ದೇವೆ.
ಎಲ್ಲಿಯವರೆಗೆ ನಾವು ಹೀಗೆ ಇರುತ್ತೇವೋ ಅಲ್ಲಿಯವರೆಗೆ ವ್ಯವಸ್ಥೆ ಹೀಗೆಯೇ ಇರುತ್ತದೆ. ಬದಲಾವಣೆ ನಮ್ಮೊಳಗಿಂದಲೇ ಶುರುವಾಗಬೇಕು. ಚಿಂತನೆಗೆ ನಾವೇ ಒಳಗಾಗಿ ಪರಿಹಾರ ಕಂಡುಕೊಳ್ಳಬೇಕು. ಧರ್ಮದ ಭಯದ ಕನ್ನಡಕ ತೆಗೆದು ಜಗತ್ತನ್ನೊಮ್ಮೆ ನೋಡಿದರೆ ಸಾಕು, ಇಲ್ಲಿ ನಡೆಯುತ್ತಿರುವ ಅನಾಚಾರಗಳು ಗೊತ್ತಾಗುತ್ತವೆ. ಹಲವಾರು ದೇವಾಲಯಗಳು ವ್ಯಾಪಾರಿ ಕೇಂದ್ರಗಳಾಗಿಯೂ ಕಾಣುತ್ತವೆ. ಸ್ವಯಂ ಘೋಷಿತ ದೇವಮಾನವರ ವೇಷ ಕಳಚಿ ಬೀಳುತ್ತದೆ. ಇನ್ನಷ್ಟು ಧರ್ಮದ ಅಫೀಮು ಮಾರುವವರು ಜೈಲು ಸೇರುತ್ತಾರೆ.
ಇದಕ್ಕೆಲ್ಲ ನಾವು ಮಾಡಬೇಕಾದದ್ದಿಷ್ಟೇ, ಒಮ್ಮೆ ಧರ್ಮದ ನಶೆಯಿಂದ ಹೊರಬಂದುವ್ಯವಸ್ಥೆಯನ್ನು ಗಮನಿಸಿ ಪ್ರತಿಕ್ರಿಯಿಸಿದರೆ ಸಾಕು. ಎಲ್ಲವನ್ನು ಅಲ್ಲದಿದ್ದರೂ ಕೆಲವನ್ನಾದರೂ ಪ್ರಶ್ನಿಸುವ ಮನೋಸ್ಥಿತಿ ನಮ್ಮೊಳಗೆ ಹುಟ್ಟಿಕೊಂಡರೆ ಸಾಕು. ಆದರೆ ಅಂಥದ್ದೊಂದು ಮನೋಭಾವ ನಮ್ಮೊಳಗೆ ಹುಟ್ಟಿಕೊಳ್ಳುವುದು ಯಾವಾಗ?
ನನಗನ್ನಿಸುತ್ತದೆ, ಆ ಮನೋಭಾವ ನಮ್ಮೊಳಗೆ ಉದಯಿಸಿದ ನಂತರ ನಮ್ಮ ವ್ಯವಸ್ಥೆ ಹೀಗಿರುವುದಿಲ್ಲ.
-ಅವಿನಾಶ್ ಹೊಳೆಮರೂರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *